ಟೆಕ್ಕಿಗಳ ಮೀರಿಸುತ್ತಿದೆ ಅಡುಗೆ ಕೆಲಸದ ರಿತು ದೀದಿ ರೆಸ್ಯೂಮ್, ಇದು ಬೆಂಗಳೂರಲ್ಲಿ ಮಾತ್ರ!
ಐಟಿ ಉದ್ಯೋಗಿಗಳು, ಮ್ಯಾನೇಜರ್ ಸೇರಿದಂತೆ ಕೈತುಂಬ ಸಂಬಳ ಪಡೆಯುವ ಹಲವರ ಬಳಿಕ ಉತ್ತಮ ರೆಸ್ಯೂಮ್ ಇರುವುದಿಲ್ಲ. ಆದರೆ ಬೆಂಗಳೂರಲ್ಲಿ ಅಡುಗೆ ಕೆಲಸ ಮಾಡುವ ರಿತು ದೀದಿ ಬಳಿ ಇದೆ ಇವರೆಲ್ಲರನ್ನು ಮೀರಿಸುವ ರೆಸ್ಯೂಮ್. ಇದೀಗ ರಿತು ದೀದಿಯ ಈ ರೆಸ್ಯೂಮ್ ಭಾರಿ ಸದ್ದು ಮಾಡುತ್ತಿದೆ.
ಬೆಂಗಳೂರು(ಡಿ.01) ಇತರ ಯಾವುದೇ ನಗರ, ಪಟ್ಟಣಗಳಿಲ್ಲದ ಹಲವು ವಿಶೇಷತೆಗಳು ಬೆಂಗಳೂರಲ್ಲಿ ಕಾಣಸಿಗುತ್ತದೆ. ಆಟೋ ಚಾಲಕರ ಹೈಟೆಕ್ ಸ್ಪರ್ಶ, ಟ್ರಾಫಿಕ್ ಜಾಮ್‌ನಲ್ಲಿ ಫುಡ್ ಡೆಲಿವರಿ, ಸ್ಕೂಟರ್ ಮೇಲೆ ಸಾಗುತ್ತಾ ಕಚೇರಿ ಮೀಟಿಂಗ್‌ನಲ್ಲಿ ಭಾಗಿಯಾಗುವುದು. ಈ ರೀತಿ ಹಲವು ಘಟನೆಗಳು ಬೆಂಗಳೂರಲ್ಲೇ ಮೊದಲು, ಇಲ್ಲಿ ಮಾತ್ರ ಕಾಣಸಿಗುತ್ತದೆ. ಇದೀಗ ಅಡುಗೆ ಕೆಲಸ ಮಾಡುವವರಿಗೂ ಬೆಂಗಳೂರಲ್ಲಿ ಹೈಟೆಕ್ ರೆಸ್ಯೂಮ್ ಇದೆ ಅನ್ನೋದು ತಿಳಿದಿತ್ತಾ? ಇದು ಕೂಡ ಬೆಂಗಳೂರಲ್ಲಿದೆ. ಮನೆಯಲ್ಲಿ ಅಡುಗೆ ಕೆಲಸಕ್ಕೆ ಯಾರಾದರೂ ಪರಿಣಿತರು ಬೇಕಿದ್ದರೆ ವಿಚಾರಿಸಿ ಕೆಲಸಕ್ಕೆ ಸೇರಿಸಿಕೊಳ್ಳುವುದು ವಾಡಿಕೆ. ಆದರೆ ಬೆಂಗಳೂರಲ್ಲಿ ಅಡುಗೆ ಕೆಲಸದವರ ಕೈಯಲ್ಲೂ ಟೆಕ್ಕಿಗಳನ್ನು ಮೀರಿಸುವ ರೆಸ್ಯೂಮ್ ಇದೆ ಅನ್ನೋದು ಬಹಿರಂಗವಾಗಿದೆ.
