Asianet Suvarna News Asianet Suvarna News

ಯಮಹಾ ಸಲ್ಯೂಟೋ RX 110,125 ಬೈಕ್ ಬಿಡುಗಡೆ!

ಯಮಹಾ ಮೋಟರ್ ಎರಡು ನೂತನ ಬೈಕ್ ಬಿಡುಗಡೆ ಮಾಡಿದೆ. ತಮ್ಮ ಪ್ರಿಸಿದ್ಧ RX ಹೆಸರಿನಲ್ಲಿ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಈ ಬೈಕ್ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ 

Yamah Motors launched Saluto RX 110, Saluto 125 bike with UBS system
Author
Bengaluru, First Published Dec 15, 2018, 5:53 PM IST
  • Facebook
  • Twitter
  • Whatsapp

ನವದೆಹಲಿ(ಡಿ.15): ಯಮಹಾ ಮೋಟಾರ್ ಎರಡು ನೂತನ ಬೈಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 2019ರ ಯಮಹಾ ಸಲ್ಯೂಟೋ RX 110 ಹಾಗೂ ಸಲ್ಯೂಟ್ 125 ಬೈಕ್ ಬಿಡುಗಡೆ ಮಾಡಿದೆ. ಹೊಚ್ಚ ಹೊಸ ಗ್ರಾಫಿಕ್ಸ್, ಆಕರ್ಷಕ ಬಣ್ಣಗಳಲ್ಲಿ ನೂತನ ಯಮಹಾ ಬೈಕ್ ಬಿಡುಗಡೆಯಾಗಿದೆ.

Yamah Motors launched Saluto RX 110, Saluto 125 bike with UBS system

ಇದನ್ನೂ ಓದಿ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಬಳಸೋ ಕಾರು ಯಾವುದು?

ಯಮಹಾ ನೂತನ ಬೈಕ್ ಯುನಿಫೈಡ್ ಬ್ರೇಕಿಂಗ್ ಸಿಸ್ಟಮ್(UBS) ಹೊಂದಿದೆ. ಇದರಿಂದ ಫ್ರಂಟ್ ಹಾಗೂ ರೇರ್ ಬ್ರೇಕ್ ಕಂಟ್ರೋಲ್ ಸಿಗಲಿದೆ. ಯಮಹಾ ಸಲ್ಯೂಟೋ RX 110  ಬೈಕ್ 110 ಸಿಸಿ, ಸಿಂಗಲ್ ಸಿಲಿಂಡರ್, ಏರ್ ಕೂಲ್‌ಡ್ ಎಂಜಿನ್ ಹೊಂದಿದೆ. 7 ಬಿಹೆಚ್‌ಪಿ ಪವರ್ ಹಾಗೂ 8.5nm ಪೀಕ್ ಟಾರ್ಕ್ ಹೊಂದಿದೆ. 

Yamah Motors launched Saluto RX 110, Saluto 125 bike with UBS system

ಇದನ್ನೂ ಓದಿ: ಐತಿಹಾಸಿಕ ಮಾರುತಿ 800 ಕಾರಿಗೆ 35ನೇ ವರ್ಷದ ಸಂಭ್ರಮ!

ಸಲ್ಯೂಟ್ 125 ಬೈಕ್ 125 ಸಿಸಿ, ಸಿಂಗಲ್ ಸಿಲಿಂಡರ್, ಏರ್‌ ಕೂಲ್‌ಡ್ ಎಂಜಿನ್, 8bhpp ಪವರ್ ಹಾಗೂ 10.1nm ಪೀಕ್ ಟಾರ್ಕ್ ಉತ್ವಾದಿಸಲಿದೆ. 4 ಸ್ವೀಡ್ ಗೇರ್ ಬಾಕ್ಸ್ ಹೊಂದಿದೆ. ಇನ್ನು ನಾಲ್ಕು ಬಣ್ಣಗಳಲ್ಲಿ ನೂತನ ಬೈಕ್ ಲಭ್ಯವಿದೆ.  ಯಮಹಾ ಸಲ್ಯೂಟೋ RX 110 ಬೆಲೆ 52,000 ರೂಪಾಯಿ ಹಾಗೂ ಸಲ್ಯೂಟ್ 125 ಬೆಲೆ  59,800 ರೂಪಾಯಿ(ಎಕ್ಸ್ ಶೋ ರೂಂ). 

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios