ಜನವರಿ 13-14ರಂದು ಬೆಂಗಳೂರಿಗೆ ಈ ವರ್ಷದ ಮೊದಲ ಮಳೆ! ಚಳಿ ಜತೆಗೆ ಮಳೆಯ ಧಮಾಕಾ!
ಬೆಂಗಳೂರು ಜನವರಿ 13 ಮತ್ತು 14ರಂದು ತನ್ನ ಈ ವರ್ಷದ ಮೊದಲ ಮಳೆಯನ್ನು ಅನುಭವಿಸಲು ಸಿದ್ಧವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈ ವರ್ಷ ಬೆಂಗಳೂರಿನ ಪಾಲಿಗೆ ಸೆಕೆ- ಚಳಿ- ಮಂಜು ಮಳೆಗಳ ರೋಲರ್ ಕೋಸ್ಟರ್ ರೈಡ್ ಅನ್ನಬಹುದು. ಬೆಂಗಳೂರಿನ ಹವಾಮಾನ ವಿಪರೀತ ಅನಿರೀಕ್ಷಿತ ಆಗಿಬಿಟ್ಟಿದೆ.
ಈ ಸಲ ಬೆಂಗಳೂರಿಗೆ ಮಳೆಗಾಲ ಬೇಗನೆ ಕಾಲಿಡಲಿದೆ. ಎಷ್ಟು ಬೇಗ ಎಂದರೆ, ನಾಲ್ಕೈದು ತಿಂಗಳಿಗೂ ಮೊದಲೇ! ಹೌದು, ಹವಾಮಾನ ಶಾಸ್ತ್ರಜ್ಞರು ಹೇಳಿರುವ ಪ್ರಕಾರ, ಬೆಂಗಳೂರು ತನ್ನ ಈ ವರ್ಷದ ಮೊದಲ ಮಳೆಯನ್ನು ಜನವರಿ ಎರಡನೇ ವಾರದಲ್ಲಿಯೇ ಕಾಣಲಿದೆ. ನಿಜ, ದೀರ್ಘಕಾಲದ ಶೀತ ಮತ್ತು ಶುಷ್ಕ ಹವಾಮಾನದ ನಂತರ, ಬೆಂಗಳೂರು ಜನವರಿ 13 ಮತ್ತು 14ರಂದು ತನ್ನ ಈ ವರ್ಷದ ಮೊದಲ ಮಳೆಯನ್ನು ಅನುಭವಿಸಲು ಸಿದ್ಧವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವು ರೂಪುಗೊಳ್ಳುವುದರಿಂದ ನಗರದಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನ ಅನೇಕ ಭಾಗಗಳಲ್ಲಿ ಮಧ್ಯಮ ಪ್ರಮಾಣದ ಮಂಜು ಕವಿಯಬಹುದು. ಬೆಳಗ್ಗೆ ಹಾಗೂ ಸಂಜೆಗಳು ಮಂಜಿನಿಂದ ಆವೃತವಾಗಬಹುದು. ಈ ಸಲದ ಚಳಿಗಾಲ ಕೂಡ ಹೆಚ್ಚು ಮಂಜಿನಿಂದ ಆವೃತವಾಗಿರುವ ನಿರೀಕ್ಷೆ ಇದೆ.
ಈ ವರ್ಷ ಬೆಂಗಳೂರಿನ ಪಾಲಿಗೆ ಸೆಕೆ- ಚಳಿ- ಮಳೆಗಳ ರೋಲರ್ ಕೋಸ್ಟರ್ ರೈಡ್ ಅನ್ನಬಹುದು. ಒಮ್ಮೆ ಚಳಿ 12 ಡಿಗ್ರಿಗೂ ಕೆಳಗೆ ಇಳಿಯುತ್ತದೆ; ಮರುದಿನವೇ ಬಿಸಿಲು ಜೋರಾಗಿ ಬಾರಿಸುತ್ತದೆ. ಮರುದಿನ ನಗರವಿಡೀ ಹನಿ ಹನಿ ಮಳೆ. ಆಫೀಸಿಗೆ ಹೋಗಲು ಪಡಿಪಾಟಲು. ಸಂಜೆ ಜೋರಾಗಿ ಮಳೆ ಸುರಿದು ರಸ್ತೆ ಸಂಚಾರ ಅಸ್ತವ್ಯಸ್ತ. ಮರುದಿನ ಮೈ ಹುರಿಯುವಂಥ ಬಿಸಿಲು. ಅದೇ ದಿನ ರಾತ್ರಿ ಕುಟುಕುಟು ಚಳಿ! ಇದರ ನಡುವೆಯೇ ಮಂಜು ಕವಿದ ಸಂಜೆ- ಮುಂಜಾನೆ.
