ಮೋದಿ ಕಾರ್ಯಕ್ರಮದ ಮೇಲೆ ದಾಳಿಗೆ ಪಾಕ್ ಉಗ್ರರ ಸಂಚು?
ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ಮೇಲೆ ಉಗ್ರರ ಕರಿನೆರಳು | ನ.9ಕ್ಕೆ ಪಂಜಾಬ್‌ನಲ್ಲಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ | ಡೇರಾಬಾಬಾ ನಾನಕ್ ಮಂದಿರ ಬಳಿ ಉಗ್ರರ ಪ್ರವೇಶದ ವರದಿ
ನವದೆಹಲಿ (ನ. 07): ಬಹುನಿರೀಕ್ಷಿತ ಕರ್ತಾರ್‌ಪುರ್ ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನ.9ರಂದು ಚಾಲನೆ ನೀಡಲು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಈ ಕಾರ್ಯಕ್ರಮಕ್ಕೆ ಉಗ್ರರ ದಾಳಿಯ ಭೀತಿ ಎದುರಾಗಿದೆ. ಪಾಕಿಸ್ತಾನ ಗಡಿ ಮೂಲಕ ಉಗ್ರರು ಒಳ ನುಸುಳಿದ್ದು, ದೇರಾಬಾಬಾ ನಾಯಕ್ ದೇಗುಲದ ಬಳಿಯೇ ಅವಿತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ದಾಳಿ ಎಚ್ಚರಿಕೆ ಬೆನ್ನಲ್ಲೇ ಭದ್ರತೆ ಇನ್ನಷ್ಟು ಬಿಗಿಗೊಳಿಸಲಾಗಿದೆ.
ಕೂಡಂಕುಲಂ ಜತೆಗೆ ಇಸ್ರೋ ಕಂಪ್ಯೂಟರ್ ಕೂಡಾ ಹ್ಯಾಕ್?
ಮುಡ್ರ್ಕಿಕೆ, ಶಾಕುರ್ ಘರ್ ಹಾಗೂ ನರ್ವಾಲ್‌ನಲ್ಲಿ ಉಗ್ರ ತರಬೇತಿ ಶಿಬಿರಗಳಿದ್ದು, ಹಲವು ಮಂದಿಗೆ ತರಬೇತಿ ನೀಡಲಾಗುತ್ತಿದೆ. ಇಖ್ಲಾಸ್‌ಪುರ ಹಾಗೂ ಶಾಕುರ್ ಘರ್‌ನಲ್ಲಿ ಉಗ್ರರ ಚಲನವಲನಗಳ ಬಗ್ಗೆ ಮಾಹಿತಿ ಬಂದಿದೆ. ಅಲ್ಲದೇ ದರ್ಬಾರ್ ಸಾಹಿಬ್ ಇರುವ ಪಂಜಾಬ್ ಪ್ರಾಂತ್ಯದ ನರ್ವಾಲ್ ಜಿಲ್ಲೆಯಲ್ಲಿ ಉಗ್ರ ಶಿಬಿರಗಳನ್ನು ಗುಪ್ತಚರ ಇಲಾಖೆ ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಡೇರಾ ಬಾಬಾ ನಾನಕ್‌ನಲ್ಲಿ ಭದ್ರತೆ ಮತ್ತಷ್ಟುಬಿಗಿಗೊಳಿಸಲಾಗಿದ್ದು, ಅಲ್ಲಿನ ಸ್ಥಿತಿಗತಿಯ ಬಗ್ಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಬಿಎಸ್‌ಎಫ್ ತಿಳಿಸಿದೆ.
ಕ್ಯಾಸಿಂಗ್ ಎಚ್ಚರಿಕೆ ನಿಜವಾಯ್ತಾ?: ಕರ್ತಾರ್‌ಪುರ್ ಹೆಸರಲ್ಲಿ ಪಾಕ್ ಮೋಸ?
ನವೆಂಬರ್ 9ರಂದು ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ನಡೆಯಲಿದ್ದು, ಪಂಜಾಬ್‌ನ ಗುರುದಾಸ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ನಡೆಸಿ ಭಾಷಣ ಮಾಡಲಿದ್ದಾರೆ. ಅತ್ತ ನರ್ವಾಲ್ ಜಿಲ್ಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾರಿಡಾರ್ ಲೋಕಾರ್ಪಣೆಗೊಳಿಸಲಿದ್ದಾರೆ.