ನವದೆಹಲಿ (ಸೆ. 01): ಕುಡಿದು ವಾಹನ ಓಡಿಸಿದರೆ 10000 ರು. ದಂಡ ವಿಧಿಸುವ, ಲೈಸೆನ್ಸ್‌ ರಹಿತವಾಗಿ ವಾಹನ ಚಲಾಯಿಸಿದರೆ 5000 ರು. ದಂಡ ವಿಧಿಸಬಹುದಾದ ಕಾನೂನುಗಳನ್ನು ಒಳಗೊಂಡಿರುವ ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಸೆ.1ರಿಂದ ರಾಷ್ಟ್ರಾದ್ಯಂತ ಅನುಷ್ಠಾನಗೊಳ್ಳಲಿದೆ.

ಈ ಸಂಬಂಧ ಸಾರಿಗೆ ಸಚಿವಾಲಯ ಆ.28ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ಮೋಟಾರು ಕಾಯ್ದೆ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದರಿಂದ ಈ ಕಾಯ್ದೆಯನ್ನು ಜಾರಿ ಮಾಡುವುದು ಆಯಾಯ ರಾಜ್ಯಗಳ ಮೇಲೆ ಅವಲಂಬಿತವಾಗಿದೆ.

ಯಾವುದಕ್ಕೆ ಎಷ್ಟೆಷ್ಟುದಂಡ?

ಅಪರಾಧ ಹಳೆ ದಂಡ ಹೊಸ ದಂಡ

ಸಾಧಾರಣ 100 ರು. 500 ರು.

ಟಿಕೆಟ್‌ ರಹಿತ ಪ್ರಯಾಣ 200 ರು. 500 ರು.

ಲೈಸೆನ್ಸ್‌ ರಹಿತ ಪ್ರಯಾಣ 500 ರು. 5000 ರು.

ಅತಿ ವೇಗ 400 ರು. 1000-2000ರು.

ರಾರ‍ಯಶ್‌ ಡ್ರೈವಿಂಗ್‌ 500 ರು. 5000 ರು.

ಕುಡಿದು ವಾಹನ ಚಾಲನೆ 2000 ರು. 10000 ರು.

ಪರ್ಮಿಟ್‌ ರಹಿತ ವಾಹನ ಚಾಲನೆ 5000 ರು. 10000 ರು.

ಒವರ್‌ ಲೋಡ್‌ 2000 ರು. 20000 ರು.

ಸೀಟ್‌ ಬೆಲ್ಟ್‌ ಇಲ್ಲದಿದ್ರೆ 100 ರು. 1000 ರು.

ವಿಮೆ ರಹಿತ ಚಾಲನೆ 1000 ರು. 2000 ರು.

ಅಪ್ರಾಪ್ತರಿಂದ ವಾಹನ ಚಲಾವಣೆ ಪೋಷಕರಿಗೆ 25000 ರು. ದಂಡ ಹಾಗೂ 3 ವರ್ಷಗಳ ಕಾಲ ಸಜೆ

ಆಂಬುಲೆನ್ಸ್‌ಗೆ ದಾರಿಬಿಡದಿದ್ದರೆ 10000 ರು.

"

"