ಬೆಂಗಳೂರಿನ ಹೆಚ್ಎಸ್ಆರ್ ವಲಯದ ರಿತು ರೆಸ್ಯೂಮ್ ಇದೀಗ ಭಾರತದಲ್ಲೇ ಸದ್ದು ಮಾಡುತ್ತಿದೆ. ವಿಶೇಷ ಅಂದರೆ ರಿತುಗೆ ಈ ರೀತಿಯ ರೆಸ್ಯೂಮ್ ರೆಡಿ ಮಾಡಿಕೊಟ್ಟಿರುವುದು ಬೆಂಗಳೂರಿನ ವರುಣ್ ಪೆರು ಅನ್ನೋ ವ್ಯಕ್ತಿ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉರ್ವಿ ಅನ್ನೋ ಎಕ್ಸ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಈ ಟ್ವೀಟ್‌ನಲ್ಲಿ ಹೆಚ್‌ಎಸ್ಆರ್ ವಲಯದಲ್ಲಿ ಯಾರಾದರೂ ಉತ್ತಮ ಹಾಗೂ ಮನೆ ಅಡುಗೆಗಳನ್ನು ಮಾಡುವವರಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಈ ಟ್ವೀಟ್‌ಗೆ ಉತ್ತರಿಸಿದ ವರುಣ್ ಪೆರು ತಮ್ಮ ಮನೆಯ ಅಡುಗೆ ಕೆಲಸದ ರಿತುವನ್ನು ಪರಿಚಯಿಸಿದ್ದಾರೆ. ಆದರೆ ಪರಿಚಯಿಸುವಾಗ ಅಷ್ಟೇ ಅತ್ಯುತ್ತಮ ರೆಸ್ಯೂಮ್ ಮೂಲಕ ಪರಿಚಯಿಸಿದ್ದಾರೆ.
ಸ್ಕೂಟರ್‌ನಲ್ಲಿ ತೆರಳುತ್ತಾ ಲ್ಯಾಪ್‌ಟಾಪ್ ಮೂಲಕ ವಿಡಿಯೋ ಮೀಟಿಂಗ್,ಬೆಂಗಳೂರಿನ ಬ್ಯೂಸಿ ಲೈಫ್ Video!
ಇಷ್ಟೇ ಅಲ್ಲ ನೀವು ರಿತು ದೀದಿಯನ್ನು ಪರಿಗಣಿಸಬಹುದು. ಈಕೆ ಮನೆಯ ಅಡುಗೆ ಮಾಡುವುದರಲ್ಲಿ ನಿಪುಣರಾಗಿದ್ದರೆ.ಜೊತೆಗೆ ಸರಳ ವ್ಯಕ್ತಿತ್ವ. ಇವರ ರೆಸ್ಯೂಮ್ ರೆಡಿ ಮಾಡಲಾಗಿದೆ. ಇದಕ್ಕೆ ರಿತು ಅರ್ಹರಾಗಿದ್ದಾರೆ ಎಂದು ವರುಣ್ ಪೆರು ಎಕ್ಸ್ ಮೂಲಕ ಹೇಳಿದ್ದಾರೆ.
ಈ ರೆಸ್ಯೂಮ್‌ನಲ್ಲಿ ಏನಿದೆ?
ರೆಸ್ಯೂಮ್ ಅಬೆಕ್ಟೀವ್‌ನಲ್ಲಿ, ಕೇವಲ ಒಂದೇ ಗುರಿ, ಪ್ರತಿ ದಿನ ನಿಮಗೆ ಮನೆಯ ವಿಶೇಷ ಹಾಗೂ ಉತ್ತಮ ಖಾದ್ಯಗಳನ್ನು ಉಣಪಡಿಸುವುದು ಎಂದು ಬರೆಯಲಾಗಿದೆ. ಇನ್ನು ನಾರ್ತ್ ಇಂಡಿಯನ್ ಆಹಾರಗಳಲ್ಲಿ ರಾಜ್ಮಾ ಚಾವಲ್, ಜಾಲ್ ಫ್ರೈ, ಆಲೂ ಪರಾಠ, ಸಬ್ಜಿ ರೋಟಿ ಸೇರಿದಂತೆ ಕೆಲ ಖಾದ್ಯಗಳಲ್ಲಿ ಪರಿಣಿತರು ಎಂದು ಬರೆದುಕೊಂಡಿದ್ದಾರೆ. ಇನ್ನು ದಕ್ಷಿಣ ಭಾರತದ ರಸಮ್, ಸಾಂಬಾರ್, ಇಡ್ಲಿ ದೋಸಾ ಸೇರಿದಂತೆ ಕೆಲ ಖಾದ್ಯಗಳು. ಹಾಗೆಯೇ ಸ್ನಾಕ್ಸ್‌ನಲ್ಲಿ ಪಕೋಡಾ, ಚಹಾ ಜೊತೆ ಬಿಸಿಬಿ ತಿಂಡಿ ಸೇರಿದಂತೆ ಇತರ ಖಾದ್ಯಗಳನ್ನು ಉಲ್ಲೇಖಿಸಿದ್ದಾರೆ.
