ಬೆಂಗಳೂರು(ನ.13): ಅಡುಗೆ ಅನಿಲ ಸೋರಿಕೆಯಿಂದಾಗಿ ಉಸಿರು ಗಟ್ಟಿ ದಂಪತಿ ಮಲಗಿದಲ್ಲೇ ಅಸುನೀಗಿರುವ ದಾರುಣ ಘಟನೆ ಬೇಗೂರಿನ ದೇವರ ಚಿಕ್ಕನಹಳ್ಳಿಯಲ್ಲಿ ಮಂಗಳವಾರ ನಡೆದಿದೆ. ದೇವರಚಿಕ್ಕನಹಳ್ಳಿ ನಿವಾಸಿ ನಾಗಮುನಿ(27) ಮತ್ತು ಪದ್ಮಾವತಿ (30) ಮೃತ ದಂಪತಿ.

ಆಂಧ್ರಪ್ರದೇಶದ ಚಿತ್ತೂರು ಮೂಲದ ದಂಪತಿ ಐದು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದು, ದೇವರ ಚಿಕ್ಕನಹಳ್ಳಿಯಲ್ಲಿ ಚಿಕ್ಕದೊಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ನಾಗಮುನಿ ಅವರು ಕಾರ್ಪೆಂಟರ್ ಆಗಿದ್ದರೆ, ಪದ್ಮಾವತಿ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದರು. ದಂಪತಿಯ ಮಕ್ಕಳಿಬ್ಬರು ಆಂಧ್ರಪ್ರದೇಶದ ಅಜ್ಜನ ಮನೆಯಲ್ಲಿ ಇದ್ದಾರೆ.

ಬೆಳೆ ತ್ಯಾಜ್ಯ ಸುಡುವಿಕೆ ಏರಿಕೆ: ದಿಲ್ಲಿ ಮಾಲಿನ್ಯ ಮತ್ತೆ ಗಂಭೀರ.

ಬೆಳಗ್ಗೆ ನಸುಕಿನಲ್ಲಿ ಕಾಫಿ ಮಾಡಲು ಗ್ಯಾಸ್‌ಸ್ಟೌವ್ ಮೇಲೆ ಪದ್ಮಾವತಿ ಹಾಲು ಇಟ್ಟಿದ್ದು, ಮರೆತು ನಿದ್ರೆಗೆ ಜಾರಿದ್ದಾರೆ. ಹಾಲು ಉಕ್ಕಿ ಸ್ಟೌವ್ ಮೇಲೆ ಸುರಿದು ಬೆಂಕಿ ನಂದಿ ಹೋಗಿದೆ. ಆದರೆ ಅನಿಲ ಸೋರಿಕೆಯಾಗಿದೆ. ನಾಗಮುನಿ ದಂಪತಿ ವಾಸವಾಗಿದ್ದ ಮನೆ ತೀರಾ ಚಿಕ್ಕದಾಗಿದೆ. ಅಲ್ಲದೆ, ಇಡೀ ಮನೆಗೆ ಒಂದೇ ಕಿಟಕಿ ವ್ಯವಸ್ಥೆ ಇದ್ದು, ಆ ಇದ್ದ ಕಿಟಕಿಯನ್ನು ಮುಚ್ಚಲಾಗಿತ್ತು. ಹೀಗಾಗಿ ಅನಿಲ ಇಡೀ ಮನೆ ಆವರಿಸಿದ್ದು, ನಿದ್ರೆಗೆ ಜಾರಿದ್ದ ದಂಪತಿ ಉಸಿರುಗಟ್ಟಿ ನಿದ್ರಾ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ.

ಬೈಕ್‌ಗೆ ಬೆಂಕಿಹಚ್ಚಿ ಹಣ ಕೇಳಿದವ್ರಿಗೆ ಬಿತ್ತು ಗುಂಡೇಟು..!

ಸಂಜೆಯಾದರೂ ದಂಪತಿ ಹೊರಗೆ ಬಾರದ ಕಾರಣ ಅನುಮಾನಗೊಂಡ ಸ್ಥಳೀಯರು ರಾತ್ರಿ ಏಳು ಗಂಟೆ ಸುಮಾರಿಗೆ ಕಿಟಕಿ ತೆರೆದು ನೋಡಿದ್ದು, ದಂಪತಿ ನಿದ್ರಾ ಸ್ಥಿತಿಯಲ್ಲಿರುವುದು ಕಾಣಿಸಿದೆ. ಎಷ್ಟು ಕೂಗಿದರೂ ದಂಪತಿ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸರು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಅನಿಲ ಸೋರಿಕೆಯಾಗಿರುವುದು ಕಂಡು ಬಂದಿದೆ.

ಅನೈತಿಕ ಸಂಬಂಧಕ್ಕೆ ಒಪ್ಪದ ಸೊಸೆಯನ್ನೇ ಕೊಂದ ಮಾವ..!

ನವೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: