ಮಂಡ್ಯ(ನ.11): ಅನೈತಿಕ ಸಂಬಂಧಕ್ಕೆ ಪೀಡುಸುತ್ತಿದ್ದ ಮಾವ ತನ್ನ ಸೊಸೆಯನ್ನೇ ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ತನ್ನ ಸೊಸೆ ವೀಣಾ(26) ಎಂಬುವವರನ್ನೇ ಗ್ರಾಮದ ಆರೋಪಿ ನಾಗರಾಜು ಕೊಲೆ ಮಾಡಿದ್ದಾರೆ.

ಆರೋಪಿ ಪುತ್ರ ಅನಿಲ್‌ಗೆ ಹಾಸನ ಜಿಲ್ಲೆಯ ಜೋಗನಹಳ್ಳಿ ಗ್ರಾಮದ ಸಿದ್ದೇಗೌಡರ ಪುತ್ರಿ ವೀಣಾಳನ್ನು ಕಳೆದ 6 ವರ್ಷದ ಹಿಂದೆಯೇ ವಿವಾಹವಾಗಿದ್ದನು. ಈ ದಂಪತಿಗೆ ಸಿಂಚನ (4) ಹಾಗೂ ದರ್ಶಿನಿ (3) ಎಂಬ ಹೆಣ್ಣು ಮಕ್ಕಳಿದ್ದಾರೆ. ಅನೈತಿಕ ಸಂಬಂಧದ ಮಾಡುವಂತೆ ಒತ್ತಾಯಿಸುತ್ತಿದ್ದ ಮಾವನ ಉಪಟಳ ತಡೆಯಲಾರದೇ ಗಂಡನಿಗೆ ವೀಣಾ ಎಲ್ಲಾ ವಿಷಯವನ್ನು ತಿಳಿಸಿದ್ದಾರೆ.

ಗ್ರಾಮದ ಮುಖಂಡರಿಂದ ಬುದ್ಧಿವಾದ:

ತದನಂತರ ತಂದೆ ನಾಗರಾಜುವಿಗೆ ಗ್ರಾಮದ ಮುಖಂಡರು ಬುದ್ದಿ ಹೇಳಿದ್ದಾರೆ. ಆ ವೇಳೆಯಲ್ಲಿ ನಾಗರಾಜು, ವೀಣಾ ನನ್ನ ಮಗಳಿದ್ದಂತೆ ಎಂದು ತಪ್ಪೊಪ್ಪಿಕೊಂಡು ಒಟ್ಟಾಗಿ ಇರುವಂತೆ ಬೇಡಿಕೊಂಡಿದ್ದಾನೆ. ಇದಕ್ಕೆ ವೀಣಾ ಮತ್ತು ಅನಿಲ್ ಒಪ್ಪಿಗೆ ಸೂಚಿಸದೇ ನಾವು ಬೇರೆ ಇರುತ್ತೇವೆ ಎಂದು ಹೇಳಿಕೊಂಡು ಚಿಲ್ಲರೆ ಅಂಗಡಿ ಇಟ್ಟುಕೊಂಡು ಕಳೆದ ಮೂರು ವರ್ಷಗಳಿಂದಲೂ ಬೇರೆಯಾಗಿ ಜೀವನ ಸಾಗಿಸುತ್ತಿದ್ದರು.

ಪೊಲೀಸ್ ಕಂಪ್ಲೇಟ್ ಕೊಟ್ಟರೂ ನಿಲ್ಲಲಿಲ್ಲ ಕಾಟ:

ಆದರೂ ಕೂಡ ನ್ಯಾಯ ಪಂಚಾಯ್ತಿಗೆ ಒಪ್ಪದ ನಾಗರಾಜು, ವೀಣಾಳನ್ನು ಸಿಕ್ಕಸಿಕ್ಕಲೆಲ್ಲಾ ನನ್ನ ಜೊತೆ ಬಾ ಎಂದು ಅಸಹ್ಯವಾಗಿ ನುಡಿದು ಆಕೆಯ ಜೊತೆ ಜಗಳವಾಡುತ್ತಿದ್ದನಂತೆ. ಇವನ ಕಿರಿಕಿರಿಗೆ ಬೇಸತ್ತು ಇತ್ತೀಚೆಗೆ ಮಂಡ್ಯ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದಾಗ ಆತ ಕೋರ್ಟ್‌ನಲ್ಲಿ ಜಾಮೀನು ಪಡೆದು ಕೆಲದಿನ ಸುಮ್ಮನಿದ್ದನು.

