ಮಧ್ಯರಾತ್ರಿ ಪ್ರೇಮಿಯ ಮನೆಗೆ ಬಂದ ಯುವತಿ ಆತನಿಗೆ ಶಾಕ್ ನೀಡಿದ್ದಾಳೆ. ಯೋಗೆ ಎಷ್ಟು ಬಾರಿ ಬಂದಿದ್ದೀವಿ ಎಂದು ಪ್ರಶ್ನಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು: ಇಂದು ಸಾಮಾಜಿಕ ಜಾಲತಾಣದಲ್ಲಿ ಒಯೋ ಹೋಟೆಲ್‌ಗಳ ಬಗ್ಗೆ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಎಕ್ಸ್ ಖಾತೆಯಲ್ಲೊಂದು ವಿಡಿಯೋ ಮುನ್ನಲೆಗೆ ಬಂದಿದ್ದು, ಮಧ್ಯರಾತ್ರಿ ಪ್ರೇಮಿಯ ಮನೆಗೆ ಬಂದ ಯುವತಿ ಆತನಿಗೆ ಶಾಕ್ ನೀಡಿದ್ದಾಳೆ. ಈ ವಿಡಿಯೋ ನೋಡಿದ ಗಂಡೈಕ್ಳು,

#BoycottOYO ಎಂದು ಕಮೆಂಟ್ ಮಾಡುತ್ತಿದ್ದಾರೆ. Carpediem (@as__singh) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಮಧ್ಯರಾತ್ರಿ ಗಂಟುಮೂಟೆ ಸಹಿತ ಬಂದ ಗೆಳತಿಯನ್ನು ನೋಡಿ ಶಾಕ್ ಆದ ಯುವಕ ಎರಡೂ ಕೈಗಳನ್ನು ಮುಗಿದು ಮನವಿ ಮಾಡಿಕೊಂಡಿದ್ದಾನೆ. 1.2 ಮಿಲಿಯನ್ ವ್ಯೂವ್ ಪಡೆದುಕೊಂಡಿರುವ ಈ ವಿಡಿಯೋಗೆ ಹಲವರು ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು, ಆಗ ಬಂದ್ರೆ ಓಕೆ.. ಈಗ ಬಂದ್ರೆ ಶಾಕ್ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರೇಯಸಿಯನ್ನು ಒಯೋಗೆ ಕರೆದುಕೊಂಡು ಹೋಗುವ ಮುನ್ನ ಯೋಚಿಸಬೇಕಿತ್ತು. ಈಗ ಕೈ ಮುಗಿದ್ರೆ ಏನು ಪ್ರಯೋಜನ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಯುವಕ ಅಲ್ಲಿಂದ ಹೋದ ಬಳಿಕ ಮುಂದೇನಾಯ್ತು ಎಂದು ಕೇಳಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಯುವತಿಯೊಬ್ಬಳು ಮಧ್ಯರಾತ್ರಿ ತನ್ನ ಪ್ರಿಯಕರ ವಾಸವಾಗಿರುವ ಕೋಣೆಗೆ ಬರುತ್ತಾಳೆ. ನಿಮ್ಮ ಫೋನ್ ಎಲ್ಲಿದೆ? ನಾನು ಎಷ್ಟು ಸಮಯದಿಂದ ನಿಮಗೆ ಕಾಲ್ ಮಾಡ್ತಿದ್ದೀನ ಎಂದು ಯುವಕನನ್ನು ಪ್ರಶ್ನೆ ಮಾಡುತ್ತಾಳೆ. ಇದಕ್ಕೆ ಯುವಕ, ಬಾತ್‌ರೂಮ್‌ನಲ್ಲಿದ್ದೆ. ಈ ಮಧ್ಯರಾತ್ರಿ ಬ್ಯಾಗ್ ಜೊತೆ ಇಲ್ಲಿಗ್ಯಾಕೆ ಬಂದೆ ಎಂದು ಪ್ರಶ್ನಿಸುತ್ತಾನೆ. ಮೊದಲು ಈ ಬ್ಯಾಗ್‌ ಒಳಗೆ ಇರಿಸು. ಪೋಷಕರು ನನ್ನನ್ನು ಮನೆಯಿಂದ ಹೊರಗೆ ಹಾಕಿದ್ರು. ಹಾಗಾಗಿ ಮನೆಯಿಂದ ನೇರವಾಗಿ ಇಲ್ಲಿಗೆ ಬಂದೆ. ನಾನೀಗ ಗರ್ಭಿಣಿ ಎಂಬ ವಿಷಯವನ್ನು ಯುವತಿ ಹೇಳುತ್ತಾಳೆ.

