ಅಯೋಧ್ಯೆ ತೀರ್ಪು ಭಾರತೀಯರ ಗೆಲುವಾಗಿದೆ ಎಂದ ಸಚಿವ ಶ್ರೀರಾಮುಲು

ಅಯೋಧ್ಯೆ ಇನ್ನು ವಿವಾದವಲ್ಲ| ಅಯೋಧ್ಯೆ ಹಿಂದೂಗಳದ್ದಾಗಿದೆ| ಅಯೋಧ್ಯೆ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ| ಈ ತೀರ್ಪಿನಿಂದ ಭಾರತೀಯರ ಪುರಾಣ, ನಂಬಿಕೆ, ಆಚರಣೆಗಳಿಗೆ ನ್ಯಾಯಾಂಗದಲ್ಲೂ ಮಾನ್ಯತೆ ಇದೆ ಎಂಬುದು ಸ್ಪಷ್ಟವಾಗಿದೆ| ಅಯೋಧ್ಯೆಯಲ್ಲಿ ರಾಮನ ಜನ್ಮಸ್ಥಳ, ಅಲ್ಲಿ ಮಂದಿರ ಇದ್ದದ್ದೂ ಹೌದು, ಮಸೀದಿ ನಿರ್ಮಿಸಿದ್ದೂ ಹೌದು| 

Ayodhya Verdict is a victory of the Indians

ಬಳ್ಳಾರಿ(ನ.9): ಇಂದು ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪು ಪ್ರಕಟಿಸಿದೆ. ದೇಶಾದ್ಯಂತ ಹಿಂದೂ-ಮುಸ್ಲಿಂ ಸಂಘಟನೆಗಳು ಸುಪ್ರೀಂ ತೀರ್ಪನ್ನು ಸ್ವಾಗತಿಸಿದೆ. ಇದರ ಬೆನ್ನಲ್ಲೇ ಸಚಿವ ಶ್ರೀರಾಮುಲು ಅವರು ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.

ಒಟ್ಟು ಮೂರು ಟ್ವೀಟ್ ಮಾಡಿರುವ ಶ್ರೀರಾಮುಲು

ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಐವರು ನ್ಯಾಯಾಧೀಶರಿವರು...

ಒಂದನೇ ಟ್ವೀಟ್ ನಲ್ಲಿ 'ಅಯೋಧ್ಯೆ ಇನ್ನು ವಿವಾದವಲ್ಲ. ಅಯೋಧ್ಯೆ ಹಿಂದೂಗಳದ್ದಾಗಿದೆ. ಅಯೋಧ್ಯೆ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದೆ. ಈ ತೀರ್ಪಿನಿಂದ ಭಾರತೀಯರ ಪುರಾಣ, ನಂಬಿಕೆ, ಆಚರಣೆಗಳಿಗೆ ನ್ಯಾಯಾಂಗದಲ್ಲೂ ಮಾನ್ಯತೆ ಇದೆ ಎಂಬುದು ಸ್ಪಷ್ಟವಾಗಿದೆ. ಅಯೋಧ್ಯೆಯಲ್ಲಿ ರಾಮನ ಜನ್ಮಸ್ಥಳ, ಅಲ್ಲಿ ಮಂದಿರ ಇದ್ದದ್ದೂ ಹೌದು, ಮಸೀದಿ ನಿರ್ಮಿಸಿದ್ದೂ ಹೌದು' ಎಂದು ಬರೆದುಕೊಂಡಿದ್ದಾರೆ. 

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

ಇನ್ನು ಎರಡನೇ ಟ್ವೀಟ್ ನಲ್ಲಿ 'ಆದರೆ, ಮೊದಲು ಇದ್ದದ್ದು ಮಂದಿರ. ಹೀಗಾಗಿ ಅಯೋಧ್ಯೆಯ ರಾಮಜನ್ಮಭೂಮಿಯನ್ನು ಹಿಂದೂಗಳಿಗೆ ನೀಡಿ, ಮುಸ್ಲಿಮರಿಗೆ ಅಯೋಧ್ಯೆಯಲ್ಲೇ ಪರ್ಯಾಯ ಜಮೀನು ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳುವ ಮೂಲಕ ನ್ಯಾಯಾಂಗವೂ ಭಾರತವೆಂದರೆ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿದೆ ಎಂದು ಬರೆದುಕೊಂಡಿದ್ದಾರೆ. 

ಮೂರನೇ ಟ್ವೀಟ್ ನಲ್ಲಿ ರಾಮಲಲ್ಲಾಕ್ಕೆ ರಾಮಮಂದಿರ ನಿರ್ಮಾಣದ ಹಕ್ಕು ನೀಡಿ, ಮಂದಿರ ನಿರ್ಮಾಣಕ್ಕೆ ಸಮಿತಿ ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವ ಮೂಲಕ ಭಾರತೀಯರ ಶತಮಾನಗಳ ನಿರೀಕ್ಷೆಯನ್ನು ಸುಪ್ರೀಂ ಕೋರ್ಟ್ ತೀರ್ಪು ಈಡೇರಿಸಿದೆ. ಒಟ್ಟಾರೆ ಈ ತೀರ್ಪು ಭಾರತೀಯರ ಗೆಲುವಾಗಿದೆ ಎಂದು ಹೇಳಿದ್ದಾರೆ. 

ರಾಮ ಅಧಿಕಾರ ತ್ಯಾಗದ ಪ್ರತೀಕ: ಕಾಂಗ್ರೆಸ್ ಪ್ರತಿಕ್ರಿಯೆ!

ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ  ವಹಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ವಿವಾದಿತ ಜಾಗಕ್ಕ ಹೋರಾಡುತ್ತಿದ್ದ ಹಿಂದೂಗಳ ನಂಬಿಕೆಗೆ ಐತಿಹಾಸಿಕ ಜಯ ಲಭಿಸಿದೆ. ಆದರೆ, ಬಾಬರಿ ಮಸೀದಿ ಪ್ರತ್ಯೇಕ ಜಾಗವನ್ನು ಕಲ್ಪಿಸಲು ಕೋರ್ಟ್ ಸರಕಾರಕ್ಕೆ ಸೋಚಿಸಿದೆ. ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟವಾಗಿ ನಿರ್ದೇಶಿಸಿದೆ.
 

Latest Videos
Follow Us:
Download App:
  • android
  • ios