ಕಿಡ್ನಾಪ್ ಮಾಡಿದವರ ಸ್ಮಾರ್ಟ್‌ವಾಚ್ ಬಳಸಿ ಬಚಾವ್ ಆದ ಹೊಟೆಲ್ ಮ್ಯಾನೇಜರ್, ಕೂಡಿ ಹಾಕಿದ ಕೋಣೆಯಲ್ಲಿ ತಲೆ ಉಪಯೋಗಿಸಿದ ಹೊಟೆಲ್ ಮ್ಯಾನೇಜರ್ ಅಪಹರಣಕಾರರ ಬಂಧನದಿಂದ ಹೊರಬಂದ ಘಟನೆ ನಡೆದಿದೆ.

ಗ್ವಾಲಿಯರ್ (ಡಿ.16) ತುರ್ತು ಸಂದರ್ಭಗಳಲ್ಲಿ ಸ್ಮಾರ್ಟ್‌ವಾಚ್‌ ನೆರವಾದ ಉದಾಹರಣೆ ಇದೆ. ಪ್ರಮುಖವಾಗಿ ಆ್ಯಪಲ್ ಸ್ಮಾರ್ಟ್‌ವಾಚ್‌ನಿಂದ ಎದೆಬಡಿತದ ಅಲರ್ಟ್, ಅಪಘಾತ ಸೇರಿದಂತೆ ತುರ್ತು ಸಂದರ್ಭದಲ್ಲಿ ಸಂದೇಶ, ಲೊಕೇಶನ್ ರವಾನಿಸಿ ತಕ್ಷಣವೇ ಚಿಕಿತ್ಸೆ ಲಭ್ಯವಾಗುವಂತೆ ಮಾಡಿದೆ. ಆದರೆ ಇಲ್ಲೊಂದು ಪ್ರಕರಣ ಕಿಡ್ನಾಪರ್ ಸ್ಮಾರ್ಟ್‌ವಾಚ್‌ನಿಂದ ಕಿಡ್ನಾಪ್ ಆಗಿರುವ ವ್ಯಕ್ತಿ ಹೊರಬಂದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ. ಸ್ಮಾರ್ಟ್‌ವಾಚ್ ಎಸ್ಒಎಸ್‌ನಿಂದ ಅಪಾಯವೊಂದು ತಪ್ಪಿದೆ.

ಹೊಟೆಲ್ ಮ್ಯಾನೇಜರ್ ಕಿಡ್ನಾಪ್

ಕೋಟೇಶ್ವರ ಕಾಲೋನಿಯ ನಿವಾಸಿ ಸೌರಬ್ ಶರ್ಮಾ ಉತ್ತರಖಂಡದ ಹರಿದ್ವಾರದಲ್ಲಿ ಹೊಟೆಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಕೆಲಸದಲ್ಲಿ ರಜೆ ಪಡೆದು ಮನೆಗೆ ಮರಳಿದ್ದ. ಸ್ಥಳೀಯ ಬಡ್ಡಿಗೆ ಸಾಲ ನೀಡುವ ಹೇಮಂತ್ ಶರ್ಮಾ ಅಲಿಯಾ ಚೊಟ್ಟು ತ್ಯಾಗಿ ಹಾಗೂ ಸಚಿನ್ ತ್ಯಾಗಿ ಅವರಿಂದ 2.90 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಬಳಿಕ ಬಡ್ಡಿ ಸೇರಿಸಿ 3.20 ಲಕ್ಷ ರೂಪಾಯಿ ಪಾವತಿಸಿದ್ದ. ಆದರೆ ಬಡ್ಡಿ ತ್ಯಾಗಿ ಬ್ರದರ್ಸ್ ಬಡ್ಡಿ ಸೇರಿಸಿ 6 ಲಕ್ಷ ರೂಪಾಯಿ ಆಗಿದೆ. ಮರಳಿ ನೀಡುವಂತೆ ಬೆದರಿಕೆ ಹಾಕಿದ್ದರು. ಸೌರಬ್ ಶರ್ಮಾ ಮನೆಗೆ ಬಂದ ಮಾಹಿತಿ ಪಡೆದ ತ್ಯಾಗಿ ಬ್ರದರ್ಸ್ ಮನೆಯಿಂದ ಹೊರಬರುವುದನ್ನೇ ಕಾಯುುತ್ತಾ ಕುಳಿತಿದ್ದಾರೆ.

