ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಕಾರು ಬಿಡುಗಡೆ- ಬೆಂಗಳೂರಲ್ಲಿ ಮೊದಲ ಖರೀದಿ!
ಬಹುನಿರೀಕ್ಷಿತ ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಸೂಪರ್ ಕಾರು ಬಿಡುಗಡೆಯಾಗಿದೆ. ವಿಶೇಷ ಅಂದರೆ ಮೊದಲ ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಖರೀದಿಸಿದ ಹೆಗ್ಗಳಿಗೆ ನಮ್ಮ ಬೆಂಗಳೂರಿಗೆ ಸಲ್ಲುತ್ತೆ. ಕಂಪೆನಿ ಕೂಡ ಭಾರತದ ಮೊದಲ ಡೆಲಿವರಿ ಬೆಂಗಳೂರಿಗೆ ನೀಡಲಿದೆ. ಈ ಕಾರಿನ ವಿಶೇಷತೆ, ಬೆಲೆ ಇಲ್ಲಿದೆ.
ಬಹುನಿರೀಕ್ಷಿತ ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಸೂಪರ್ ಕಾರು ಬಿಡುಗಡೆ
ನೂತನ ಕಾರು 770 bhp ಹಾಗೂ 720 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ
6.5 ಲೀಟರ್, V12 ನ್ಯಾಚ್ಯುಲರ್ ಆಸ್ಪಿರೇಟೆಡ್ ಎಂಜಿನ್ ಹೊಂದಿದೆ
ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಕಾರಿನ ಬೆಲೆ 6 ಕೋಟಿ ರೂಪಾಯಿ(ಎಕ್ಸ್ ಶೋ ರೂಂ)
ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಕಾರು 1525 ಕೆ.ಜಿ ತೂಕ ಹೊಂದಿದೆ
ಈ ಸೂಪರ್ ಕಾರಿನ ಗರಿಷ್ಠ ವೇಗ 350 kmph
ಬೆಂಗಳೂರಿಗೆ ಮೊದಲ ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಖರೀದಿಸಿದ ಹೆಗ್ಗಳಿಗೆ
ನೂತನ ಕಾರು ಆಕರ್ಷಕ ವಿನ್ಯಾಸ ಹಾಗೂ ಬಲಿಷ್ಠ ಎಂಜಿನ್ ಸಾಮರ್ಥ್ಯ ಹೊಂದಿದೆ
ಸೂಪರ್ ಕಾರು ವಿಭಾಗದಲ್ಲಿ ನೂತನ ಕಾರು ಹೊಸ ಸಂಚಲನ ಮೂಡಿಸಲಿದೆ
ಬಿಳಿ, ಕಪ್ಪು, ಹಸಿರು, ನೀಲಿ, ಹಳದಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ನೂತನ ಕಾರು ಲಭ್ಯವಿದೆ