ನವದೆಹಲಿ(ಏ.29): ಯಮಹಾ ಮೋಟಾರ್ ವಿಶ್ವ ಬೈಕ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ. ಯಮಹಾ ಗರಿಷ್ಠ ಮಾರಾಟವಾಗಿರುವ  R15 ಬೈಕ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಯಮಹಾ R15 V3 ಹೆಸರಿನಲ್ಲಿ ರಸ್ತೆಗಿಳಿದಿರುವ ಈ ಬೈಕ್ ಹೊಸ ಬಣ್ಣದಲ್ಲಿ ಲಭ್ಯವಿದೆ.

ಇದನ್ನೂ ಓದಿ: ಜಾವಾ ಬೈಕ್‌ಗೆ ಎದುರಾಯ್ತು ಮೊದಲ ಸಂಕಷ್ಟ!

ಈ ಹಿಂದೆ ಯಮಹಾ R15 V3 ಡಾರ್ಕ್ ನೈಟ್ ಎಡಿಶನ್ ಬಿಡುಗಡೆ ಮಾಡಿತ್ತು. ಇದೀಗ ಹೊಸ ಬಣ್ಣದಲ್ಲಿ ಸ್ಪೆಷಲ್ ಎಡಿಶನ್ ಬಿಡುಗಡೆಯಾಗಿದೆ. ನೂತನ ಯಮಹಾ R15 V3 ಬೈಕ್ ಬೆಲೆ 1.71 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಬಣ್ಣದ ಯಮಹಾ R15 V3 ಬೈಕ್ ಭಾರತದಲ್ಲಿ ಸದ್ಯ ಲಭ್ಯವಿಲ್ಲ. ಆದರೆ ಕೆಲ ಡೀಲರ್‌ಗಳು ಮಾಡಿಫಿಕೇಶನ್ ಮೂಲಕ ಇದೇ ಬಣ್ಣದಲ್ಲಿ ಬೈಕ್ ಮಾರಾಟಕ್ಕಿಟ್ಟಿದ್ದಾರೆ.

ಇದನ್ನೂ ಓದಿ: ಬಜಾಜ್ ಅವೆಂಜರ್ 160 ABS ಬೈಕ್ ಬಿಡುಗಡೆ- ಬೆಲೆ ಎಷ್ಟು?

ಯಮಹಾ R15 V3 ಬೈಕ್ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 155cc,ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್ ಹೊಂದಿದ್ದು,  19 bhp ಪವರ್(@ 10,000 rpm) ಹಾಗೂ 15 Nm (@8,500 rpm)ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.