ನವದೆಹಲಿ(ಜು.07):  ದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಇತ್ತ ಆಸ್ಪತ್ರೆ ಸಿಬ್ಬಂದಿಗಳು, ಪೊಲೀಸರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಫ್ರಂಟ್‌ಲೈನ್ ಕೊರೋನಾ ವಾರಿಯರ್ಸ್ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಇದೀಗ ಫ್ರಂಟ್‌ಲೈನ್ ವಾರಿಯರ್ಸ್‌ಗೆ ಯಮಹಾ ಇಂಡಿಯಾ ವಿಶೇಷ ರಿಯಾಯಿತಿ ಆಫರ್ ಘೋಷಿಸಿದೆ.

ಯಮಹಾದ ಸ್ಟ್ರೀಟ್‌ ಫೈಟರ್‌ FZ 25 ಬೈಕ್ ಬಿಡುಗಡೆ ಸಿದ್ಧತೆ!

ಕೊರೋನಾ ವಾರಿಯರ್ಸ್ ಯಾವುದೇ ಯಮಹಾ ವಾಹನ ಖರೀದಿಸಿದರೆ ಅವರ ಆರಂಭಿಕ 3 ತಿಂಗಳ EMIನಲ್ಲಿ ಶೇಕಡಾ 50 ರಷ್ಟು ಕಡಿತ ಮಾಡಲಾಗಿದೆ. 3 ತಿಂಗಳ ಬಳಿಕ ನೈಜ EMI ಪಾವತಿಸಬೇಕು. ಉದಾಹರಣೆಗೆ 5,000 ರೂಪಾಯಿ ಪ್ರತಿ ತಿಂಗಲ ಇಎಂಐ ಇದ್ದರೆ, ಆರಂಭಿಕ 3 ತಿಂಗಳು 2,500 ರೂಪಾಯಿ ಪಾವತಿಸಬೇಕು. 3 ತಿಂಗಳ ಬಳಿಕ 5,000 ರೂಪಾಯಿ ಪಾವತಿಸಬೇಕು.

ಯಮಹಾ FZ-FI ಹಾಗೂ FZS-FI ಬೈಕ್ ಬಿಡುಗಡೆ!..

ಭಾರತದ ಎಲ್ಲಾ ಯಮಹಾ ಡೀಲರ್‌ ಬಳಿ ಈ ಆಫರ್ ಇದೆ. ಹೀಗಾಗಿ ದೇಶದ ಯಾವುದೇ ಮೂಲೆಯಲ್ಲಿ ಕೊರೋನಾ ವಾರಿಯರ್ಸ್ ಯಮಹಾ ವಾಹನ ಖರೀದಿಗೆ ಮಂದಾದರೆ ಅವರಿಗೆ ಆಫರ್ ಲಭ್ಯವಾಗಲಿದೆ. ಈ ಆಫರ್ ಜುಲೈ 31ರ ವರೆಗೆ ಇರಲಿದೆ. ದೇಶದಲ್ಲಿರುವ ಎಲ್ಲಾ ಯಮಹಾ ಡೀಲರ್‌ಶಿಪ್ ಪುನರ್ ಆರಂಭಗೊಂಡಿದೆ.