ನವದೆಹಲಿ(ಜ.21): ಯಮಹಾ ಬೈಕ್ ಇದೀಗ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ಎರುಡು ಬೈಕ್‌ಗಳನ್ನ ಬಿಡುಗಡೆ ಮಾಡಿದೆ. ಡುಯೆಲ್ ಚಾನೆಲ್ ಎಬಿಎಸ್ ಹೊಂದಿರುವ ಯಮಹಾ FZ, ಫೆಜರ್ ABS ಬೈಕ್ ಇದೀಗ ಮಾರುಕಟ್ಟೆ ಪ್ರವೇಶಿಸಿದೆ.

ಇದನ್ನೂ ಓದಿ: ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಕಾರು ಬಿಡುಗಡೆ- ಮೊದಲ ಕಾರು ಖರೀದಿಸಿದ ಬೆಂಗಳೂರಿಗ

ನೂತನ ಯಮಹಾ FZ 25 ABS ಬೈಕ್ ಬೆಲೆ 1.33 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹಾಗೂ ಫೆಜರ್ ABS ಬೆಲೆ 1.43 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಗಧಿಪಡಿಸಲಾಗದೆ.  ಎಬಿಎಸ್ ರಹಿತ ಬೈಕ್‌ಗಿಂತ 12,000 ರೂಪಾಯಿ ಹೆಚ್ಚಾಗಿದೆ.

ಇದನ್ನೂ ಓದಿ:ಡ್ರಿಂಕ್ & ಡ್ರೈವ್ ಮಾಡಿದ್ರೆ ಆಫೀಸ್‌ಗೂ ಬರುತ್ತೆ ನೊಟೀಸ್!

ಫೇಜರ್ 25 ಬೈಕ್ ಸೀಟ್ ವಿನ್ಯಾಸ ಬದಲಾಯಿಸಲಾಗಿದೆ. ಲಾಂಗ್ ರೈಡ್‌ಗೂ ಅನೂಕೂಲವಾಗುಂತೆ ಸೀಟ್ ರಚಿಸಲಾಗಿದೆ. ಎಲ್ಇಡಿ ಲೈಟ್ಸ್, ಅಗಲಾದ ಟೈಯರ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ರೇರ್ ವಿವ್ಯೂ ಮಿರರ್, ರೈಸಡ್ ಹ್ಯಾಂಡಲ್ ಬಾರ್ ನೂತನ ಬೈಕ್‌ನಲ್ಲಿನ ಬದಲಾವಣೆ.