ಕೋಣೆಯಲ್ಲಿ ಕೂಡಿ ಹಾಕಿದ ತ್ಯಾಗಿ ಬ್ರದರ್ಸ್

ಸೌರವ್ ಶರ್ಮಾ ಮನೆಯಿಂದ ಹೊರಬಂದು ಕೆಲ ದೂರ ಬರುತ್ತಿದ್ದಂತೆ ತ್ಯಾಗಿ ಬ್ರದರ್ಸ್ ದಾಳಿ ಮಾಡಿದ್ದಾರೆ. ಸೌರಬ್ ಶರ್ಮಾ ಮೇಲೆ ದಾಳಿ ಕಿಡ್ನಾಪ್ ಮಾಡಿದ್ದಾರೆ. ಬಳಿಕ ಸಚಿನ್ ತ್ಯಾಗಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಇಲ್ಲಿ ಕೋಣೆಯಲ್ಲಿ ಕೂಡಿ ಹಾಕಿ 6 ಲಕ್ಷ ರೂಪಾಯಿ ನೀಡುವಂತೆ ಮತ್ತೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ ಸೌರಬ್ ಶರ್ಮಾನನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಸೌರಬ್ ಫೋನ್ ಸೇರಿದಂತೆ ಎಲ್ಲವನ್ನೂ ಕಸಿದುಕೊಂಡಿದ್ದಾರೆ.

ನೆರವಿಗೆ ಬಂದ ಸ್ಮಾರ್ಟ್‌ವಾಚ್

ಕೂಡಿ ಹಾಕಿದ್ದ ಕೋಣೆಯಲ್ಲಿ ಸ್ಮಾರ್ಟ್‌ವಾಚ್ ಬಿದ್ದಿರುವುದು ಗಮನಿಸಿದ ಸೌರಬ್ ಶರ್ಮಾ, ತಕ್ಷಣವೇ ಈ ಸ್ಮಾರ್ಟ್‌ವಾಚ್ ಕೈಗೆತ್ತಿಕೊಂಡಿದ್ದಾನೆ. ಇದು ಸಚಿನ್ ತ್ಯಾಗಿ ಸ್ಮಾರ್ಟ್‌ವಾಚ್ ಆಗಿತ್ತು. ಈ ಸ್ಮಾರ್ಟ್‌ವಾಚ್‌ನಿಂದ ಸೌರಬ್ ಶರ್ಮಾ ತನ್ನ ಗೆಳತಿಗೆ ಕರೆ ಮಾಡಿದ್ದಾನೆ. ತನನ್ನು ಕಿಡ್ನಾಪ್ ಮಾಡಿರುವುದಾಗಿ ಹೇಳಿದ್ದಾನೆ. ಜೊತೆಗೆ ಲೇಕೋಶನ್ ಹೇಳಿದ್ದಾನೆ. ಸೌರಬ್ ಶರ್ಮಾ ಗೆಳತಿ ತಕ್ಷಣವೇ ಸೌರಬ್ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಪೊಲೀಸರಿಗೆ ದೂರು ನೀಡಿದ ಸೌರಬ್ ಶರ್ಮಾ ತಂದೆ

ಸೌರಬ್ ಶರ್ಮಾ ತಂದೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಲೋಕೇಶನ್, ಕರೆ ಬಂದ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ಪಡೆದು ಕಾರ್ಯಪ್ರವೃತ್ತರಾಗಿದ್ದಾರೆ. ಹೇಮಂತ್ ಶರ್ಮಾ ಅಲಿಯಾ ಚೊಟ್ಟು ತ್ಯಾಗಿ ಬಂಧಿಸಿದ ಪೊಲೀಸರು, ಸಚಿನ್ ತ್ಯಾಗಿ ಎಲ್ಲಿದ್ದಾನೆ, ಕರೆ ಮಾಡಲು ಸೂಚಿಸಿದ್ದಾರೆ. ಬಳಿಕ ಸಚಿನ್ ತ್ಯಾಗಿಯನ್ನು ಪೊಲೀಸರು ಬಂಧಿಸಿ, ಸೌರಬ್ ಶರ್ಮಾನನ್ನು ಬಿಡಿಸಿಕೊಂಡು ಬಂದಿದ್ದಾರೆ.