ವೆಬ್‌ಸೈಟ್‌ನಲ್ಲಿ ದಾಖಲೆ ತಿದ್ದಿ 155 ಸೈಟ್‌ ಮಾರಿದ..!

ಆಸ್ತಿಗಳ ನೋಂದಣಿ ಮಾಡುವ ‘ಕಾವೇರಿ’ ವೆಬ್ ಸೈಟ್‌ನಲ್ಲಿ ಮಾಹಿತಿ ತಿದ್ದುಪಡಿಗೊಳಿಸಿ ಐದು ಎಕರೆಯಲ್ಲಿ 155 ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಬುಧ ವಾರ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಜಾಲಹಳ್ಳಿ ನಿವಾಸಿ ಸೋಮಣ್ಣ ಬಂಧಿತನಾಗಿದ್ದು, ಆರೋಪಿಯಿಂದ ಅಕ್ರಮ ಭೂ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

did correction in website sold 155 sites

ಬೆಂಗಳೂರು(ನ.07): ಆಸ್ತಿಗಳ ನೋಂದಣಿ ಮಾಡುವ ‘ಕಾವೇರಿ’ ವೆಬ್ ಸೈಟ್‌ನಲ್ಲಿ ಮಾಹಿತಿ ತಿದ್ದುಪಡಿಗೊಳಿಸಿ ಐದು ಎಕರೆಯಲ್ಲಿ 155 ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಬುಧ ವಾರ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಜಾಲಹಳ್ಳಿ ನಿವಾಸಿ ಸೋಮಣ್ಣ ಬಂಧಿತನಾಗಿದ್ದು, ಆರೋಪಿಯಿಂದ ಅಕ್ರಮ ಭೂ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಕಾವೇರಿ ವೆಬ್‌ಸೈಟ್‌ನಲ್ಲಿ ದಾಖಲೆಗಳನ್ನು ತಿರುಚಿ ಕಂದಾಯ ನಿವೇಶನಗಳ ಅಕ್ರಮ ಪರಭಾರೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದಾಗ ಸೋಮಣ್ಣನ ಭಾನಗಡಿ ಬೆಳಕಿಗೆ ಬಂದಿತ್ತು.

ಮೋದಿ ಕಾರ್ಯಕ್ರಮದ ಮೇಲೆ ದಾಳಿಗೆ ಪಾಕ್‌ ಉಗ್ರರ ಸಂಚು?

ಈ ಕೃತ್ಯ ಬಯಲಾದ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಾಲಹಳ್ಳಿಯ ಸೋಮಣ್ಣ, ಎವರ್ ಗ್ರೀನ್ ಎನ್‌ಕ್ಲೇವ್ ಸಂಸ್ಥೆ ಮುಖ್ಯಸ್ಥನಾಗಿದ್ದಾನೆ. ನೆಲಮಂಗಲ ಸಮೀಪದ ಹುಸ್ಕೂರು ಗ್ರಾಮದಲ್ಲಿ ರೈತರೊಬ್ಬರಿಂದ ತಲಾ ಎಕರೆಗೆ ₹70 ಲಕ್ಷದಂತೆ ನೀಡಿ 5 ಎಕರೆ ಕೃಷಿ ಜಮೀನು ಖರೀದಿಸಿದ. ಆದರೆ ಭೂ ಪರಿವರ್ತನೆ ಮಾಡಿಸದೆ ಲೇಔಟ್ ಅಭಿವೃದ್ಧಿಪಡಿಸಿದ್ದ.

ಲಕ್ಷಾಂತರ ರುಪಾಯಿ ಕೈ ಬದಲಾಗಿದೆ:

