Asianet Suvarna News Asianet Suvarna News

ಕಾರಿನ ದಾಖಲೆ ಕೇಳಿದ್ದಕ್ಕೆ ಯುವತಿ ಹೈಡ್ರಾಮಾ: ನಡು ರಸ್ತೆಯಲ್ಲಿ ಬಿದ್ದು ಅತ್ತು ಗೋಳಾಡಿದ ಹುಡುಗಿ

: ಕಾರು ನಿಲ್ಲಿಸಿ ದಾಖಲೆ ಕೇಳಿದ್ದಕ್ಕೆ ಯುವತಿಯೊಬ್ಬಳು ನಡುರಸ್ತೆಯಲ್ಲೇ ಹೈ ಡ್ರಾಮಾ ಮಾಡಿ ರಸ್ತೆಯಲ್ಲಿ ಬಿದ್ದು ಹೊರಳಾಡಿದ ಘಟನೆ ನಡೆದಿದೆ.

Young lady high drama on road after police ask her vehicle documents akb
Author
First Published Mar 9, 2023, 12:55 PM IST

ಬೆಂಗಳೂರು: ಕಾರು ನಿಲ್ಲಿಸಿ ದಾಖಲೆ ಕೇಳಿದ್ದಕ್ಕೆ ಯುವತಿಯೊಬ್ಬಳು ನಡುರಸ್ತೆಯಲ್ಲೇ ಹೈ ಡ್ರಾಮಾ ಮಾಡಿ ರಸ್ತೆಯಲ್ಲಿ ಬಿದ್ದು ಹೊರಳಾಡಿದ ಘಟನೆ ನಡೆದಿದೆ.  ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಸಾಮಾನ್ಯವಾಗಿ ಬೆಂಗಳೂರು, ಮುಂಬೈ ಸೇರಿದಂತೆ  ದೇಶದ ಪ್ರಮುಖ ಮಹಾನಗರಿಗಳಲ್ಲಿ ಟ್ರಾಫಿಕ್ ದಟ್ಟನೆ ತೀವ್ರವಾಗಿದ್ದು, ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆಯ ನಿಯಂತ್ರಣದ ಜೊತೆ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯ ಬಗ್ಗೆ ಪರಿಶೀಲಿಸುತ್ತಿರುತ್ತಾರೆ. ವಾಹನಗಳನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸುವುದು ಸಾಮಾನ್ಯವಾಗಿದೆ. ಇದು ಜನರಿಗೆ ಇಷ್ಟವಿಲ್ಲದಿದ್ದರೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಯಾಗದಂತೆ ಅವರಿಗೆ ಸಹಕರಿಸಲೇ ಬೇಕು. ಅದೇ ರೀತಿ ಇಲ್ಲೊಂದು ಕಡೆ ಟ್ರಾಫಿಕ್ ಪೊಲೀಸರು ಯುವತಿಯೊಬ್ಬಳ ಕಾರೊಂದನ್ನು ನಿಲ್ಲಿಸಿ ದಾಖಲೆ ಪರಿಶೀಲನೆಗೆ ಮುಂದಾದಾಗ ಆಕೆ ಪೊಲೀಸರ ವಿರುದ್ಧ ರೊಚ್ಚಿಗೆದ್ದು ಹೈಡ್ರಾಮಾ ಮಾಡಿದ್ದಾಳೆ. 

