ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆ ಮನೆಗೆ ನುಗ್ಗಿದ ನೀರು, ಜನರ ಪರದಾಟ ಚಿಕ್ಕಪೇಟೆ ಸುಲ್ತಾನ್ ಪೇಟೆ ರಸ್ತೆಯಲ್ಲಿ ತೇಲುತ್ತಿರುವ ವಾಹನಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಿಕ್ಕಪೇಟೆ ರಸ್ತೆಗಳಿಗೆ ನೀರು ನುಗ್ಗಿದೆ. ಚಿಕ್ಕಪೇಟೆ ಸುಲ್ತಾನ್ ಪೇಟೆ ರಸ್ತೆಯಲ್ಲಿ ಮಳೆ ನೀರಿನಲ್ಲಿ ವಾಹನಗಳು ತೇಲುತ್ತಿವೆ. ಮಳೆಯಿಂದ ರಾಜಕಾಲುವೆ ತುಂಬಿ ಹರಿದು ಮಾಗಡಿ ರಸ್ತೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಹೊರ ಹಾಕಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ರಾಜಧಾನಿ ಅಲ್ಲದೇ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಏ.14ರಂದು ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ ದಕ್ಷಿಣ ಕರ್ನಾಟಕ(South Karnataka)ಭಾಗದ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೇಸಿಗೆ ಮಳೆ ಉತ್ತಮವಾಗಿ ಸುರಿದಿದ್ದು ಕಾಲೇಜು ವಿದ್ಯಾರ್ಥಿಗಳಿಬ್ಬರು ಸಿಡಿಲಿಗೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯಿಂದ ವರದಿಯಾಗಿತ್ತು.

ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಹೋಬಳಿಯ ಬಸವನಪುರ ಗ್ರಾಮದಲ್ಲಿ ಬುಧವಾರ ಸಂಜೆ ಕಾಲೇಜು ಮುಗಿಸಿ ಮನೆಗೆ ವಾಪಸ್‌ ಬರುತ್ತಿದ್ದ ವೇಳೆ ಮಳೆಯಿಂದ(Rain) ರಕ್ಷಣೆ ಪಡೆಯಲೆಂದು ಪ್ರಯಾಣಿಕರ ತಂಗುದಾಣದಲ್ಲಿ ರಕ್ಷಣೆ ಪಡೆದಿದ್ದ ವಿದ್ಯಾರ್ಥಿಗಳಿಬ್ಬರು(Students) ಸಿಡಿಲು(Lightning Strikes) ಬಡಿದು ಮೃತಪಟ್ಟಿದ್ದರು(Death). ಉದಯ್‌ ಕುಮಾರ್‌(24) ಮತ್ತು ದರ್ಶನ್‌ (19) ಮೃತಪಟ್ಟವರು. ಹಾಸನ ಜಿಲ್ಲೆಯಲ್ಲಿ ಮಳೆ ಅಷ್ಟಾಗಿ ಬಾರದಿದ್ದರೂ ಗಾಳಿ ಮತ್ತು ಸಿಡಿಲಿನ ಆರ್ಭಟವೇ ಹೆಚ್ಚಾಗಿತ್ತು.

Bengaluru Rain: ರಾಜಧಾನಿಯಲ್ಲಿ ಮಳೆ ಆರ್ಭಟ... ಬಿಸಿಲಿನ ಝಳ ತಣಿಸಲು ಬೇಕಿತ್ತು!

ಇನ್ನುಳಿದಂತೆ ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲ ಭಾಗಗಳಲ್ಲಿ ಗುಡುಗು, ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಭರ್ಜರಿ ಮಳೆಯಾಗಿದ್ದು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿವೆ. ಅನೇಕ ಕಡೆ ಮರಗಳು ಬಿದ್ದು ಬೈಕ್‌, ಕಾರುಗಳಿಗೆ ಹಾನಿಯಾಗಿವೆ. ಶಿವಪುರದಲ್ಲಿ ಶೆಡ್‌ ನಾಶವಾಗಿ 10 ಮಂದಿಯಿದ್ದ ಶಿಳ್ಳೆಕ್ಯಾತರ ಕುಟುಂಬವೊಂದು ಅಕ್ಷರಶಃ ಬೀದಿಗೆ ಬಿದ್ದಿದೆ.

Karnataka Rains: ಕರ್ನಾಟಕದ ಹಲವೆಡೆ ಭಾರೀ ಮಳೆ: ಸಿಡಿಲು ಬಡಿದು ಇಬ್ಬರ ಸಾವು
ಚಾಮರಾಜನಗರದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಕಟಾವು ಮಾಡದಿದ್ದ ಈರುಳ್ಳಿ ಬೆಳೆಗಾರರಿಗೆ ಈ ಮಳೆ ಕಣ್ಣೀರು ತರಿಸಿದ್ದು ಬೆಳೆ ಕೈ ತಪ್ಪುವ ಆತಂಕ ಎದುರಾಗಿದೆ. ಕೊಡಗಿನ ಸೋಮವಾರಪೇಟೆಯ ಕೆಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಂಪಲ್ಲಿ ಕ್ರಾಸ್‌ ಬಳಿ ಇರುವ ಮಾಡಪಲ್ಲಿ ರೈತನ(Farmer) ಜಮೀನೊಂದರಲ್ಲಿರುವ ತೆಂಗಿನ ಮರವೊಂದರ ಮೇಲೆ ಬುಧವಾರ ಸಂಜೆ ಮಳೆ ಸುರಿದಾಗ ಅಕಸ್ಮಿಕವಾಗಿ ಸಿಡಿಲು ಬಡಿದು, ಮರ ಹೊತ್ತಿ ಉರಿದ ಘಟನೆ ನಡೆದಿದೆ.