ನವದೆಹಲಿ(ನ.09): ಯಮಹಾ ಮೋಟಾರ್ ಇಂಡಿಯಾ ನೂತನ 2 ಬೈಕ್ ಬಿಡುಗಡೆ ಮಾಡಿದೆ. ಯಮಹಾ FZ-FI ಹಾಗೂ FZS-FI  ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. BS6 ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ನೂತನ ಬೈಕ್ ಬಿಡುಗಡೆಯಾಗಿದೆ. ಬೈಕ್ ಬೆಲೆ 99, 200 ರೂಪಾಯಿಂದ ಆರಂಭವಾಗಲಿದ್ದು ಗರಿಷ್ಠ 1.03 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಇದನ್ನೂ ಓದಿ: ಹೀರೋ ಸ್ಪ್ಲೆಂಡರ್ i ಸ್ಮಾರ್ಟ್ BS6 ಬೈಕ್ ಬಿಡುಗಡೆ!

2020ರ ಎಪ್ರಿಲ್ ಬಳಿಕ ದೇಶದಲ್ಲಿ BS6 ಎಂಜಿನ್  ವಾಹನಗಳು ಮಾತ್ರ ಮಾರಾಟಕ್ಕೆ ಯೋಗ್ಯ. ಹೀಗಾಗಿ ಗಡುವಿಗೂ ಮುನ್ನವೇ ಅಟೋಮೊಬೈಲ್ ಕಂಪನಿಗಳು BS6 ಎಂಜಿನ್ ಅಪ್‌ಗ್ರೇಡ್ ಮಾಡುತ್ತಿವೆ. ಇದೀಗ ಯಮಹೂ ಕೂಡ BS6 ಎಂಜಿನ್ ಬೈಕ್ ಬಿಡುಗಡೆ ಮಾಡಿದೆ. 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ ರೆಬೆಲ್ ಬೈಕ್ ಅನಾವರಣ

ನೂತನ ಬೈಕ್ 149 cc, ಸಿಂಗಲ್ ಸಿಲಿಂಡರ್ ಹೊಂದಿದ್ದು,  12.2 bhp  ಪವರ್ ಹಾಗೂ  13.6 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಜೊತೆಗೆ ಸಿಂಗಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆ ಲಭ್ಯವಿದೆ.