MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರಿನ ಬಿಎಂಟಿಸಿ ಬಸ್‌ಗಳು ಜನರ ಜೀವನಾಡಿಯೋ ಅಥವಾ 'ಯಮನ ಏಜೆಂಟ್'ಗಳೋ? ಬರೋಬ್ಬರಿ 1,149 ಮಂದಿ ಬಲಿ!

ಬೆಂಗಳೂರಿನ ಬಿಎಂಟಿಸಿ ಬಸ್‌ಗಳು ಜನರ ಜೀವನಾಡಿಯೋ ಅಥವಾ 'ಯಮನ ಏಜೆಂಟ್'ಗಳೋ? ಬರೋಬ್ಬರಿ 1,149 ಮಂದಿ ಬಲಿ!

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಿಂದ ಕಳೆದ 18 ವರ್ಷಗಳಲ್ಲಿ ಅಪಘಾತ ಮತ್ತು ಸಾವಿನ ಪ್ರಕರಣಗಳು ರಾಜಧಾನಿ ಜನತೆಯನ್ನು ಬೆಚ್ಚಿ ಬೀಳಿಸಿವೆ. ಈ ಆತಂಕಕಾರಿ ಅಂಕಿ-ಅಂಶಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದು, ಜನಸಂಚಾರಕ್ಕಿರುವ ಜೀವನಾಡಿಯೋ ಅಥವಾ ಯಮನ ಏಜೆಂಟ್‌ಗಳೋ ಎಂಬ ಆತಂಕ ಎದುರಾಗುತ್ತದೆ.

3 Min read
Author : Sathish Kumar KH
Published : Jul 05 2026, 04:48 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿ ಎಂದೇ ಕರೆಯಲ್ಪಡುವ ಬಿಎಂಟಿಸಿ (BMTC) ಬಸ್‌ಗಳು ಈಗ ಸಾರ್ವಜನಿಕರಲ್ಲಿ ನಡುಕ ಹುಟ್ಟಿಸುತ್ತಿವೆ. ರಸ್ತೆಯಲ್ಲಿ ಬಿಎಂಟಿಸಿ ಬಸ್ ಬಂತೆಂದರೆ ಸಾಕು, ಪಾದಚಾರಿಗಳು ಮತ್ತು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿನ ಅಂಕಿ-ಅಂಶಗಳು ಭಯಾನಕ ಸತ್ಯವನ್ನು ಹೊರಹಾಕಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : our own

ಶಾಕ್ ನೀಡುವ ಸಾವಿನ ಲೆಕ್ಕಾಚಾರ:

2008-09ನೇ ಸಾಲಿನಿಂದ ಹಿಡಿದು 2026ರ ಜೂನ್ ಅಂತ್ಯದವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ, ಬಿಎಂಟಿಸಿ ಬಸ್‌ಗಳ ಅಟ್ಟಹಾಸಕ್ಕೆ ಬರೋಬ್ಬರಿ 1149 ಮಂದಿ ಜೀವ ಕಳೆದುಕೊಂಡಿದ್ದಾರೆ. ಕಳೆದ 18 ವರ್ಷಗಳಲ್ಲಿ ಒಟ್ಟು 4294 ಅಪಘಾತಗಳು ಸಂಭವಿಸಿವೆ ಎಂದರೆ ನೀವು ನಂಬಲೇಬೇಕು. ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ, ಸಾವಿನ ಪ್ರಮಾಣ ಮಾತ್ರ ಆತಂಕಕಾರಿಯಾಗಿ ಮುಂದುವರಿಯುತ್ತಿದೆ.

Related Articles

Related image1
ತಳ್ಳು ತಳ್ಳು ಐಸ್ಸಾ.. ಇನ್ನು ಸ್ವಲ್ಪ ತಳ್ಳಣ್ಣ; ರೈಲ್ವೆ ಹಳಿ ಮೇಲೆಯೇ ಕೆಟ್ಟು ನಿಂತ ಬಿಎಂಟಿಸಿ ಬಸ್
Related image2
ಬೆಂಗಳೂರು: KR Circle ಬಳಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ, ಪ್ರಯಾಣಿಕರ ರಕ್ಷಣೆಗೆ ಹರಸಾಹಸ!
36
Image Credit : our own

ಅಪಘಾತಗಳ ಇತಿಹಾಸ:

2008-09ರಲ್ಲಿ 619 ಅಪಘಾತಗಳು ಸಂಭವಿಸಿ 95 ಮಂದಿ ಮೃತಪಟ್ಟಿದ್ದರು. ಅಲ್ಲಿಂದ ಆರಂಭವಾದ ಈ 'ಸಾವಿನ ಸರಣಿ' ಇಂದಿಗೂ ನಿಂತಿಲ್ಲ. ಕೋವಿಡ್ ಸಮಯದಲ್ಲಿ (2020-21) ಸಂಚಾರ ಕಡಿಮೆ ಇದ್ದ ಕಾರಣ ಸಾವಿನ ಸಂಖ್ಯೆ 22ಕ್ಕೆ ಇಳಿದಿತ್ತು. ಆದರೆ, ನಂತರದ ವರ್ಷಗಳಲ್ಲಿ ಮತ್ತೆ ಏರಿಕೆ ಕಂಡಿದೆ. 2024 ರಿಂದ 2026ರ ನಡುವಿನ ಕೇವಲ ಎರಡು ವರ್ಷಗಳ ಅವಧಿಯಲ್ಲಿ 343 ಅಪಘಾತಗಳು ಸಂಭವಿಸಿದ್ದು, 94 ಮಂದಿ ಬಲಿಯಾಗಿದ್ದಾರೆ.

