Asianet Suvarna News Asianet Suvarna News

ನಡು ರಸ್ತೆಯಲ್ಲೇ ಗಲಾಟೆ... ಕುಡುಕಿಯ ರಂಪಾಟಕ್ಕೆ ಪೊಲೀಸರೇ ಸುಸ್ತು

ಶರಾಬಿನ ಮತ್ತೆ ಹಾಗೆ ಒಮ್ಮೆ ತಲೆಗೇರಿತು ಎಂದರೆ ಕುಡಿದವರಿಗೆ ಮುಂದೆ ಏನಾಗುತ್ತಿದೆ ಎಂಬುದರ ಅರಿವೇ ಇರದು. ನಡು ರಸ್ತೆಯಲ್ಲಿ ಕುಡಿದು ತೂರಾಡಿ ಅವಾಂತರವೆಬ್ಬಿಸಿದ ಅನೇಕರನ್ನು ನಾವು ನೋಡಿದ್ದೇವೆ. ಹಾಗೆಯೇ ಇಲ್ಲೊಬ್ಬಳು ಯುವತಿ ತಾನು ಯಾವ ಕುಡುಕನಿಗೂ ಕಮ್ಮಿ ಏನಲ್ಲಾ ಎಂದು ತೋರಿಸಿದ್ದಾಳೆ.

Jun 22, 2022, 7:59 PM IST

ಶರಾಬಿನ ಮತ್ತೆ ಹಾಗೆ ಒಮ್ಮೆ ತಲೆಗೇರಿತು ಎಂದರೆ ಕುಡಿದವರಿಗೆ ಮುಂದೆ ಏನಾಗುತ್ತಿದೆ ಎಂಬುದರ ಅರಿವೇ ಇರದು. ನಡು ರಸ್ತೆಯಲ್ಲಿ ಕುಡಿದು ತೂರಾಡಿ ಅವಾಂತರವೆಬ್ಬಿಸಿದ ಅನೇಕರನ್ನು ನಾವು ನೋಡಿದ್ದೇವೆ. ಹಾಗೆಯೇ ಇಲ್ಲೊಬ್ಬಳು ಯುವತಿ ತಾನು ಯಾವ ಕುಡುಕನಿಗೂ ಕಮ್ಮಿ ಏನಲ್ಲಾ ಎಂದು ತೋರಿಸಿದ್ದಾಳೆ. ಕಂಠಪೂರ್ತಿ ಕುಡಿದಿದ್ದ ಯುವತಿ ರಸ್ತೆಯಲ್ಲಿದ್ದ ಸ್ವಿಚಕ್ರವಾಹನವನ್ನು ಕೆಳಗೆ ಕೆಡವಿದ್ದಾಳೆ. ಅಷ್ಟೇ ಅಲ್ಲದೇ ಈ ವೇಳೆ ತಡೆಯಲು ಬಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ರಂಪಾಟ ಮಾಡಿದ್ದಾಳೆ. ಈಕೆಯ ಎಣ್ಣೆಯಾಟ ನೋಡಿ ಪೊಲೀಸರೇ ಕೆಲ ಕಾಲ ದಂಗಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರು ಶಾಕ್ ಆಗಿದ್ದಾರೆ.