ಯಾರಿಗೆ ಹೇಳೋಣ ಬೆಂಗಳೂರಿನ ಮನೆ ಬಾಡಿಗೆ? 25 ಲಕ್ಷ ರೂ ಡಿಪಾಸಿಟ್, 2.5 ಲಕ್ಷ ರೆಂಟ್‌ಗೆ ದಂಗಾದ ಜನ!
ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆಯುವುದು ಸುಲಭದ ಮಾತಲ್ಲ. ನಿಮ್ಮ ಮಾರ್ಕ್ಸ್, ಉದ್ಯೋಗ ಸೇರಿದಂತೆ ಹಲವು ವಿಚಾರಗಳು ಪ್ರಮುಖ. ಇದರ ಜೊತೆಗೆ ಮಾಲೀಕರ ಇಂಟರ್‌ವ್ಯೂವ್ ಎದುರಿಸಬೇಕು. ಇಷ್ಟೆಲ್ಲಾ ಒಕೆಯಾದರೆ ಬಾಡಿಗೆ ಹಾೂ ಡೆಪಾಸಿಟ್ ನೋಡಿ ಪ್ರಜ್ಞೆ ತಪ್ಪವು ಸಾಧ್ಯತೆ ಇದೆ. ಕಾರಣ ಹೆಚ್‌ಎಸ್ಆರ್ ಲೇಔಟ್‌ನ ಫ್ಲ್ಯಾಟ್ ಒಂದಕ್ಕೆ ಡೆಪಾಸಿಟ್ 25 ಲಕ್ಷ ರೂಪಾಯಿ ಡೆಪಾಸಿಟ್, ಪ್ರತಿ ತಿಂಗಳು 2.5 ಲಕ್ಷ ರೂ ಬಾಡಿಗೆ.
ಬೆಂಗಳೂರು(ಜು.29) ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆಯುವುದು ಸುಲಭದ ಮಾತಲ್ಲ. ಬಾಡಿಗೆ ಪಡೆಯಲು ಹಲವು ಸುತ್ತಿನ ಸಂದರ್ಶನ ಪಾಸ್ ಆಗಬೇಕು.ಲಿಂಕ್ಡ್‌ಇನ್ ಪ್ರೋಫೈಲ್, ನಿಮ್ಮ ಉದ್ಯೋಗ, ವಿದ್ಯಾಭ್ಯಾಸ, ಮಾರ್ಕ್ಸ್ ಎಲ್ಲವೂ ಮುಖ್ಯ. ಇನ್ನು ಹೇಗಾದರೂ ಮಾಡಿ ಇವೆಲ್ಲವೂ ಮಾಲೀಕ ಕೇಳುವ ಬೇಡಿಕೆಯಂತೆ ಇದ್ದರೆ, ಮತ್ತೆ ಬಾಡಿಗೆ ಹಾಗೂ ಡೆಪಾಸಿಟ್ ಟೆನ್ಶನ್. ಇದೀಗ ವರ್ಕ್ ಫ್ರಮ್ ಹೋಮ್ ಅಂತ್ಯಗೊಂಡಿರುವ ಕಾರಣ ಬೆಂಗಳೂರ ಮನೆ ಮಾಲೀಕರು ಬಾಡಿಗೆ ಹೆಚ್ಚಿಸಿದ್ದಾರೆ. ಇದೀಗ ಬೆಂಗಳೂರ ಮನೆ ಬಾಡಿಗೆ ಮತ್ತೊಂದು ಕಹಾನಿ ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ಹಾಗೂ ಡೆಪಾಸಿಟ್ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಊಹಿಸಿಕೊಳ್ಳಲು ಅಸಾಧ್ಯ. ಹೆಚ್ಎಸ್ಆರ್ ಲೇಔಟ್‌ನಲ್ಲಿನ ಮನೆಯೊಂದಕ್ಕೆ ಡೆಪಾಸಿಟ್ 25 ಲಕ್ಷ ರೂಪಾಯಿ, ಪ್ರತಿ ತಿಂಗಳ ಬಾಡಿಗೆ 2.5 ಲಕ್ಷ ರೂಪಾಯಿ. ಇದು ನೋ ಬ್ರೋಕರ್‌ನಲ್ಲಿ ಮಾಲೀಕ ಹಾಕಿರುವ ಮಾಹಿತಿ. ಈ ಮನೆಯನ್ನು ಬಾಡಿಗೆ ಪಡೆಯಬೇಕಾ ಅಥವಾ ಖರೀದಿಸಬೇಕಾ ಎಂದು ಹಲವರು ಪ್ರಶ್ನಿಸಿದ್ದಾರೆ.
ತೇಜಸ್ವಿ ಶ್ರೀವಾತ್ಸವ್ ಅನ್ನೋ ವ್ಯಕ್ತಿ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿರುವ ಪರಿಪಾಠವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಳಿಸಿದ್ದಾರೆ. ತೇಜಸ್ವಿ ಶ್ರೀವಾತ್ಸವ್ ಹಲವು ಮಾರ್ಗದ ಮೂಲಕ ಮನೆ ಹುಡುಕಾಟ ಆರಂಭಿಸಿದ್ದಾರೆ. ಮನೆ ಬಾಡಿಗೆ, ಮಾರಾಟ ಪ್ಲಾಟ್‌ಫಾರ್ಮ್ ಮೂಲಕ ಹುಡುಕಾಟವನ್ನು ನಡೆಸಿದ್ದಾರೆ. ಈ ವೇಳೆ ನೋ ಬ್ರೋಕರ್ ವೆಬ್‌ಸೈಟ್‌ನಲ್ಲಿ ಮನೆಯೊಂದು ಪತ್ತೆಯಾಗಿದೆ. ಈ ಮನೆಯ ಬಾಡಿಗೆ ಹಾಗೂ ಡೆಪಾಸಿಟ್ ನೋಡಿ ತೇಜಸ್ವಿ ಶ್ರೀವಾತ್ಸವ್ ದಂಗಾಗಿದ್ದಾರೆ.