ಕೊಲ್ಲುತ್ತೇನೆಂದು ಬೆದರಿಸಿದ್ದಾತ ಕೊಂದೇ ಬಿಟ್ಟ:

ಮನೆಯಲ್ಲಿದ್ದ ತನ್ನ ಮಕ್ಕಳನ್ನು ನೋಡಲೆಂದು ಎಂದಿನಂತೆ ಅಂಗಡಿಯಿಂದ ಶನಿವಾರ ಸಂಜೆ ಹೊರ ಬಂದಿದ್ದಾಳೆ. ಒಬ್ಬಳೇ ಸಿಗು ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ನಾಗರಾಜುವಿಗೆ ವೀಣಾ ಒಬ್ಬಂಟಿಯಾಗಿ ಸಿಕ್ಕಿದ್ದಾಳೆ. ಅವಳ ಮೇಲೆ ಚಾಕು ಹಿಡಿದು ರಾಕ್ಷಸನಂತೆ ಮೈಮೇಲೆ ಎರಗಿದ್ದಾನೆ. ವೀಣಾ ತಕ್ಷಣ ಚೀರಿಕೊಂಡಿದ್ದಾಳೆ. ಅನತಿ ದೂರದಲ್ಲಿದ್ದ ಗ್ರಾಮದ ಕೆಲ ಯುವಕರು ಮತ್ತು ಮಹಿಳೆಯರು ನಾಗರಾಜುವಿನ ಕೈಯಲ್ಲಿದ್ದ ಚಾಕು ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಅವರಿಗೆ ಚಾಕು ಹಾಕಲು ಮುಂದಾದಾಗ ಅವರು ಸ್ವಲ್ಪ ಹಿಂದೆ ಸರಿದಿದ್ದಾರೆ. ಆ ಸಂದರ್ಭದಲ್ಲಿ ವೀಣಾ ಹೊಟ್ಟೆಗೆ, ಕುತ್ತಿಗೆಗೆ ಮನಸೋ ಇಚ್ಚೆ ತಿವಿದಿದ್ದಾನೆ. ಚಾಕುವಿನಿಂದ ತಿವಿದ ರಭಸಕ್ಕೆ ವೀಣಾ ಸ್ಥಳದಲ್ಲೇ ಕುಸಿದು ಬಿದ್ದು ರಕ್ತ ಸ್ರಾವವಾಗಿದೆ. ವೀಣಾ ಪತಿ ಅನಿಲ್ ಬರುವಷ್ಟರಲ್ಲೇ ನಾಗರಾಜು ತನ್ನ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಬೆಂಗಳೂರು: ಸಿಗರೇಟ್‌ನಲ್ಲಿದ್ದದ್ದು ತಂಬಾಕಲ್ಲ, ಗಾಂಜಾ..!

ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ವೀಣಾಳನ್ನು ಜಿಲ್ಲಾಸ್ಪತ್ರೆಗೆ ತರುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ಮಂಡ್ಯ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿರುವ ಪತಿ ಅನಿಲ್, ಸಹೋದರ ಮಂಜು ಸಹ ಕೊಲೆಗೆ ಪ್ರೇರೇಪಿಸಿದ್ದಾನೆ. ಹೆಂಡತಿ ಕೊಲೆಗೆ ಮಂಜು ಮತ್ತು ತಂದೆ ನಾಗರಾಜು ಕಾರಣ ಎಂದು ದೂರು ನೀಡಿದ್ದಾನೆ. ರಾಗಿಮುದ್ದನಹಳ್ಳಿ ಗ್ರಾಮದ ಗರಿಬಿಸೈಟಿನಲ್ಲಿ ವೀಣಾ ಕೊಲೆಯಾದ ಸ್ಥಳಕ್ಕೆ ಎಸ್ಪಿ ಪಿ. ಶೋಭಾ ರಾಣಿ, ಡಿವೈಎಸ್ಪಿ ಗಂಗಾಧರ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಸಿದ್ದರಾಜು ಭೇಟಿ ನೀಡಿದ್ದರು.

ಗೆಳತಿಯ ಬಾತ್‌ರೂಮ್‌ನಲ್ಲೇ ಹಿಡನ್ ಕ್ಯಾಮರಾ ಇಟ್ಟ ಮೇಕಪ್ ಮ್ಯಾನ್..!

ನವೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: