ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೋಮನಹಳ್ಳಿ ಉಪಕೇಂದ್ರ ವ್ಯಾಪ್ತಿಯ ಐಬೆಕ್ಸ್ ಫ್ಯಾಕ್ಟರಿ, ರಾವುಗೋಡ್ಲು, ಕಗ್ಗಲೀಪುರ ಸೇರಿ ಹಲವೆಡೆ ಬುಧವಾರ ವಿದ್ಯುತ್ ಕಡಿತವಾಗಲಿದೆ.

ಬೆಂಗಳೂರು (ಡಿ.09): ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ, ನಾಳೆ ಬುಧವಾರ (ಡಿ.10) ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

220/66/11 ಕೆವಿ ಸೋಮನಹಳ್ಳಿ ಉಪಕೇಂದ್ರದ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವ ಕಾರಣ, ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಕೆಪಿಟಿಸಿಎಲ್ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ (BESCOM) ಪ್ರಕಟಣೆಯಲ್ಲಿ ತಿಳಿಸಿವೆ. ಜೊತೆಗೆ, ಈ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರು ವಿದ್ಯುತ್ ನಿಗಮದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು

ಸೋಮನಹಳ್ಳಿ ಉಪಕೇಂದ್ರ ವ್ಯಾಪ್ತಿಗೆ ಬರುವ ಈ ಕೆಳಗಿನ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ:

ಪ್ರಮುಖ ಪ್ರದೇಶಗಳು ಮತ್ತು ಕ್ಯಾಂಪ್‌ಗಳು: ಐಬೆಕ್ಸ್ ಫ್ಯಾಕ್ಟರಿ, ಸಿಆರ್‌ಪಿಎಫ್ ಕ್ಯಾಂಪ್ ಗೇಟ್, ಎಡಿಫೈ ಸ್ಕೂಲ್ ಸೋಮನಹಳ್ಳಿ, ಯೋಗವನ ಬೇಟ, ಅವಸರಲ ಫ್ಯಾಕ್ಟರಿ.

ಗ್ರಾಮಗಳು ಮತ್ತು ದೊಡ್ಡಿಗಳು: ರಾವುಗೋಡ್ಲು, ನೆಟ್ಟಿಗೆರೆ, ಗಿರಿಗೌಡನದೊಡ್ಡಿ, ಮುತ್ತುರಾಯನಪುರ, ಇನೋರದೊಡ್ಡಿ, ಸೋನಾರೆದೊಡ್ಡಿ, ನೌಕಲ್ಪಾಳ್ಯ, ಗುಡಿಪಾಳ್ಯ, ನಾಗನವಕನಹಳ್ಳಿ, ಮಲ್ಲಿಪಾಳ್ಯ, ತಾಸುದೇವರಪಾಳ್ಯ, ವಾಸುದೇವರಪಾಳ್ಯ, ಗೊಲ್ಲರಪಾಳ್ಯ, ನಲ್ಲಕನದೊಡ್ಡಿ, ಕೆರೆಚೂದರ್ನಹಳ್ಳಿ, ಸಾಧನಪಾಳ್ಯ, ಹೊಸದೊಡ್ಡಿ, ನೆಲಗುಳಿ, ಲಿಂಗಪ್ಪರನದೊಡ್ಡಿ.

ಇತರೆ ಪ್ರದೇಶಗಳು: ಗುಂಡಾಂಜನೇಯ ಟೆರನ್ಪಲ್, ಗೊಟ್ಟಿಗೆಹಳ್ಳಿ, ಗಾಂಧಿನಗರ, ಪಟ್ಟರೆಡ್ಡಿಪಾಳ್ಯ, ವೀರಸಾಂದ್ರ, ಜಟ್ಟಿಪಾಳ್ಯ, ತಿಟ್ಟಹಳ್ಳಿ, ಗಂಗಕನಗೊಡ್ಡಿ, ಬೋಕಿಪುರ, ತೋಕತಿಮ್ಮನದೊಡ್ಡಿ, ಏಡುಮಾಡು, ರಾವರದೊಡ್ಡಿ, ತಾತಗುಪ್ಪೆ, ಗಡಿಪಾಳ್ಯ, ಮುಕ್ಕೋಡ್ಲು, ಮುನಿನಗರ, ಹಾಗೂ ಕಗ್ಗಲೀಪುರ ಸುತ್ತಮುತ್ತಲಿನ ಪ್ರದೇಶಗಳು.

ಕೆಪಿಟಿಸಿಎಲ್ ಅಧಿಕಾರಿಗಳು ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳ ನಿವಾಸಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ವಿದ್ಯುತ್ ವ್ಯತ್ಯಯಕ್ಕೆ ಸಹಕರಿಸಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಕಾಮಗಾರಿಯು ನಿಗದಿತ ಸಮಯಕ್ಕಿಂತ ಬೇಗ ಪೂರ್ಣಗೊಂಡರೆ, ವಿದ್ಯುತ್ ಪೂರೈಕೆಯನ್ನು ಮುಂಚಿತವಾಗಿ ಪುನರಾರಂಭಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಗ್ರಾಹಕರು ವಿದ್ಯುತ್‌ಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಬೆಸ್ಕಾಂ ಗ್ರಾಹಕ ಸಹಾಯವಾಣಿ 1912 ಗೆ ಕರೆ ಮಾಡಬಹುದು.