ಬೆಂಗಳೂರು ಟ್ರಾಫಿಕ್‌ನಲ್ಲಿ ಆಫೀಸ್‌ನಿಂದ ಮನೆ ತಲುಪಲು 4 ಗಂಟೆ, ಹಿಂದಿನ ಎಲ್ಲಾ ದಾಖಲೆ ಉಡೀಸ್!
ಬೆಂಗಳೂರು ಟ್ರಾಫಿಕ್‌ನಲ್ಲಿ ಆಫೀಸ್‌ನಿಂದ ಮನೆ ತಲುಪಲು ಹೆಚ್ಚೆಂದರೆ 1 ಗಂಟೆ, 2 ಗಂಟೆ ಅಥವಾ 3 ಗಂಟೆ ತೆಗೆದುಕೊಂಡ ಉದಾಹರಣೆ ಇವೆ. ಆದರೆ ಇದೀಗ ಹಿಂದಿನ ಎಲ್ಲಾ ದಾಖಲೆ ಪುಡಿಯಾಗಿದೆ. ಕಾರಣ ಬರೋಬ್ಬರಿ 4 ಗಂಟೆ ತೆಗೆದುಕೊಂಡ ಘಟನೆ ನಡೆದಿದೆ.
ಬೆಂಗಳೂರು(ಅ.27) ಬೆಂಗಳೂರು ಟ್ರಾಫಿಕ್ ಜಗತ್ತಿನಲ್ಲಿ ಜನಪ್ರಿಯ. ಕೆಲ ಸಂದರ್ಭಗಳಲ್ಲಿ ಬೆಂಗಳೂರು ಟ್ರಾಫಿಕ್‌ಗೆ ಸಿಲುಕಿ ರೈಲು, ವಿಮಾನ, ಮದುವೆ, ಕಾರ್ಯಕ್ರಮ ಮಿಸ್ ಮಾಡಿಕೊಂಡ ಹಲವು ಉದಾಹರಣೆಗಳಿವೆ. ಹಲವರು ಅಪಾರ ನಷ್ಟ ಕೂಡ ಅನುಭವಿಸಿದ್ದಾರೆ. ಬೆಳಗ್ಗೆ ಕಚೇರಿ, ಶಾಲೆ, ಕಾಲೇಜು, ಕೆಲಸ, ಸಭೆ, ಸಮಾರಂಭಗಳಿಗೆ ತಕ್ಕ ಸಮಯಕ್ಕೆ ತಲುಪುದು ಅತೀ ದೊಡ್ಡ ಸವಾಲು. ಇನ್ನು ಸಂಜೆಯಾದರೆ ಹಿಂದಿರುಗಿ ಮನೆ ತಲುಪುದು ಅದಕ್ಕಿಂತ ದೊಡ್ಡ ಚಾಲೆಂಜ್. ಪೀಕ್ ಹವರ್ ಟ್ರಾಫಿಕ್‌ನಲ್ಲಿ 1,2,3 ಗಂಟೆ ಬಸ್, ಕಾರು, ಬೈಕ್ ಹೀಗೆ ಪ್ರಯಾಣದಲ್ಲೇ ಕಳೆದ ಉದಾಹರಣೆಗಳಿವೆ. ಆದರೆ ಈ ಬಾರಿ ಈ ಟ್ರಾಫಿಕ್ ಬರೋಬ್ಬರಿ 4 ಗಂಟೆ ಸಮಯ ತೆಗೆದುಕೊಂಡಿದೆ. ಹೌದು, ಬೆಂಗಳೂರು ನಿವಾಸಿ ಕಚೇರಿಯಿಂದ ಮನೆ ತಲುಪಲು 4 ಗಂಟೆ ತೆಗೆದುಕೊಂಡ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಸಂಜೆಯಾದರೆ ಮಳೆರಾಯನ ಆಗಮಿಸುತ್ತಿದ್ದಾನೆ. ಹೀಗಾಗಿ ಮೊದಲೇ ಟ್ರಾಫಿಕ್ ಸಮಸ್ಯೆಯಿಂದ ಗಿಜಿಗಿಡುವ ಬೆಂಗಳೂರು ಮಳೆ ಬಂದರೆ ಕೇಳಬೇಕೆ? ಹಲವು ರಸ್ತೆಗಳು ಜಾಮ್, ನೀರು ತುಂಬಿದ ರಸ್ತೆಗಳ ಕಾರಣದಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಹೀಗೆ ಸಂದೀಪ್ ಪಿ ನಂಬಿಯಾರ್ ಅನ್ನೋ ಬೆಂಗಳೂರಿಗ ವೈಟ್‌ಫೀಲ್ಡ್‌ನಿಂದ ಯಲಹಂಕದ ಮನೆ ತಲಪುಲ 4 ಗಂಟೆ ಸಮಯ ತೆಗೆದುಕೊಂಡ ಘಟನೆ ನಡೆದಿದೆ.
ಹೆಲ್ಮೆಟ್ ಕಡ್ಡಾಯ ಮಾತ್ರವಲ್ಲ ಸರಿಯಾಗಿ ಧರಿಸದಿದ್ದರೂ ಬೀಳುತ್ತೆ ದಂಡ!
