ಕ್ಯಾಲಿಫೋರ್ನಿಯಾ(ಆ.21): ಎಲೆಕ್ಟ್ರಿಕ್ ಕಾರಿನಲ್ಲಿ ಪ್ರತಿ ದಿನ ಆವಿಷ್ಕಾರಗಳು, ಬದಲಾವಣೆಗಳು ನಡೆಯುತ್ತಿದೆ. ಅದರಲ್ಲೂ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ, ವಿಶ್ವ ದರ್ಜೆಯ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಒಳಗೊಂದಿರುವ ಟೆಸ್ಲಾ ಕಾರುಗಳು ಅತ್ಯಂತ ಜನಪ್ರಿಯವಾಗಿದೆ. ಇದೀಗ ಟೆಸ್ಲಾ ನೂತನ ಲೂಸಿಡ್ ಏರ್ ಸೆಡಾನ್ ಕಾರು ಬಿಡುಗಡೆ ಮಾಡುತ್ತಿದೆ. ಈ ಕಾರು ಬಿಡುಗಡೆಗೂ ಮುನ್ನವೇ ಹಲವು ದಾಖಲೆ ಬರೆದಿದೆ.

ಭಾರತಕ್ಕೆ ಬರುತ್ತಿದೆ ಟೆಸ್ಲಾ 3 ಕಾರು; 4 ವರ್ಷಗಳ ಕಾಯುವಿಕೆ ಅಂತ್ಯ!..

ಸದ್ಯ ಮಾರುಕಟ್ಟೆಯಲ್ಲಿರುವ ಕಾರುಗಳನ್ನು ಫಾಸ್ಟ್ ಚಾರ್ಚಿಂಗ್ ಮೂಲಕ  1 ಗಂಟೆಯಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಸಂಪೂರ್ಣ ಚಾರ್ಜ್‌ಗೆ 400 ರಿಂದ 550 ಕಿ.ಮೀ ಮೈಲೇಜ್ ನೀಡಲಿದೆ. ಆದರೆ ಟೆಸ್ಲಾದ ಲೂಸಿಡ್ ಏರ್ ಕಾರು 20 ನಿಮಿಷ ಚಾರ್ಜ್ ಮಾಡಿದರೆ 500 ಕಿ.ಮೀ ಮೈಲೇಜ್ ನೀಡಲಿದೆ. ಇಷ್ಟೇ ಅಲ್ಲ ಇದೀ ರೀತಿ ಹಲವು ತಂತ್ರಜ್ಞಾನಗಳು ಅತ್ಯಾಧನಿಕಗೊಂಡಿದೆ.

ಟೊಯೋಟಾ ಹಿಂದಿಕ್ಕಿ ವಿಶ್ವದ ಅತ್ಯಮೂಲ್ಯ ಕಾರು ಪಟ್ಟ ಗಿಟ್ಟಿಸಿಕೊಂಡ ಟೆಸ್ಲಾ!

ಚಾರ್ಜಿಂಗ್‌ನಲ್ಲಿ ಟೆಸ್ಲಾ ಸಂಶೋಧನೆ ನಡೆಸಿದೆ. ಸಂಶೋಧನೆ, ಅಧ್ಯಯನದ ಬಳಿಕ ಇದೀಗ ಫಾಸ್ಟ್ ಚಾರ್ಜಿಂಗ್‌ನಲ್ಲಿ ಮಹತ್ತರ ಬದಲಾವಣೆ ತರಲಾಗಿದೆ. ಚಾರ್ಜ್ ಮುಗಿಯುತ್ತಿದ್ದಂತೆ, ಸಾಮಾನ್ಯ ಎಲೆಕ್ಟ್ರಿಕ್ ಕಾರುಗಳಲ್ಲಿ ಕನಿಷ್ಠ 1 ಗಂಟೆ ಚಾರ್ಜಿಂಗ್ ಸ್ಟೇಶನ್‌ನಲ್ಲಿ ಕಳೆಯಬೇಕಾದ ಅನಿವಾರ್ಯತೆ ಇತ್ತು. ತುರ್ತು ಸಂದರ್ಭದಲ್ಲಿ ಇದು ಅಸಾಧ್ಯದ ಮಾತಾಗಿತ್ತು. ಹೀಗಾಗಿ ಟೆಸ್ಲಾ ಆವಿಷ್ಕರಿಸಿದ ಹೊಸ ತಂತ್ರಜ್ಞಾನದ ಮೂಲಕ ಕೇವಲ 20 ನಿಮಿಷದಲ್ಲಿ 500 ಕಿ.ಮೀ ಮೈಲೇಜ್ ನೀಡಬಲ್ಲ ಸಾಮರ್ಥ್ಯದ ಕಾರನ್ನು ಬಿಡುಗಡೆ ಮಾಡುತ್ತಿದೆ.

ಟೆಸ್ಲಾದ ನೂತನ ಲೂಸಿಡ್ ಏರ್ ಕಾರು ಸೆಪ್ಟೆಂಬರ್ 9 ರಂದು ಅನಾವರಣಗೊಳ್ಳಲಿದೆ. 2.5 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗ ತಲುಪಲಿದೆ. 300kw ಪವರ್ ಸಪ್ಲೈ ಹೊಂದಿದೆ.