ಅನಂತರ ಅದರಲ್ಲಿ ವಿವಿಧ ಅಳತೆಯ 155 ನಿವೇಶನಗಳನ್ನು ವಿಂಗಡಿಸಿ, ಪ್ರತಿ ನಿವೇಶನದ ಅಳತೆ ಅನುಸಾರ ದರ ನಿಗದಿಪಡಿಸಿದ. ಬಳಿಕ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿ ಯಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಸಿದ್ದ. ಕೆಲವು ದಿನಗಳ ಬಳಿಕ ಕಾವೇರಿ ವೆಬ್ ಸೈಟ್‌ನಲ್ಲಿ ಆ ನಿವೇಶನಗಳ ಮಾಹಿತಿಯನ್ನು ತಿರುಚಿ ಅಗ್ರಿಮೆಂಟ್‌ಗಳನ್ನು ಸೇಲ್ ಡೀಡ್ ಆಗಿ ಪರಿವರ್ತನೆ ಮಾಡಿದ್ದ. ಇದರಲ್ಲಿ ಲಕ್ಷಾಂತರ ಹಣ ಕೈ ಬದಲಾಗಿದೆ. ಅಲ್ಲದೆ, ನಿವೇಶನಗಳ ಕರಾರು ಪತ್ರಕ್ಕೆ ಸಹಿ ಮಾಡದೆ ಆತ, ರೈತನಿಂದಲೇ ಗ್ರಾಹಕರು ನೇರವಾಗಿ ನಿವೇಶನ ಖರೀದಿಸಿದ್ದಾರೆ ಎಂಬಂತೆ ಬಿಂಬಿಸಿ ವ್ಯವಹರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಹುಸ್ಕೂರು ಸಮೀಪ ದಾಸನಪುರ, ಮಾದ ನಾಯಕನಹಳ್ಳಿ ಹಾಗೂ ನೆಲಮಂಗಲದ ಸಬ್ ರಿಜಿಸ್ಟ್ರಾರ್ ಕಚೇರಿಗಳಿದ್ದರೂ ಸೋಮಣ್ಣ, ತನ್ನ ಭೂ ವ್ಯವಹಾರವನ್ನು ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಸಿರುವುದು ಅನುಮಾನ ಮೂಡಿಸಿದೆ. ಈ ಭೂಮಿ ಪರಭಾರೆ ಸಹ 2018ರ ಡಿಸೆಂಬರ್ ೧೮ರಲ್ಲಿ ನಡೆದಿದ್ದು ಮತ್ತೊಂದು ಗುಮಾನಿಗೆ ಎಡೆ ಮಾಡಿಕೊಟ್ಟಿದೆ. ಆದರೆ ತಾನು ಪರಿಚಿತ ಸ್ಟಾಂಪ್ ವೆಂಡರ್ ಮೂಲಕ ಸೇಲ್ ಡೀಡ್ ಮಾಡಿರುವುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಆದರೆ ಹಿರಿಯ ಅಧಿಕಾರಿಗಳ ಸಹಕಾರವಿ ಲ್ಲದೆ ಆತ ಈ ಪ್ರಮಾಣದ ನಿವೇಶನ ಮಾರಾಟ ಸಾಧ್ಯ ವಿಲ್ಲ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

 

ಇತ್ತೀಚೆಗೆ ಕಾವೇರಿ ವೆಬ್ ಸೈಟ್ ತಿರುಚಿದ ಪ್ರಕರಣ ಸಂಬಂಧ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಯಿತು. ಆ ವೇಳೆ ಸೋಮಣ್ಣ ಅಕ್ರಮ ಕರಾರು ವ್ಯವಹಾರ ಕುರಿತು ಮಾಹಿತಿ ಸಿಕ್ಕಿತು. ಆದರೆ ಕೃತ್ಯ ಬೆಳಕಿಗೆ ಬಂದ ನಂತರ ಕೈಗೆ ಸಿಗದೆ ಓಡಾಡುತ್ತಿದ್ದ ಆತ ಕೊನೆಗೆ ಬುಧವಾರ ಸಂಜೆ ಬಲೆಗೆ ಬಿದ್ದ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ೭ ದಿನಗಳ ಕಾಲ ತನಿಖೆ ಸಲುವಾಗಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಎರಡು ಮೂರು ದಿನಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಪರಿಹಾರ ಜಮೆ’

11 ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಂಕಷ್ಟ ಕಾವೇರಿ ವೆಬ್‌ಸೈಟ್ ತಿರುಚಿ ಕಂದಾಯ ನಿವೇಶನ ಅಕ್ರಮ ಪರಭಾರೆ ಪ್ರಕರಣ ಸಂಬಂಧ ಸೋಮಣ್ಣ ಬಂಧನ ಬೆನ್ನಲ್ಲೆ ಮತ್ತಷ್ಟು ರಿಯಲ್ ಎಸ್ಟೇಟ್ ಉದ್ಯಮಿ ಗಳಿಗೆ ಸಿಸಿಬಿ ತನಿಖೆ ಬಿಸಿ ತಟ್ಟಿದೆ. ಈ ಭೂ ಅಕ್ರಮದಲ್ಲಿ ಪಾತ್ರವಹಿಸಿದ್ದಾರೆ ಎನ್ನಲಾದ ಬೆಂಗಳೂರಿನ ೧೨ ಮಂದಿ ಡೆವಲಪರ್ಸ್‌ಗಳು ಹೆಸರಿನ ಪಟ್ಟಿ ತಯಾರಿಸಲಾಗಿತ್ತು. ಅದರಲ್ಲಿ ಒಬ್ಬಾತ ಸಿಕ್ಕಿ ಬಿದ್ದಿದ್ದು, ಇನ್ನುಳಿದ 11 ಮಂದಿಗೆ ಹುಡುಕಾಟ ನಡೆದಿದೆ ಎಂದು ಸಿಸಿಬಿ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

Latest Videos
Follow Us:
Download App:
  • android
  • ios