ಚಂಡಿಘಡ(ಜ.12): ಹಾಲಿವುಡ್ ಸಿನಿಮಾದಲ್ಲಿ ಸಾಹಸ ದೃಶ್ಯಗಳು ಸಾಮಾನ್ಯ. ಅದರಲ್ಲೂ ಕಾರು ಚೇಸಿಂಗ್, ಕಾರಿನಲ್ಲಿ ಫೈಟಿಂಗ್, ಕಾರನ್ನು ಕಟ್ಟಗಳಿಂದ, ಫ್ಲೈ ಓವರ್‌ನಿಂದ ಹಾರಿಸುವ ದೃಶ್ಯಗಳು ಮೈಜುಮ್ಮೆನಸುತ್ತವೆ. ಇದೀಗ ಹಾಲಿವುಡ್ ಸಿನಿಮಾ ರೀತಿಯಲ್ಲೇ ಟೊಯೊಟಾ ಫಾರ್ಚುನರ್ ಕಾರನ್ನು ಹಾರಿಸಿದ ಘಟನೆ ನಡೆದಿದೆ.

ಇದನ್ನೂ ಓದಿ: ಮಹಿಳೆಯ ಟೆಸ್ಟ್ ಡ್ರೈವ್‌ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!

ಚಂಡಿಘಡದಲ್ಲಿ ಈ ಅಪಘಾತ ಸಂಭವಿಸಿದೆ. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯದಲ್ಲಿ ಅಪಘಾತ ದಾಖಲಾಗಿದೆ. ಟಿ ಜಂಕ್ಷನ್ ಮೂಲಕ ಟೊಯೋಟಾ ಫಾರ್ಚುನರ್ ಕಾರು ವೇಗಾವಾಗಿ ಸಾಗಿ ಬಂತು. ಇತ್ತ ಸೆಡಾನ್ ಕಾರೊಂದು ಮಿಂಚಿನಂತೆ ಫಾರ್ಚುನರ್ ಕಾರಿನ ಸನಿಹದಲ್ಲೇ ಹಾದು ಹೋಯಿತು. ಫಾರ್ಚುನರ್  ಕಾರಿನ ಚಾಲಕನಿಗೆ ವೇಗ ನಿಯಂತ್ರಿಸಲು ಸಾಧ್ಯವಾಗಲಿಲ್ಲ. 

ಇದನ್ನೂ ಓದಿ: ನಟ ದರ್ಶನ್ ಪ್ರಾಣ ಉಳಿಸಿದ ಆಡಿ ಕ್ಯೂ7 ಕಾರಿನ ವಿಶೇಷತೆ ಏನು?

ಪರಿಣಾಮ ಕಾರು ಇದ್ದಕ್ಕಿದ್ದಂತೆ ವಿಮಾನದಂತೆ ಹಾರಾಟ ಆರಂಭಿಸಿತು. ಮುಂಭಾಗದಲ್ಲಿ ನಿಂತಿದ್ದ ಹ್ಯುಂಡೈ ವರ್ನಾ ಹಾಗೂ ಹೊಂಡಾ ಸಿಟಿ ಕಾರಿನ ಮೇಲೆ ಬಿದ್ದಿತ್ತು. ಫಾರ್ಚುನರ್ ಕಾರು ಬಿದ್ದ ಪರಿಣಾಮ ಹೊಂಡಾ ಸಿಟಿ ಹಾಗೂ ವರ್ನಾ ಕಾರು ನಜ್ಜು ಗುಜ್ಜಾಯಿತು.

 

ಈ ಅಪಘಾತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಪಘಾತದ ಬಳಿಕ ಅಲ್ಲಿದ್ದವರು ಆಗಮಿಸಿ ಮಗುಚಿ ಬಿದ್ದ ಕಾರನ್ನು ಸರಿಪಡಿಸಿದರು.