ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್, ಯಾವ ಏರಿಯಾ? ಎಷ್ಟುಗಂಟೆ ವಿದ್ಯುತ್ ವ್ಯತ್ಯಯ?

ಗಣರಾಜ್ಯೋತ್ಸವದ ತಯಾರಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಹಲವೆಡೆ ವಿದ್ಯುತ್ ಸಮಸ್ಯೆ ಎದುರಾಗಿದೆ. ತುರ್ತು ನಿರ್ವಹಣೆಯಿಂದ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗುತ್ತಿದೆ.
 

Bescom announces no power supply on these area of bengaluru on jan 25th due to maintenance

ಬೆಂಗಳೂರು(ಜ.25) ಬೆಂಗಳೂರಿಗರೇ ಬೆಳಗ್ಗೆ 10 ಗಂಟೆ ಒಳಗೆ ಕೆಲಸ ಮುಗಿಸಿಕೊಳ್ಳಿ, ಕಾರಣ ಇಂದು ಬೆಳಗ್ಗೆ 10 ಗಂಟೆಯಿಂದ ನಗರದ ಹಲವೆಡ ವಿದ್ಯುತ್ ವ್ಯತ್ಯಯವಾಗುತ್ತಿದೆ. ತುರ್ತು ನಿರ್ವಹಣಾ ಕಾಮಾಗಾರಿ ಕಾರಣದಿಂದ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇಂದು(ಜ.25) ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 3 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ. ಹೀಗಾಗಿ ಸಾರ್ವಜನಿಕರಿಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ. ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಾಗುತ್ತಿದೆ. ಹಂತ ಹಂತವಾಗಿ ಕಾಮಗಾರಿಗಳು ನಡೆಯುತ್ತಿರುವ ಕಾರಣ ಒಂದೊಂದು ವಲಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.

66/11ಕೆವಿ ಗ್ಲೋಬಲ್ ಟೆಕ್ ಪಾರ್ಕ್ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿದೆ. ಹೀಗಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಎಕೊವರ್ಲ್ಡ್ ಕ್ಯಾಂಪಸ್, ಮ್ಯಾರಿಯಟ್ ಹೋಟೆಲ್, ದೇವರಬೀಸನಹಳ್ಳಿ, ವಜ್ರಮ್ ಅಪಾರ್ಟ್ಮೆಂಟ್, ದೇವರಬೀಸನಹಳ್ಳಿ ಗ್ರಾಮ, ದೊಡ್ಡಕನ್ನೆಳ್ಳಿ ರೋಡ್, ಗೇರ್ ಸ್ಕೂಲ್ ರೋಡ್, ಆದರ್ಶ್, ಸಾಯಿ ಶೃತಿ, ಸ್ಟರ್ಲಿಂಗ್ ಅಸೆಂಟಿಯಾ, ಸಾಮ್ವಿ, ಜೆ.ವಿ ಹೋಟೆಲ್ ಸೇರಿದಂತೆ ಇತರ ಸತ್ತು ಮುತ್ತಲಿನ ಏರಿಯಾಗಳಲ್ಲಿ ಇಂದು ಪವರ್ ಕಟ್ ಸಮಸ್ಯೆ ಎದುರಾಗಿದೆ. 

ಯುವತಿಯ ಜೋಕಾಲಿ ಆಟಕ್ಕೆ 800 ಮನೆಗೆ ಪವರ್ ಕಟ್, ಸುಸ್ತಾದ ಪೊಲೀಸರಿಂದ ಶೂಟೌಟ್ ಆರ್ಡರ್!

ಸೇಂಟ್‌ಜಾನ್‌ವುಡ್ ಅಪಾರ್ಟ್ಮೆಂಟ್ & ಆಸ್ಪತ್ರೆ, ತಾವರೆಕೆರೆ, ಅಕ್ಸೆಂಚರ್, ಒರೆಕಲ್, ಚರಿಸ್ಟ್ ಕಾಲೇಜು, ಬಿಟಿಎಮ್ ಲೇಔಟ್,ಮೆಜೆಸ್ಟಿಕ್ ಅಪಾರ್ಟ್ಮೆಂಟ್, ಎಕ್ಷಾ , ಆಕ್ಷಿಸ್ ಭವನ, ಸುದ್ದಗುಂಟೆ ಪಾಳ್ಯ, ಗುರಪ್ಪನ ಲೇಔಟ್,ಬಿಜಿ ರೋಡ್ , ಯು.ಬಿ.ಸಿಟಿ, ಐ.ಟಿ.ಸಿ ಹೋಟೆಲ್, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಹೊಂಬೇಗೌಡ ನಗರ,ಸಂಪಗಿ ನಗರ, ಜೆ.ಸಿ ರೋಡ, ಶಾಂತಿನಗರ, ಬಿಟಿಎಸ್ ರೋಡ, ರಿಚ್ಮಂಡ ಸರ್ಕಲ್, ರೆಸಿಡೆನೆಸ್ಸಿ ರೋಡ, ಸುಧಾಮನಗರ, ಕೆ.ಎಚ್ ರೋಡ,ವೀಲ್ಸನ್ ಗಾರ್ಡನ್, ಡಬಲ್ ರೋಡ, ಲಾಲಬಾಗ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ಯ ವ್ಯತ್ಯಯವಾಗಿದೆ. 

ಈ ಪ್ರದೇಶದ ಜನ ವಿದ್ಯುತ್ ಸಂಬಂಧಿತ ಯಾವುದೇ ಕೆಲಸಗಳಿದ್ದರೂ ಬೆಳಗ್ಗೆ 10ಗಂಟೆ ಮೊದಲು ಅಥವಾ ಸಂಜೆ 3 ಗಂಟ ಬಳಿಕ ಅವಕಾಶ ಸಿಗಲಿದೆ. ಪ್ರಮುಖವಾಗಿ ಶನಿವಾರವಾಗಿರುವ ಕಾರಣ ಶಾಲಾ ಕಾಲೇಜು, ಐಟಿ ಕಚೇರಿ ಸೇರಿದಂತೆ ಹಲವು ಕಚೇರಿಗಳಿಗೆ ರಜೆ ಇರಲಿದೆ. ಹೀಗಾಗಿ ಕೆಪಿಟಿಸಿಎಲ್ ಸಾರ್ವಜನಿಕರಿಗೆ ಸಮಸ್ಯೆ ಪ್ರಮಾಣ ತಗ್ಗಿಸಲು ಈ ದಿನ ನಿರ್ವಹಣಾ ಕಾರ್ಯ ಇಟ್ಟುಕೊಂಡಿದೆ.

ನೋ ಹೆಲ್ಮೆಟ್ ನೋ ಪೆಟ್ರೋಲ್ ಎಂದ ಬಂಕ್‌ಗೆ ಕತ್ತಲೆ ಭಾಗ್ಯ ನೀಡಿದ ಲೈನ್‌ಮ್ಯಾನ್‌

Latest Videos
Follow Us:
Download App:
  • android
  • ios