Asianet Suvarna News Asianet Suvarna News

ಡ್ರಿಂಕ್ & ಡ್ರೈವ್ ಮಾಡಿದ್ರೆ ಆಫೀಸ್‌ಗೂ ಬರುತ್ತೆ ನೊಟೀಸ್!

ನಗರಗಳಲ್ಲಿ ಡ್ರಿಂಕ್ & ಡ್ರೈವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಹೊಸ ತಂತ್ರ ಮಾಡಿದ್ದಾರೆ. ಇನ್ಮುಂದೆ ಡ್ರಿಂಕ್ & ಡ್ರೈವ್  ಮಾಡಿದ್ರೆ ಆಫೀಸ್‌ಗೂ ನೊಟೀಸ್ ನೀಡಲಾಗುತ್ತೆ. ಏನಿದು ಹೊಸ ಯೋಜನೆ? ಇಲ್ಲಿದೆ ವಿವರ.

Hyderabad police sending letter to office to  control Dink and drive
Author
Bengaluru, First Published Jan 20, 2019, 2:58 PM IST

ಹೈದರಾಬಾದ್(ಜ.20): ಡ್ರಿಂಕ್ & ಡ್ರೈವ್ ತಪ್ಪಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಭಾರತದಲ್ಲಿ ಡ್ರಿಂಕ್ & ಡ್ರೈವ್‌ನಿಂದ ಅಪಘಾತಗಳೂ ಹೆಚ್ಚಾಗುತ್ತಿದೆ. ಹೀಗಾಗಿ ಪೊಲೀಸರು ಡ್ರಿಂಕ್ & ಡ್ರೈವ್ ದಂಡ ಹೆಚ್ಚಿಸಿದ್ದಲ್ಲದೇ, ಹಲವು ಜಾಗೃತಿ ಕಾರ್ಯಕ್ರಮಗಳನ್ನ ಕೈಗೊಂಡಿದ್ದಾರೆ. ಇಷ್ಟಾದರೂ ಡ್ರಿಂಕ್ & ಡ್ರೈವ್ ಪ್ರಕರಣಗಳು ಕಡಿಮೆಯಾಗುತ್ತಿಲ್ಲ.

ಇದನ್ನೂ ಓದಿ:  ಅತ್ಯಂತ ದುಬಾರಿ ಕಾರು ಬಳಸೋ ಪೊಲೀಸರು ಯಾರು?

ಡ್ರಿಂಕ್ & ಡ್ರೈವ್ ಪ್ರಕರಣಕ್ಕೆ ಕಡಿವಾಣ ಹಾಕಲು ಇದೀಗ ಹೈದರಾಬಾದ್ ಪೊಲೀಸರು ವಿನೂತನ ಪ್ರಯತ್ನ ಮಾಡಿದ್ದಾರೆ. ಡ್ರಿಂಕ್ & ಡ್ರೈವ್‌ನಲ್ಲಿ ಸಿಕ್ಕಿಬಿದ್ದರೆ ಗರಿಷ್ಠ ದಂಡ ಪಾವತಿಸಬೇಕು. ಜೊತೆಗೆ ಪ್ರಕರಣ ಕೂಡ ದಾಖಲಾಗುತ್ತೆ. ಇದರ ಜೊತೆಗೆ ಸಿಕ್ಕಿಬಿದ್ದ ವ್ಯಕ್ತಿ ಕೆಲಸ ಮಾಡೋ ಕಚೇರಿ, ಫ್ಯಾಕ್ಟರಿಗೆ ನೊಟೀಸ್ ಕೂಡ ನೀಡಲಾಗುತ್ತೆ.

ಇದನ್ನೂ ಓದಿ: 2019ರಲ್ಲಿ 8 ಹೊಸ ನಿಯಮ-ವಾಹನ ಮಾಲೀಕರು, ಸವಾರರೇ ಇರಲಿ ಗಮನ! 

ಕಂಪೆನಿ, ಅಥವಾ ಕಚೇರಿ HR ವಿಭಾಗಕ್ಕೆ ನೊಟೀಸ್ ನೀಡಲಾಗುತ್ತೆ. ಈ ಮೂಲಕ ಕಂಪೆನಿ ಅಥವಾ ಕಚೇರಿಗೆ ಡ್ರಿಂಕ್ಸ್ ಅಂಡ್ ಡ್ರೈವ್ ಕುರಿತು ಮಾಹಿತಿ ನೀಡಲಾಗುತ್ತೆ. ವ್ಯಯುಕ್ತಿಕ ವಿಚಾರ, ಅಥವಾ ವ್ಯಕ್ತಿಯ ಕಚೇರಿಯಲ್ಲಿ ಅವಾನಿಸುವ ಉದ್ದೇಶ ಪೊಲೀಸ್ ಇಲಾಖೆಯದ್ದಲ್ಲ. ಆದರೆ ಈ ವ್ಯಕ್ತಿ ಜೊತೆ ಪ್ರಯಾಣ ಮಾಡುವಾಗ ಎಚ್ಚರವಹಿಸಬೇಕಾದ ಸೂಚನೆ ಎಂದು ಹೈದರಾಬಾದ್ ಪೊಲೀಸ್ ಇಲಾಖೆ ಹೇಳಿದೆ.
 

Follow Us:
Download App:
  • android
  • ios