ಬಾಡಿಗೆ ಮನೆಗೂ ಬೆಂಗಳೂರಿನಲ್ಲಿ ಇಂಟರ್ವ್ಯೂ, ಇದು ಸಿಲಿಕಾನ್ ಸಿಟಿಯಲ್ಲಿ ಮಾತ್ರ ಸಾಧ್ಯ!
ಹೆಚ್‌ಎಸ್ಆರ್ ಲೇಔಟ್‌ನಲ್ಲಿನ ಮನೆಯೊಂದು ವೆಬ್‌ಸೈಟ್ ಲಿಸ್ಟ್‌ನಲ್ಲಿ ಹಾಕಲಾಗಿತ್ತು. ಇದು 4 ಬಿಹೆಚ್‌ಕೆ ಮನೆ. ಸರಿಸುಮಾರು 5,000 ಚದರ ಅಡಿ ವಿಸ್ತೀರ್ಣ. ಇವೆಲ್ಲಾ ಒಕೆ, ಮನೆ ಬಾಡಿಗೆ ಹಾಗೂ ಅಡ್ವಾನ್ಸ್ ನೋಡಿ ತೇಜಸ್ವಿ ಬೆಚ್ಚಿ ಬಿದ್ದಿದ್ದಾರೆ. ಈ ಮನೆಗೆ 25 ಲಕ್ಷ ರೂಪಾಯಿ ಡೆಪಾಸಿಟ್. ಇನ್ನು ಪ್ರತಿ ತಿಂಗಳ ಬಾಡಿಗೆ 2.5 ಲಕ್ಷ ರೂಪಾಯಿ.
ಈ ಮನೆಯ ಜಾಹೀರಾತು ಭಾರಿ ಚರ್ಚೆಯಾಗುತ್ತಿದೆ. ಇಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ತೇಜಸ್ವಿ ಶ್ರೀವಾತ್ಸವ್ ತಮ್ಮ ಟ್ವಿಟರ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಸಾಲದ ಜೊತೆ ಮತ್ತೊಂದು ಆಯ್ಕೆಯನ್ನು ನೀಡಬೇಕು. ಕಿಡ್ನಿ ಡೋನೇಷನ್‌ಗೆ ಅವಕಾಶ ನೀಡಬೇಕು ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆಯೋಕು ಡಿಸ್ಟಿಂಕ್ಷನ್ ತಗೋಬೇಕಾ? ಮಾರ್ಕ್ಸ್ ನೋಡಿ ಮನೆ ಕೊಡಲ್ಲ ಎಂದ ಓನರ್
ಈ ಪೋಸ್ಟ್ ಹಾಕಿದ ಬೆನ್ನಲ್ಲೇ ಹಲವು ಬೆಂಗಳೂರಿಗರು ಪ್ರತಿಕ್ರಿಯೆ ನೀಡಿದ್ದಾರೆ. 25 ಲಕ್ಷ ರೂಪಾಯಿ ಡೆಪಾಸಿಟ್ ಹಾಗೂ ಪ್ರತಿ ತಿಂಗಳು 2.5 ಲಕ್ಷ ರೂಪಾಯಿ ಬಾಡಿಗೆ ನೀಡುವ ಬದಲು, ಇದೇ ಮೊತ್ತಕ್ಕೆ ಬೆಂಗಳೂರಲ್ಲಿ ಮನೆ ಖರೀದಿಸಲು ಸಾಧ್ಯವಿದೆ. 25 ಲಕ್ಷ ರೂಪಾಯಿ ಅಡ್ವಾನ್ಸ್ ಹಣ ನೀಡಿ, ಉಳಿದ ಹಣ ಸಾಲ ಮಾಡಿದರೂ ತಿಂಗಳ ಕಂತು 1 ಲಕ್ಷ ರೂಪಾಯಿ ದಾಟುವುದಿಲ್ಲ ಎಂದು ಸೂಚಿಸಿದ್ದಾರೆ.
ಮತ್ತೊಬ್ಬ ಪ್ರತಿಕ್ರಿಯೆ ನೀಡಿದ್ದು, 25 ಲಕ್ಷರೂಪಾಯಿಗೆ ದಂಗಾಗಬೇಡಿ, 30 ಲಕ್ಷ ರೂಪಾಯಿ ಡೆಪಾಸಿಟ್ ಹಣ ಕೇಳುತ್ತಿರುವ ಹಲವು ಮನೆಗಳಿವೆ. ಇನ್ನು ಇದರ ಬಾಡಿಗೆ 3 ಲಕ್ಷ ರೂಪಾಯಿ ಮೇಲಿದೆ. ಹೀಗಾಗಿ ಬೆಂಗಳೂರಲ್ಲಿ ಮನೆ ಬಾಡಿಗೆ ಸುಲಭದ ಮಾತಲ್ಲ. ಮನೆ ಮಾಲೀಕರ ನೋಟದಲ್ಲಿ ಬೆಂಗಳೂರಿನಲ್ಲಿರುವ ಎಲ್ಲರೂ ಕೋಟಿ ಕೋಟಿ ಆದಾಯ ಹೊಂದಿದವರಾಗೆ ಕಾಣುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.