ಹೀಗಾಗಲು ಕಾರಣವೇನು? ಇದಕ್ಕೆ ಬಂಗಾಲ ಕೊಲ್ಲಿಯಲ್ಲಿ ಆಗುತ್ತಿರುವ ಹವಾಮಾನ ವಿಪ್ಲವಗಳು, ಆಗಮಿಸುತ್ತಿರುವ ಸೈಕ್ಲೋನ್‌ಗಳು ಕಾರಣ. ಎಲ್ ನಿನೋ ಎಂದು ಕರೆಯಲ್ಪಡುವ, ಪೆಸಿಫಿಕ್ ಸಾಗರದ ಬಿಸಿನೀರಿನ- ತಣ್ಣೀರಿನ ಪ್ರವಾಹಗಳು ದಿಕ್ಕು ಬದಲಿಸಿ ನುಗ್ಗುವುದು ಹಾಗೂ ಸುಳಿಸುತ್ತುವುದು ಕಾರಣ. ಇದರಿಂದ ಸಾಗರದ ಮೇಲಿನ ಹವೆ ಇದ್ದಕ್ಕಿದ್ದಂತೆ ಬದಲಾಗುತ್ತದೆ.
ಬೆಂಗಳೂರು ನಗರದಲ್ಲಿ ಈ ವಾರದಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಕೆಯಾಗುತ್ತಿದ್ದು, ಬಂಗಾಳಕೊಲ್ಲಿಯಿಂದ ಪೂರ್ವ ದಿಕ್ಕಿನ ಮಾರುತಗಳು ಹರಿದುಬರುತ್ತಿವೆ. ಕನಿಷ್ಠ ತಾಪಮಾನದಲ್ಲಿ ಇತ್ತೀಚಿನ ಏರಿಕೆಯ ಹೊರತಾಗಿಯೂ, ಜನವರಿ 14 ರ ನಂತರ ತಾಪಮಾನದಲ್ಲಿ ಕುಸಿತವನ್ನು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಕೇಂದ್ರ ಹೇಳಿದೆ. ತಾಪಮಾನದಲ್ಲಿನ ಹೆಚ್ಚಳವು ಮಧ್ಯಮ ಮಂಜು ಅಥವಾ ಮುಂಜಾನೆಯ ಮಂಜಿನ ರಚನೆಯ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ.
ವಿಶೇಷ ಅಂದರೆ ಮಂಜು ಮತ್ತು ಉಷ್ಣತೆಗೆ ನೇರವಾಗಿ ಸಂಬಂಧವಿಲ್ಲ. ತಾಪಮಾನವು 20°C ಮೀರಿದರೂ ಮಂಜು ಇನ್ನೂ ಸುರಿಯುತ್ತಿರಬಹುದು. ಮಂಜು ಮುಖ್ಯವಾಗಿ ಮೂರು ಅಂಶಗಳ ಮೇಲೆ ಅವಲಂಬಿತವಾಗಿದೆ: ತಂಪಾದ ಮೇಲ್ಮೈ ತಾಪಮಾನ, ಕಡಿಮೆ ಗಾಳಿಯ ವೇಗ ಮತ್ತು ಸ್ಪಷ್ಟವಾದ ಆಕಾಶ. ಕಳೆದ ಎರಡು ದಿನಗಳಲ್ಲಿ, ಬೆಂಗಳೂರಿನ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದ್ದು, 16.3°C ಮತ್ತು 17.3°C ನಡುವೆ ಏರಿಳಿತವಾಗಿದೆ.
ಬೆಂಗಳೂರಿಗೆ ನಂ.1 ಸ್ಥಾನ, ಮಹಿಳೆಯರಿಗೆ ಸಿಲಿಕಾನ್ ಸಿಟಿ ಭಾರತದ ಅತ್ಯುತ್ತಮ ನಗರ
IMD ಡೇಟಾವು ಬೆಂಗಳೂರಿನಲ್ಲಿ ಜನವರಿಯ ಸರಾಸರಿ ದೈನಂದಿನ ಕನಿಷ್ಠ ತಾಪಮಾನ ಸಾಮಾನ್ಯವಾಗಿ 15.8°C ಆಗಿದೆ ಎಂದು ಸೂಚಿಸಿದೆ. ಆದರೆ, ಶುಕ್ರವಾರ ನಗರದಲ್ಲಿ ಕನಿಷ್ಠ ತಾಪಮಾನ 17.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 16.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಎರಡು ವಾರಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಈ ವರ್ಷದ ಅತೀ ಕನಿಷ್ಠ ಅಂದರೆ 12°C ತಾಪಮಾನ ದಾಖಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಎರಡು ದಿನಗಳ ಅವಧಿಯಲ್ಲಿ ಮಳೆ ಬೀಳುವ ನಿರೀಕ್ಷೆಯಿರುವ ಪೂರ್ವ ಮಾರುತಗಳು ಬಲಗೊಳ್ಳುವುದರಿಂದ ಮಂಜು ಕಡಿಮೆಯಾಗಬಹುದು ಎಂದು IMD ಅಧಿಕಾರಿಗಳು ಹೇಳುತ್ತಾರೆ.
Bengaluru: ಈಗ ಬೆಂಗಳೂರು ಏರ್‌ಪೋರ್ಟ್‌ನಲ್ಲೂ ಸಿಗಲಿದೆ ಸಿಟಿಆರ್‌ನ ಗರಿಗರಿ ಬೆಣ್ಣೆದೋಸೆ!