46
Image Credit : Asianet News

ಬಿಎಂಟಿಸಿ ಅಪಘಾತಗಳ ಭೀಕರ ಅಂಕಿ-ಅಂಶಗಳು (2008 ರಿಂದ 2026)

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಕಳೆದ 18 ವರ್ಷಗಳಲ್ಲಿ ಕಂಡ ಅಪಘಾತಗಳು ಮತ್ತು ಸಂಭವಿಸಿದ ಸಾವುಗಳ ಪಟ್ಟಿ ಹೀಗಿದೆ:

ವರ್ಷ             ಅಪಘಾತಗಳು    ಸಾವಿನ ಸಂಖ್ಯೆ

2008-09         619                     95

2009-10         565                     96

2010-11         556                      91

2011-12         517                      79

2012-13         414                      90

2013-14         394                      88

2014-15         388                     78

2015-16         333                     69

2016-17         299                     45

2017-18         293                     44

2018-19         286                     61

2019-20         224                      51

2020-21          98                       22

2021-22         133                      38

2022-23         207                      55

2023-24          209                     53

2024-25         170                      45

2025-26         159                      42

2026-27 (ಜೂನ್) 18                14

ಒಟ್ಟು                 4,294              1,149

56
Image Credit : Asianet News

ಕಳೆದ ಎರಡು ವರ್ಷಗಳ ವಿಶೇಷ ಮಾಹಿತಿ (2024 - 2026)

ಇತ್ತೀಚಿನ ಎರಡು ವರ್ಷಗಳಲ್ಲಿ ಸಾಮಾನ್ಯ ಮತ್ತು ಎಲೆಕ್ಟ್ರಿಕ್ ಬಸ್‌ಗಳ ಅಪಘಾತಗಳ ವಿವರ ಇಲ್ಲಿದೆ:

1. ಬಿಎಂಟಿಸಿ (ಸಾಮಾನ್ಯ ಬಸ್‌ಗಳು):

ಅಪಘಾತಗಳ ಸಂಖ್ಯೆ: 343

ಒಟ್ಟು ಸಾವು: 94

2. ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು (e-Bus):

ಅಪಘಾತಗಳ ಸಂಖ್ಯೆ: 139

ಒಟ್ಟು ಸಾವು: 34

66
Image Credit : Asianet News

ಬಸ್‌ಗಳ ಸ್ಥಿತಿಗತಿ:

ರಾಜ್ಯದಲ್ಲಿ ಒಟ್ಟು 26,054 ಸರ್ಕಾರಿ ಬಸ್‌ಗಳಿದ್ದು, ಅದರಲ್ಲಿ ಬಿಎಂಟಿಸಿ ಪಾಲು 7,067. ಇಡೀ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಸುಮಾರು 3000 ಹಳೆಯ ಬಸ್‌ಗಳು ಇಂದಿಗೂ ರಸ್ತೆಯಲ್ಲೇ ಇವೆ. ಹಳೆಯ ಬಸ್‌ಗಳ ನಿರ್ವಹಣೆ ಸರಿಯಾಗಿಲ್ಲದಿರುವುದು ಮತ್ತು ಚಾಲಕರ ಮೇಲಿನ ಒತ್ತಡವೇ ಇಷ್ಟೊಂದು ಅಪಘಾತಗಳಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರತಿದಿನ ಲಕ್ಷಾಂತರ ಜನರನ್ನು ಗುರಿ ತಲುಪಿಸುವ ಬಿಎಂಟಿಸಿ, ಜನರ ಪಾಲಿಗೆ 'ಜೀವನಾಡಿ'ಯಾಗಬೇಕೇ ಹೊರತು 'ಯಮನ ಏಜೆಂಟ್' ಆಗಬಾರದು ಎಂಬುದು ಬೆಂಗಳೂರಿಗರ ಆಶಯ. ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಈ ರಕ್ತಪಾತಕ್ಕೆ ಬ್ರೇಕ್ ಹಾಕುತ್ತದೆಯೇ ಎಂದು ಕಾದು ನೋಡಬೇಕಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಬಿಎಂಟಿಸಿ
ಅಪಘಾತ

Latest Videos
Recommended Stories
Recommended image1
33 ದಿನಗಳ ಬಳಿಕ ಸಮಾಧಿಯಿಂದ ಹೊರಬಂದು ದರ್ಶನ ನೀಡಿದ ಸ್ವಾಮೀಜಿ; 775 ಗಂಟೆಯ ಯೋಗಸಮಾಧಿ
Recommended image2
ಕೃಷ್ಣಾ ನದಿಗೆ ಹರಿದು ಬರುತ್ತಿದೆ 60 ಸಾವಿರ ಕ್ಯೂಸೆಕ್ಸ್ ನೀರು; ಸೇತುವೆಗಳು ಜಾಲವೃತ
Recommended image3
ಎಲ್ ನಿನೊ ಎಂಟ್ರಿಯಿಂದ ಮುಂಗಾರು ಮಳೆಯ ಕೊರತೆ; ರೈತರು ಕಂಗಾಲು, ಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ
Related Stories
Recommended image1
ತಳ್ಳು ತಳ್ಳು ಐಸ್ಸಾ.. ಇನ್ನು ಸ್ವಲ್ಪ ತಳ್ಳಣ್ಣ; ರೈಲ್ವೆ ಹಳಿ ಮೇಲೆಯೇ ಕೆಟ್ಟು ನಿಂತ ಬಿಎಂಟಿಸಿ ಬಸ್
Recommended image2
ಬೆಂಗಳೂರು: KR Circle ಬಳಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ, ಪ್ರಯಾಣಿಕರ ರಕ್ಷಣೆಗೆ ಹರಸಾಹಸ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved