Couple Video: ಯುವಕನೊಬ್ಬ ಇಬ್ಬರು ಯುವತಿಯರೊಂದಿಗೆ ಸಿನಿಮಾ ನೋಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಯುವಕ ಇಬ್ಬರು ಯುವತಿಯರ ನಡುವೆ ಕುಳಿತು, ಅವರೊಂದಿಗೆ ರೊಮ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು.
ಇಂದಿನ ಜೋಡಿಗಳು ಏಕಾಂತವಾಗಿ ಕಾಲೆಳೆಯಲು ಥಿಯೇಟರ್ ಆಯ್ಕೆ ಮಾಡಿಕೊಳ್ಳುತ್ತಾರೆ. ಚಿತ್ರಮಂದಿರಗಳಲ್ಲಿ ಜೊತೆಯಾಗಿ ಸಿನಿಮಾ ನೋಡ್ತಾರೆ ಇಲ್ಲವೋ ಗೊತ್ತಿಲ್ಲ. ಅಪ್ಪಿಕೊಂಡು ಮುದ್ದಾಡುತ್ತಾ ಎರಡೂವರೆ ಗಂಟೆ ಸಮಯ ಕಳೆಯುತ್ತಾರೆ. ಇನ್ನು ಥಿಯೇಟರ್‌ನಲ್ಲಿಯ ಕಾರ್ನರ್ ಸೀಟ್‌ಗಳು ಇಂತಹ ಜೋಡಿಗಳಿಗೆ ರಿಸರ್ವ್ ಆಗಿರುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಅಷ್ಟೇ ಅಲ್ಲ ಕಾರ್ನನ್ ಸೀಟ್ ಬಗ್ಗೆ ಸಿನಿಮಾಗಳಲ್ಲಿಯೂ ತಮಾಷೆಯ ಸಂಭಾಷಣೆಗಳು ಕೇಳಿರುತ್ತವೆ. ಥಿಯೇಟರ್‌ನಲ್ಲಿಂದು ಲೈಟ್ ಆಫ್ ಮಾಡಿದರೂ ಸಿಸಿಟಿವಿ ಕ್ಯಾಮೆರಾಗಳು ನಮ್ಮನ್ನು ನೋಡಿರುತ್ತವೆ. ಕತ್ತಲೆಯಿದ್ರೂ ಸಿಸಿಟಿವಿಯಲ್ಲಿ ವೀಕ್ಷಕರ ಚಲನವಲನಗಳು ಸೆರೆಯಾಗುತ್ತಿವೆ.
ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವಕನೋರ್ವ, ಇಬ್ಬರು ಜೊತೆ ಕುಳಿತು ಸಿನಿಮಾ ಎಂಜಾಯ್ ಮಾಡುತ್ತಿದ್ದಾನೆ. ಅದೇ ಕೆಳಗೆ ಸಾಲಿನಲ್ಲಿ ಮತ್ತೊಂದು ಜೋಡಿ ರೊಮ್ಯಾನ್ಸ್ ಮಾಡುತ್ತಿರೋದನ್ನು ಗಮನಿಸಬಹುದು. ಈ ವಿಡಿಯೋವನ್ನು news.summary_ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಎರಡು ವಾರಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋಗೆ 1.85 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. Cinema in india have night vision cctv ಹೆಸರಿನೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ರಾತ್ರಿ ಚಿತ್ರಮಂದಿರದ ಸಿಸಿಟಿವಿ ದೃಶ್ಯ ಇದಾಗಿದೆ. ಈ ಸಿಸಿಟಿವಿ ದೃಶ್ಯದಲ್ಲಿ ಚಿತ್ರಮಂದಿರದ ಮೂರು ಸಾಲುಗಳು ಕಾಣಿಸುತ್ತವೆ. ಮಧ್ಯದ ಸಾಲಿನಲ್ಲಿ ಯುವಕನೋರ್ವ ಇಬ್ಬರು ಯುವತಿಯರ ಮಧ್ಯೆ ಕುಳಿತಿದ್ದಾನೆ. ಎರಡೂ ಕೈಗಳನ್ನು ಇಬ್ಬರಿಗೊಂದು ನೀಡಿದ್ದಾನೆ. ಮೊದಲಿಗೆ ಎಡಭಾಗದಲ್ಲಿರುವ ಯುವತಿಯ ಕಿವಿಯಲ್ಲಿ ಹೇಳುತ್ತಾನೆ. ನಂತರ ಬಲಭಾಗದಲ್ಲಿದ್ದ ಯುವತಿ ಆತನ ಭುಜ ಸವರುತ್ತಿದ್ದಂತೆ ಆಕೆಯತ್ತ ವಾಲುತ್ತಾನೆ.
