ಬೆಂಗಳೂರು: ಮಧ್ಯಮ ವರ್ಗದ ಯುವಕರ ಕ್ರೇಜ್‌ಗೆ ತಕ್ಕಂಥ ಬೈಕ್‌ಗಳನ್ನು ಪರಿಚಯಿಸುವುದರಲ್ಲಿ ಯಮಹಾ ಮೋಟರ್ಸ್‌ ಎತ್ತಿದ ಕೈ. ಜಪಾನ್‌, ಭಾರತಗಳಲ್ಲಿ ಈ ಕಂಪೆನಿಯ ಮೂರು ಉತ್ಪಾದಕ ಘಟಕಗಳಿವೆ. 

ಜೂನ್‌ನಲ್ಲಿ ಬಿಡುಗಡೆಯಾಗುತ್ತಿದೆ KTM RC 125 ಬೈಕ್- ಬೆಲೆ ಎಷ್ಟು?

ಅದರಿಂದ ಇದೀಗ 10 ದಶಲಕ್ಷ ಬೈಕ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುವ ಮೂಲಕ ಹೊಸ ಮೈಲಿಗಲ್ಲನ್ನು ನೆಟ್ಟಿದೆ. ಕಳೆದ 34 ವರ್ಷಗಳಿಂದ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿ ಕಳೆದ ಏಳು ವರ್ಷಗಳಲ್ಲಿ 5 ದಶಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 

ಹೊಸ ಅವತಾರದಲ್ಲಿ ಯಮಹಾ R15 V3 ಬೈಕ್!

ಅವುಗಳಲ್ಲಿ 22.12 ಲಕ್ಷ ಸ್ಕೂಟರ್‌ಗಳು ಹಾಗೂ 77.88 ಲಕ್ಷ ಮೋಟಾರ್‌ ಬೈಕ್‌ಗಳು. ಫರೀದಾಬಾದ್‌, ಸೂರಜ್‌ಪುರ ಹಾಗೂ ಚೆನ್ನೈಗಳಲ್ಲಿ ಯಮಹಾ ಉತ್ಪಾದನಾ ಘಟಕಗಳಿವೆ.