ವೃತ್ತಿಪರತೆ ಹಾಗೂ ಕೌಶಲ್ಯ ವಿಭಾಗದಲ್ಲಿ ಅಡುಗೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು, ಉತ್ತಮ ಖಾದ್ಯಗಳನ್ನು ತಯಾರಿಸುವುದು, ಆರೋಗ್ಯಕ್ಕೆ ತಕ್ಕಂತೆ ಉತ್ತಮ ಪೌಷ್ಠಿಕ ಆಹಾರಗಳ ತಯಾರಿ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಸಾಧನೆ ವಿಭಾಗದಲ್ಲಿ ಈಗಾಗಲೇ 50 ಮನೆಗಳಲ್ಲಿ ಅಡುಗೆ ತಯಾರಿಸಿದ್ದೇನೆ. ಉತ್ತಮ ಹಾಗೂ ಬಿಸಿ, ಶುಚಿ ರುಚಿ ಆಹಾರದ ಮೂಲಕ ಈ ಮನೆಗಳ ಸದಸ್ಯರ ಮನ ಗೆದ್ದಿದ್ದೇನೆ. ಆಹಾರಗಳು ಮನೆ ಊಟದ ರೀತಿಯೇ ಇದೆ . ಇದು ಮನೆಯ ಸದಸ್ಯರು ಪ್ರತಿ ದಿನ ನೀಡಿದ ಕಮೆಂಟ್ ಎಂದು ಬರೆದುಕೊಂಡಿದ್ದಾರೆ. ವಾರದ ಆಹಾರ ಖಾದ್ಯಗಳ ಪ್ಲಾನ್ ಮಾಡುವುದರಿಂದ ಕುಟುಂಬ ಸದಸ್ಯರ ಸಮಯ ಉಳಿತಾಯವಾಗಲಿದೆ ಎಂದು ರೆಸ್ಯೂಮ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಭಾಷೆಗಳಲ್ಲಿ ನೇಪಾಳಿ, ಹಿಂದಿ ಹಾಗೂ ಸ್ವಲ್ಪ ಇಂಗ್ಲೀಷ್ ಎಂದು ಬರೆದುಕೊಂಡಿದ್ದಾರೆ.
ಇದು ಬೆಂಗಳೂರಲ್ಲಿ ಮಾತ್ರ, ಬಾಡಿಗೆದಾರನ ಸ್ಟಾರ್ಟ್ಅಪ್ ಉದ್ಯಮಕ್ಕೆ ಮನೆ ಮಾಲೀಕನೇ ಟೆಕ್ ಗುರು!
ಇದೀಗ ಈ ರೆಸ್ಯೂಮ್ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇಷ್ಟೇ ಅಲ್ಲ ರಿತು ದೀದಿಗೆ 100ಕ್ಕೆ 100 ಅಂಕ ಎಂದಿದ್ದಾರೆ. ರಿತು ದೀದಿಗೆ ರೆಸ್ಯೂಮ್ ರೆಡಿ ಮಾಡಿ ಭಾರತಕ್ಕೆ ಪರಿಚಯಿಸಿದೆ ವರುಣ್ ಪೆರುಗೂ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.