ಸ್ಕೂಟರ್‌ನಲ್ಲಿ ತೆರಳುತ್ತಾ ಲ್ಯಾಪ್‌ಟಾಪ್ ಮೂಲಕ ವಿಡಿಯೋ ಮೀಟಿಂಗ್,ಬೆಂಗಳೂರಿನ ಬ್ಯೂಸಿ ಲೈಫ್ Video!
ಸಿಲಿಕಾನ್ ಸಿಟಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಎಲ್ಲರೂ ಬ್ಯೂಸಿ. ಒತ್ತಡದ ಕೆಲಸ, ಟ್ರಾಫಿಕ್ ಸೇರಿದಂತೆ ಹಲವು ಸವಾಲುಗಳು ಪ್ರತಿ ದಿನ ಎದುರಿಸಬೇಕು. ಇದೀಗ ವ್ಯಕ್ತಿಯೊಬ್ಬ ಸ್ಕೂಟರ್ ಮೂಲಕ ಬೆಂಗಳೂರು ಟ್ರಾಫಿಕ್ ರಸ್ತೆಯಲ್ಲಿ ತೆರಳುತ್ತಿದ್ದಂತೆ ವಿಡಿಯೋ ಕಾಲ್‌ನಲ್ಲಿ ಪಾಲ್ಗೊಂಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು(ಮಾ.25) ಹೈಟೆಕ್ ಬೆಂಗಳೂರಿನ ಟ್ರಾಫಿಕ್, ಉದ್ಯೋಗ, ಇಲ್ಲಿನ ಟೆಕ್ ಕುರಿತು ಸಾಕಷ್ಟು ಬಾರಿ ವೈರಲ್ ವಿಡಿಯೋಗಳು ಮೀಮ್ಸ್‌ಗಳು ಹರಿದಾಡಿದೆ. ಇದೀಗ ಕೆಲಸದ ಒತ್ತಡ, ಸಮಯದ ಕೊರತೆ, ಟ್ರಾಫಿಕ್ ಸೇರಿದಂತೆ ಎಲ್ಲವನ್ನೂ ವಿವರಿಸುವ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಸ್ಕೂಟರ್ ಮೂಲಕ ಬೆಂಗಳೂರು ರಸ್ತೆಯಲ್ಲಿ ತೆರಳುವ ವ್ಯಕ್ತಿಯೊಬ್ಬರ ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದಂತೆ ವಿಡಿಯೋ ಕಾಲ್‌ನಲ್ಲಿ ಪಾಲ್ಗೊಂಡಿದ್ದಾನೆ. ಹೆಚ್ಚಿನವರು ಫೋನ್ ಮೂಲಕವೇ ಅಟೆಂಡ್ ಮಾಡುತ್ತಾರೆ ಇದರಲ್ಲೇನು ವಿಶೇಷ ಅಂತೀರಾ? ಇಲ್ಲೆ ಇರೋದು ನೋಡಿ, ಈತನ ತನ್ನ ಲ್ಯಾಪ್‌ಟಾಪ್ ತೆರೆದಿಟ್ಟ ವಿಡಿಯೋ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದಾನೆ. ಹಾಗಂತ ಸ್ಕೂಟರ್ ನಿಲ್ಲಿಸಿ ಪಾಲ್ಗೊಂಡಿಲ್ಲ. ಟ್ರಾಫಿಕ್ ರಸ್ತೆಯಲ್ಲಿ ತೆರಳುತ್ತಾ ವಿಡಿಯೋ ಮೀಟಿಂಗ್ ಅಟೆಂಡ್ ಮಾಡಿದ್ದಾನೆ.
ಪೀಕ್ ಬೆಂಗಳೂರು ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಜೊತೆಗೆ ಬೆಂಗಳೂರು ಆರಂಭಿಕರಿಗಲ್ಲ ಎಂದು ಬರೆಯಲಾಗಿದೆ. ಇಲ್ಲಿ ಅನುಭವದ ಜೊತೆಗೆ ಟೆಕ್ ಸ್ಪರ್ಶವೂ ಬೇಕೂ ಅನ್ನೋದನ್ನು ಪರೋಕ್ಷವಾಗಿ ಹೇಳಲಾಗಿದೆ. ಆದರೆ ಹೈಟೆಕ್ ಬೆಂಗಳೂರಿನ ಈ ವಿಡಿಯೋ ಇದೀಗ ದೇಶಾದ್ಯಂತ ಭಾರಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಪೇಪರ್ ಬ್ಯಾಗನ್ನೇ ಹೆಲ್ಮೆಟ್ ಆಗಿ ಬಳಸಿದ ಸವಾರ, ಶೇ.100 ರಷ್ಟು ಮರುಬಳಕೆ ಎಂದ ಜನ!