ಪೊಲೀಸರು ರಸ್ತೆಯಲ್ಲಿ ವಾಹನವನ್ನು ಅಡ್ಡ ಹಾಕುತ್ತಿದ್ದಂತೆ ಮಹಿಳೆ 'ವಾಟ್ ಆರ್ ಯು ಡೂಯಿಗ್ ನಾನ್ಸೆನ್ಸ್‌ ಎಂದು ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾಳೆ. ಈ ವೇಳೆ ಪೊಲೀಸರು ಗಾಡಿಯ ದಾಖಲೆ ನೀಡುವಂತೆ ಕೇಳಿದಾಗ ಆಕೆ  'ತಗೊಳ್ಳಿ ಇದು ಪೇಪರ್ ತಗೊಳ್ಳಿ ಇದು ಪೇಪರ್ 'ಎಂದು ಕಾರೊಳಗಿದ್ದ ಪೇಪರ್‌ ಹಾಗೂ ಇತರ ವಸ್ತುಗಳನ್ನು ಒಂದೊಂದಾಗಿ ಹೊರಗೆಸೆದು ಉದ್ಧಟತನ ತೋರಿದ್ದಾಳೆ. ಅಲ್ಲದೇ ಪೊಲೀಸರ ಮುಂದೆಯೇ ನೀವು ನನಗೆ ತೊಂದರೆ  ಕೊಡುತ್ತಿದ್ದೀರಿ ಎಂದು ದೂರಿದ್ದಾಳೆ. ಈ ವೇಳೆ ಕಾರಿನ ಹಿಂದಿನ ಸೀಟಿನಲ್ಲಿದ್ದ ಯುವತಿಯೊಬ್ಬಳು ಕೆಳಗಿಳಿದು ಆಕೆ ಎಸೆದ ವಸ್ತು ಹಾಗೂ ಪೇಪರ್‌ಗಳನ್ನು ರಸ್ತೆಯಿಂದ ಹೆಕ್ಕಿ, ಪೇಪರ್ ಬಿಸಾಕಿದಾಕೆಗೆ ನೀನೇನು ಮಾಡ್ತಿದ್ದೀಯಾ ಎಂದು ಕೇಳುತ್ತಾಳೆ. ಈ ವೇಳೆ ಆ ಯುವತಿಯ ಕೋಪ ಮತ್ತಷ್ಟು ಹೆಚ್ಚಾಗಿದ್ದು,  ಆಕೆ ಕಾರಿನಿಂದ ಇಳಿದವಳೇ.. ಏನು ಹೇಳುತ್ತಾಳೆ ಎಂದು ಕೇಳಿಸದಷ್ಟು ಅಸ್ಪಷ್ಟವಾಗಿ ಜೋರಾಗಿ ಕಿರುಚಾಡುತ್ತಾ  ಅಲ್ಲೇ ರಸ್ತೆಯಲ್ಲಿ ಕಾರಿಗೆ ಒರಗಿ ಕುಳಿತು ಗೊಳೋ ಎಂದು ಅಳಲು ಶುರು ಮಾಡುತ್ತಾಳೆ.

ಪತಿ ಎದುರೇ ಪತ್ನಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ಸ್ನೇಹಿತ್ ಜಗದೀಶ್; ಏನಿದು ಜಾಗ್ವರ್ ಜಗಳ?

ಈ ವೇಳೆ ಆಕೆಯ ಕಾರಿನಲ್ಲಿದ್ದ ಮತ್ತೊಬ್ಬಳು ಏನು ಮಾಡ್ತಿದ್ದೀಯಾ ಎಂದು ಕೇಳಿದಾಗಲೂ ಆಕೆಯ ಗೋಳಾಟ ಮುಂದುವರೆದಿದೆ. ಈ ವೇಳೆ ಪೊಲೀಸರು ಕಾರನ್ನು ಪಕ್ಕಕ್ಕೆ ಹಾಕಿ ಕಾರಿನ ದಾಖಲೆ ತೋರಿಸುವಂತೆ ಖಡಾಖಂಡಿತವಾಗಿ ಹೇಳಿದ್ದಾರೆ. @gharkekalesh ಎಂಬ ಟ್ವಿಟ್ಟರ್‌ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಆಗಿದ್ದು,  45 ಸೆಕೆಂಡ್‌ಗಳ ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.  ಕೆಲವರು ಇದಕ್ಕೆ ಹ್ಯಾಪಿ ವುಮೆನ್ಸ್ ಡೇ ಅಂತ ಕಾಮೆಂಟ್ ಮಾಡಿದ್ದಾರೆ.  ಮತ್ತೆ ಕೆಲವರು ಇಂತಹ ಮಹಿಳೆಯರನ್ನು ಇಂಡಿಯಾ ಗೇಟ್ ಬಳಿ ಹಕ್ಕಿ ಗೂಡಿಗೆ ಹಾಕಿ ಒಂದು ವರ್ಷ ಕಾಲ ಹಾಗೆ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾಕೆ ಪೊಲೀಸರು ಇಂತಹ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಲು ಅಸಹಾಯಕರಾಗಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಟ್ರಾಫಿಕ್‌ನಲ್ಲಿ ಪುಟ್ಟ ಬಾಲಕಿಯ ಹೆಲ್ಮೆಟ್‌ ಸರಿಪಡಿಸಿದ ಪೊಲೀಸ್‌ಗೆ ಕ್ಯಾಂಡಿ ನೀಡಲು ಮುಂದಾದ ಪೋರಿ: ವಿಡಿಯೋ ವೈರಲ್‌

 

 

 

Follow Us:
Download App:
  • android
  • ios