ಈ ವೇಳೆ ಬಲಭಾಗದಲ್ಲಿ ಕುಳಿತಿದ್ದ ಯುವತಿ ಯುವಕನ ಭುಜಕ್ಕೆ ತಲೆ ತಾಗಿಸಿ ಆತನ ಕೈಯನ್ನು ಸವರುತ್ತಾಳೆ. ಇತ್ತ ಎಡ ಭಾಗದಲ್ಲಿ ಕುಳಿತಿದ್ದ ಯುವತಿಯೂ ಆತನ ಕೈಯನ್ನು ಸವರುತ್ತಾ ಪ್ರೀತಿಯನ್ನು ತೋರಿಸುತ್ತಾಳೆ. ನಂತರ ಯುವಕನ ಕಾಲಿನ ಮೇಲೆ ತನ್ನ ಕಾಲು ಹಾಕುತ್ತಾಳೆ. ಆ ಯುವಕ ಇಬ್ಬರ ಜೊತೆಯಲ್ಲಿ ರೊಮ್ಯಾನ್ಸ್ ಮಾಡುತ್ತಾ ಸಿನಿಮಾ ಎಂಜಾಯ್ ಮಾಡುತ್ತಾನೆ. ಮುಂದಿನ ಸಾಲಿನಲ್ಲಿಯೂ ಜೋಡಿಯೊಂದು ಸಹ ಪರಸ್ಪರ ಹತ್ತಿರ ಬಂದು ರೊಮ್ಯಾನ್ಸ್ ಮಾಡುತ್ತಿರೋದನ್ನು ನೋಡಬಹುದು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ತಮಾಷೆಯ ಶೀರ್ಷಿಕೆಯೊಂದಿಗೆ ಶೇರ್ ಮಾಡಿಕೊಳ್ಳಲಾಗುತ್ತಿದೆ.
ಸಾರ್ವಜನಿಕರಿಂದ ತಮಾಷೆ ಕಮೆಂಟ್
ಈ ವಿಡಿಯೋ ನೋಡಿದ ನೆಟ್ಟಿಗರು, ನಿಜವಾಗಿಯೂ ಜೀವನ ಎಂಜಾಯ್ ಮಾಡುತ್ತಿರೋದು ಈ ಯುವಕ. ಇಬ್ಬರು ಯುವತಿಯರಿಗೂ ಒಬ್ಬನೇ ಜೊತೆ ಸಿನಿಮಾ ನೋಡಲು ಬಂದಿರುವ ವಿಷಯ ಗೊತ್ತಾದ್ರೆ, ಆತನ ಪರಿಸ್ಥಿತಿ ಏನಾಗಬಹುದು ಊಹಿಸಿದ್ರೆ ಭಯ ಆಗುತ್ತೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಏಕ್ ಲಂಗೂರ್, ದೋ ಅಂಗೂರ್, ಭಾಯಿ ಲೈಫ್ ಕಾ ಮಜಾ ಲೇ ರಹಾ ಹೈ ಎಂದು ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ಈ ರೀತಿಯ ಅನುಚಿತ ವರ್ತನೆಗಳಿಂದಲೇ ಜನರು ಚಿತ್ರಮಂದಿರಗಳಿಂದ ದೂರವಾಗುತ್ತಿದ್ದಾರೆ. ಇಂದಿನ ಯುವ ಪೀಳಿಗೆಗೆ ಎಲ್ಲಿ ಏನು ಮಾಡಬೇಕು ಅನ್ನೋದು ಗೊತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕೆಲವರು ಒಯೋ ರೂಮ್‌ಗೆ ಹೋಗುವಂತೆಯೂ ಸಲಹೆ ನೀಡಿದ್ದಾರೆ.
ಮುಂದಿನ ಸಾಲಿನಲ್ಲಿ ಕುಳಿತಿರುವ ಜೋಡಿ ಇನ್ನು ಚಿಕ್ಕ ಮಕ್ಕಳಂತೆ ಕಾಣುತ್ತಿದ್ದಾರೆ. ಈ ರೀತಿಯ ನಡವಳಿಕೆಯಿಂದಾಗಿ ಮಕ್ಕಳು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಚಿತ್ರಮಂದಿರಗಳು ಈ ಸಂಬಂಧ ಕೆಲವು ನಿಯಮಗಳನ್ನು ರೂಪಿಸಬೇಕು ಎಂದು ಕೆಲ ಸಾರ್ವಜನಿಕರು ಆಗ್ರಹಿಸಿದ್ದಾರೆ.
