ನವದೆಹಲಿ(ಮೇ.17): ಯಮಹಾ R15 ಬೈಕ್‌ಗೆ ಪ್ರತಿಸ್ಪರ್ಧಿಯಾಗಿ KTM RC 125 ಬೈಕ್ ಬಿಡುಗಡೆಯಾಗುತ್ತಿದೆ. ಇದೇ ಜೂನ್ ತಿಂಗಳ ಆರಂಭದಲ್ಲಿ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸುತ್ತಿದೆ. KTM duke ಈಗಾಗಲೇ 125 ಬೈಕ್ ಬಿಡುಗಡೆ ಮಾಡಿದೆ.  ಇದರ ಯಶಸ್ಸಿನ ಬೆನ್ನಲ್ಲೇ RC ಮಾಡೆಲ್ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಬರುತ್ತಿದೆ TVS ಅಪಾಚೆ RR 310 ಬೈಕ್!

KTM RC 125 ಬೈಕ್ ಬೆಲೆ 1.45 ಲಕ್ಷ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. KTM RC ಪ್ರತಿಸ್ಪರ್ಧಿ ಯಮಾಹ R15 ಬೆಲೆ 1.39 ಲಕ್ಷ  ರೂಪಾಯಿ(ಎಕ್ಸ್ ಶೋ ರೂಂ). ಜೂನ್ 3ನೇ ವಾರದಲ್ಲಿ ನೂತನ KTM RC 125 ಬೈಕ್ ಬಿಡುಗಡೆಯಾಗಲಿದ್ದು, ಜುಲೈನಲ್ಲಿ ಗ್ರಾಹಕರ ಕೈಸೇರಲಿದೆ.

ಇದನ್ನೂ ಓದಿ: ಎಪ್ರಿಲ್ ಮಾರಾಟ ಲಿಸ್ಟ್ ಬಹಿರಂಗ- ಅಗ್ರಸ್ಥಾನದಲ್ಲಿ ಹೀರೋ, ಹೊಂಡಾ!

ವಿನ್ಯಾಸ್ ಹಾಗೂ ಸ್ಟೈಲ್ ಬದಲಾವಣೆ ಹೊರತು ಪಡಿಸಿದರೆ, ಎಂಜಿನ್‌ನಲ್ಲಿ ಡ್ಯೂಕ್ 125 ಹಾಗೂ  KTM RC 125  ಬೈಕ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 124.7 cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 14 bhp ಪವರ್(@ 9,250 rpm) ಹಾಗೂ  12 Nm ಪೀಕ್ ಟಾರ್ಕ್( @8,000 rpm) ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. 6 ಸ್ವೀಡ್ ಗೇರ್ ಬಾಕ್ಸ್ ಹೊಂದಿದೆ. ಸಿಂಗಲ್ ಚಾನೆಲ್  ABS ತಂತ್ರಜ್ಞಾನವಿದೆ.