ಪ್ರೇಯಸಿ ಗರ್ಭಿಣಿ ಎಂಬ ವಿಷಯ ತಿಳಿಯುತ್ತಲೇ ಗಾಬರಿಯಾಗುವ ಯುವಕ, ಅದೇಗೆ ನಾನು ಏನು ಮಾಡಿಲ್ಲವಲ್ಲ ಅಂತಾನೆ. ಇದಕ್ಕೆ ಯುವತಿ, ನನ್ನಿಂದ ನಾನೇ ಗರ್ಭಿಣಿ ಆದೆನಾ? ಸುಳ್ಳು ಹೇಳಬೇಡ. ನಾನು ಎಷ್ಟು ಬಾರಿ ನಿನ್ನೊಂದಿಗೆ ಒಯೊಗೆ ಬಂದಿದ್ದೀನಿ. ನನ್ನ ಬಳಿ ಎಲ್ಲಾ ವಿಡಿಯೋಗಳಿವೆ ಅಂತ ಹೇಳುತ್ತಾಳೆ. ವಿಡಿಯೋಗಳಿವೆ ಅಂತ ಹೇಳುತ್ತಲೇ ಯುವಕನ ಮಾತಿನ ವರಸೆಯೇ ಬದಲಾಗುತ್ತದೆ. ಈ ರೀತಿ ಬ್ಲಾಕ್‌ಮೇಲ್ ಮಾಡೋದು ತಪ್ಪು ಅಲ್ವೇ? ನಮ್ಮಿಬ್ಬರ ಬಗ್ಗೆ ಮನೆಯಲ್ಲಿ ನಾನು ಯಾರಿಗೂ ಹೇಳಿಲ್ಲ. ನೀನು ಗರ್ಭಿಣಿ ವಿಷಯ ತಿಳಿದ್ರೆ ನನ್ನ ತಂದೆ ಹೊಡಿತಾರೆ ಎಂದು ಯುವತ ಕಾಲು ಮುಗಿಯಲು ಹೋಗುತ್ತಾನೆ. ಪ್ಲೀಸ್ ಇಲ್ಲಿಂದ ಹೋಗುವಂತೆ ಪ್ರೇಯಸಿಗೆ ಯುವಕ ಮನವಿ ಮಾಡಿಕೊಳ್ಳುತ್ತಾನೆ.

ಮದುವೆ ಮಾಡಿಕೊಳ್ಳುವೆ, ಮನೆಯಲ್ಲಿ ಎಲ್ಲಾ ವಿಷಯ ಹೇಳಿದ್ದೀನಿ ಅಂತ ಹೇಳಿದ್ದೆ ಅಲ್ಲವಾ? ಈಗ ಹೋಗಿ ಹೇಳು. ನಾನು ಇಲ್ಲಿಂದ ಹೋಗಲ್ಲ. ಒಂದು ವೇಳೆ ನೀನು ಹೇಳದಿದ್ದರೆ ನಾನೇ ಹೋಗಿ ನಮ್ಮಿಬ್ಬರ ವಿಷಯ ಹೇಳುತ್ತೇನೆ ಎಂದು ಯುವತಿ ತಿಳಿಸುತ್ತಾಳೆ. ನಂತರ ಯುವಕ, ನೀನು ಇಲ್ಲೇ ಇರು ನಾನೇ ಹೋಗಿ ಹೇಳುವೆ ಎಂದು ಕೋಣೆಯ ಬಾಗಿಲು ಹಾಕಿಕೊಂಡು ತೆರಳುತ್ತಾನೆ.

ಇದೊಂದು ತಮಾಷೆ ವಿಡಿಯೋ!

ಮೇಲ್ನೋಟಕ್ಕೆ ಇದೊಂದು ತಮಾಷೆ ವಿಡಿಯೋ ರೀತಿ ಕಾಣಿಸುತ್ತದೆ. ಈ ವಿಡಿಯೋಗೆ ಕಮೆಂಟ್ ಮಾಡಿರೋರು, ಒಯೋಗೆ ಹೋಗುವ ಮುನ್ನ ಎಚ್ಚರವಾಗಿರಿ ಮತ್ತು ಮುಂಜಾಗ್ರತ ಕ್ರಮ ತೆಗೆದುಕೊಳ್ಳುವುದನ್ನು ಮರೆಯಬೇಡಿ ಎಂದು ಸಲಹೆ ನೀಡಿದ್ದಾರೆ. ಇತ್ತೀಚೆಗೆ ಜೋಡಿಯೊಂದು ಒಯೋ ಹೋಟೆಲ್ ರೂಮ್ ಬಾಗಿಲು ಹಾಕಿಕೊಳ್ಳೋದನ್ನು ಮರೆತ್ತಿತ್ತು. ಈ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

 

Scroll to load tweet…