ವೈಟ್‌ಫೀಲ್ಡ್‌ನಿಂದ ಯಲಹಂಕದಲ್ಲಿರುವ ಸಂದೀಪ್ ಮನೆಗೆ 30 ಕಿಲೋಮೀಟರ್ ದೂರ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಇದು ಬಹುದೊಡ್ಡ ಅಂತರ. ಇಷ್ಟೇ ಅಲ್ಲ ವೈಟ್‌ಫೀಲ್ಡ್ ನಿಂದ ಯಲಹಂಕ ಕೂಡ ಅತ್ಯಂತ ಪ್ರಯಾಸದ ಮಾರ್ಗ. ಸಂದೀಪ್ ಸಂಜೆ 5.30ಕ್ಕೆ ಕಚೇರಿಯಿಂದ ಹೊರಟಿದ್ದಾರೆ. ಮಳೆಯ ಕಾರಣದಿಂದ ವಿಪರೀಟ ಟ್ರಾಫಿಕ್‌ನಲ್ಲಿ ಸಿಲುಕಿ ಮನೆ ತಲುಪುವಾಗ ಸರಿಸುಮಾರು ರಾತ್ರಿ 9.30. ವಿಶೇಷ ಅಂದರೆ ಎರಡು ದಿನದ ಹಿಂದೆ ಸಂದೀಪ್ ಇದೇ ರೀತಿ ಮಳೆಯ ಟ್ರಾಫಿಕ್‌ನಲ್ಲಿ ಸಿಲುಕಿ ಮನೆ ತಲುಪಲು 3.5 ಗಂಟೆ ತೆಗೆದುಕೊಂಡಿದ್ದರು. ಇನ್ನು 6 ತಿಂಗಳ ಹಿಂದೆ 3.15 ಗಂಟೆ ತೆಗೆದುಕೊಂಡಿದ್ದರು. ಈ ಬಾರಿ ಈ ಎಲ್ಲಾ ದಾಖಲೆ ಪುಡಿ ಮಾಡಿ 4 ಗಂಟೆ ತೆಗೆದುಕೊಂಡಿದ್ದಾರೆ ಎಂದು ತಮ್ಮ ಎಕ್ಸ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಸಂದೀಪ್ ಸಂದೇಶಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ವೈಟ್‌ಫೀಲ್ಡ್‌ನಿಂದ ಯಲಹಂಕಗೆ ಮಳೆಯಲ್ಲಿ 4 ಗಂಟೆಗೆ ತಲುಪಿರುವುದೇ ವೇಗ. ಇದಕ್ಕಿಂತ ಬೇಗ ಸಾಧ್ಯವಿಲ್ಲ. ಈ ದಾರಿ ಕಿಕ್ಕಿರಿದು ತುಂಬಿದ ಟ್ರಾಫಿಕ್ ದಾರಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ವರ್ಕ್ ಫ್ರಮ್ ಹೋಮ್ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ಹಲವರು ಹತ್ತಿರದ ಮೆಟ್ರೋ ನಿಲ್ದಾಣದ ಮೂಲಕ ಪ್ರಯಾಣಿಸಿ ಎಂದು ಸಲಹೆ ಕೊಟ್ಟಿದ್ದಾರೆ. ಪ್ರಯಾಣದ ನಡುವೆ ಫಿಜಾ ಆರ್ಡರ್ ಮಾಡಿದರೆ ದಾರಿಯಲ್ಲೇ ಡೆಲಿವರಿ ಮಾಡುತ್ತಿದ್ದರು ಎಂದು ಕೆಲವರು ಸೂಚಿಸಿದ್ದಾರೆ. 30 ಕಿ.ಮಿ ದೂರ ಪ್ರಯಾಣ ಜೊತೆಗೆ ಅತೀ ಹೆಚ್ಚಿನ ಟ್ರಾಫಿಕ್ ಮಾರ್ಗದಲ್ಲಿ ಪ್ರಯಾಣದಲ್ಲಿ ಬೆಂಗಳೂರು ದೂರಿ ಪ್ರಯೋಜನವಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಯಲಂಹಕದಿಂದ ಮನೆಯನ್ನು ವೈಟ್‌ಫೀಲ್ಡ್‌ಗೆ ಸ್ಥಳಾಂತರಿಸಿ ಅನ್ನೋ ಸಲಹೆಯನ್ನು ನೀಡಿದ್ದರೆ. ಇದಕ್ಕೆ ಸಂದೀಪ್ ಕೂಡ ಉತ್ತರಿಸಿದ್ದಾರೆ. ಯಲಂಹದಲ್ಲಿ ಸ್ವಂತ ಮನೆಯಲ್ಲಿ ವಾಸವಿರುವುದಾಗಿ ಹೇಳಿದ್ದಾರೆ. ಹೀಗಾಗಿ ಮನೆ ಬದಲಾಯಿಸಲು ಸಾಧ್ಯವಿಲ್ಲ. ಇನ್ನು ಕೆಲಸ ಬದಲಾಯಿಸುವುದು ಸುಲಭದ ಮಾತಲ್ಲ ಎಂದಿದ್ದಾರೆ. ಮನೆಯಿಂದ ಕೆಲಸದ ಆಯ್ಕೆಯನ್ನು ಪ್ರಯತ್ನಿಸುತ್ತಿದ್ದೇನೆ. ಬೇರೆ ಮಾರ್ಗಗಳನ್ನೂ ಪ್ರಯತ್ನಿಸಿದ್ದೇನೆ. ಆದರೆ ಹೆಚ್ಚಿನ ವ್ಯತ್ಯಾಸಗಳಿಲ್ಲ ಎಂದು ಉತ್ತರ ನೀಡಿದ್ದರೆ.
ಲಂಚ ಪಡೆದ ಹಣವನ್ನು ಸಮನಾಗಿ ಮೂವರು ಟ್ರಾಫಿಕ್ ಪೊಲೀಸರು ಹಂಚಿಕೆ, ಸೆರೆಯಾಯ್ತು ದೃಶ್ಯ!