ಕಚೇರಿಗೆ ತೆರಳುವ ಡ್ರೆಸ್ ಧರಿಸಿವು ವ್ಯಕ್ತಿ ಆ್ಯಕ್ಟಿವಾ ಸ್ಕೂಟರ್ ಮೂಲಕ ಸ್ಕೂಟರ್ ಮೂಲಕ ತೆರಳುತ್ತಿದ್ದಾನೆ. ಬೆನ್ನಿಗೆ ಬ್ಯಾಗ್ ಕೂಡ ಹಾಕಿಕೊಂಡಿದ್ದಾನೆ. ಬೈಕ್ ಮೂಲಕ ತೆರಳುತ್ತಿರುವ ಈತನ ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟಿದ್ದಾನೆ. ಈ ಲ್ಯಾಪ್‌ಟಾಪ್ ಸೂಕ್ಷ್ಮವಾಗಿ ಗಮನಿಸಿದರೆ ಈತನ ವಿಡಿಯೋ ಮೀಟಿಂಗ್‌ನಲ್ಲಿರುವುದು ತಿಳಿಯುತ್ತದೆ.
ಸ್ಕೂಟರ್ ಮೂಲಕ ತೆರಳುತ್ತಲೇ ತೊಡೆಯ ಮೇಲೆ ಲ್ಯಾಪ್‌ಟಾಪ್ ತೆರೆದಿಟ್ಟು ವಿಡಿಯೋ ಮೀಟಿಂಗ್‌ನಲ್ಲಿ ಪಾಲ್ಗೊಂಡ ಈ ವಿಡಿಯೋ ಹಲವರಿಗೆ ಅಚ್ಚರಿ ತಂದಿದೆ. 70 ಗಂಟೆ ಕೆಲಸ ಪೂರೈಸಲು ಈತ ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನಗೆ ತೆರಳುವಾಗಲೂ ಕೆಲಸ ಮಾಡುತ್ತಾನೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದು ಅಪಾಯಾಕಾರಿ, ರೈಡಿಂಗ್ ವೇಳೆ ಈ ಕಸರತ್ತು ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ.
Bengaluru is not for beginners 😂
— Peak Bengaluru (@peakbengaluru) March 23, 2024
(🎥: @nikil_89) pic.twitter.com/mgtchMDryW
ಕಚೇರಿಯಿಂದ ಬೇಗನೆ ಮನೆಗೆ ಹೊರಟ ಬೆನ್ನಲ್ಲೇ ವಿಡಿಯೋ ಕಾಲ್ ಮೀಟಿಂಗ್ ಕರೆದಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಮತ್ತೆ ಕಚೇರಿಗೆ ತೆರಳಿದರೆ ಮೀಟಿಂಗ್ ಮುಗಿಯಲಿದೆ. ಹೀಗಾಗಿ ಮನೆಯತ್ತ ಸಾಗುತ್ತಾ ಮೀಟಿಂಗ್ ಅಟೆಂಡ್ ಮಾಡಿದ್ದಾನೆ, ಇದು ಹೈಟೆಕ್ ಬೆಂಗಳೂರು ಇಲ್ಲಿ ಎಲ್ಲವೂ ಸಾಧ್ಯ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
Bengaluru: ಟ್ರಾಫಿಕ್ ಜಾಮ್‌ನಲ್ಲೇ ಬಟಾಣಿ ಸಿಪ್ಪೆ ಸುಲಿದ ಮಹಿಳೆ, ಪೋಸ್ಟ್ ವೈರಲ್
ಲ್ಯಾಪ್‌ಟಾಪ್ ಅನ್ನೋ ಅದರ ಹೆಸರಿನ ಅರ್ಥಕ್ಕೆ ತಕ್ಕಂತೆ ಬಳಿಸದ ಏಕೈಕ ವ್ಯಕ್ತಿ ಈತ. ಈತನಿಗೆ ಯಾರಾದರೂ ಒಂದು ಪ್ರಶಸ್ತಿ ನೀಡಿ ಎಂದು ಕೆಲವರು ಸಲಹೆ ನೀಡದ್ದಾರೆ.