ನವದೆಹಲಿ(ಸೆ.04): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬೆನ್ನಲ್ಲೇ ಹಲವರು ಸಂಕಷ್ಟ ಅನುಭವಿಸಿದ್ದಾರೆ. ಗುರಗ್ರಾಂನಲ್ಲಿ ಸ್ಕೂಟಿ ಸವಾರನಿಗೆ ಒಟ್ಟು 23,000 ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದ್ದರೆ, ಹಲವು ಕಡೆ ದುಬಾರಿ ದಂಡ ವಿಧಿಸಲಾಗದ ಸವಾರರು ವಾಹನವನ್ನೇ ಇಟ್ಟುಕೊಳ್ಳಿ ಎಂದ ಘಟನೆಗಳು ನಡೆದಿವೆ. ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಲ್ಲಿ ಸಾರಿಗೆ ಸಚವಿ ನಿತಿನ್ ಗಡ್ಕರಿ ಪಾತ್ರ ಪ್ರಮುಖವಾಗಿದೆ. ಹೊಸ ರೂಲ್ಸ್ ಬಂದ ಬೆನ್ನಲ್ಲೇ ಇದೀಗ ನಿತಿನ್ ಗಡ್ಕರಿ ಹೆಲ್ಮೆಟ್ ರಹಿತ ಸ್ಕೂಟರ್ ಚಲಾಯಿಸಿರುವ ಫೋಟೋ ಟ್ರೋಲ್ ಆಗುತ್ತಿದೆ.

ಇದನ್ನೂ ಓದಿ: 15 ಸಾವಿರ ಬೆಲೆಯ ಸ್ಕೂಟಿ: ಹೈರಾಣಾದ 23 ಸಾವಿರ ದಂಡ ಕಟ್ಟಿ!

ನೂತನ ನಿಯಮ ಜಾರಿಯಾದ ಬೆನ್ನಲ್ಲೇ ನಿತಿನ್ ಗಡ್ಕರಿಯ ಹೆಲ್ಮೆಟ್ ರಹಿತ ಸ್ಕೂಟಿ ಚಾಲನ ಫೋಟೋ ವೈರಲ್ ಆಗಿತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಗಡ್ಕರಿಗೆ ದಂಡದ ಚಲನ್ ನೀಡುವಂತೆ ಮಹಾರಾಷ್ಟ್ರ ಪೊಲೀಸ್‌ಗೆ ಮನವಿ ಮಾಡಲಾಗುತ್ತಿದೆ. ಸಾಮಾನ್ಯರಿಗೆ 10 ಪಟ್ಟು ದಂಡ ವಿಧಿಸಲಾಗುತ್ತಿದೆ, ಆದರೆ ಸಾರಿಗೆ ಸಚಿವರೇ ಹೆಲ್ಮೆಟ್ ರಹಿತವಾಗಿ ಸ್ಕೂಟಿ ಚಲಾಯಿಸಿದರೆ ದಂಡ ಯಾಕಿಲ್ಲ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆದರೆ ಈ ಫೋಟೋ 2014ರದ್ದು.  ಮಹಾರಾಷ್ಟ್ರದ ನಾಗ್ಪುರದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಲು ಬಂದ ನಿತಿನ್ ಗಡ್ಕರಿ ಸಂಘ ಮಹಲ್ ಕಟ್ಟಡದೊಳಗೆ ಸ್ಕೂಟಿ ಮೂಲಕ ತೆರಳಿದ್ದರು. ಈ ಫೋಟೋ ಇದೀಗ ವೈರಲ್ ಆಗುತ್ತಿದೆ. 

ಇದನ್ನೂ ಓದಿ:  ಹೊಸ ನಿಯಮ: ಕುಡಿದು ವಾಹನ ಓಡಿಸಿದರೆ 10000 ರು.ದಂಡ

2014ರ ಫೋಟೋ ಇದೀಗ ಹೊಸ ನಿಯಮ ಜಾರಿಗೆ ಬಂದ ಬಳಿಕ ಟ್ರೋಲ್ ಮಾಡಲಾಗುತ್ತಿದೆ. ಕೆಲವರು ಹಳೇ ಫೋಟೋ ಎಂದು ತಿಳಿದ ಮೇಲೆ 2014ರಲ್ಲಿರುವ ದಂಡವನ್ನೇ ವಿಧಿಸಿ. ಸಾರಿಗೆ ಸಚಿವರಿಗೆ ಯಾಕೆ ವಿನಾಯಿತಿ ಎಂದು ಪ್ರಶ್ನಿಸಿದ್ದಾರೆ. ದೇಶದೆಲ್ಲೆಡೆ ಹೊಸ ಟ್ರಾಫಿಕ್ ನಿಯಮ ಜಾರಿಯಾಗಿದೆ. ಈ ಮೂಲಕ ದಂಡದ ಮೊತ್ತ 10 ಪಟ್ಟು ಹೆಚ್ಚಿಸಲಾಗಿದೆ. ನೂತನ ದಂಡ ಮೌಲ್ಯಕ್ಕೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ.