ಅಮೆರಿಕ(ಜು.02):  ಭವಿಷ್ಯದ ವಾಹನ ಎಂದೇ ಗುರುತಿಸಿಕೊಂಡಿರುವ ಎಲೆಕ್ಟ್ರಿಕ್ ವಾಹನಕ್ಕೆ ಇದೀಗ ಭಾರತದಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ವಿಶ್ವ ಕೂಡ ಇಂಧನ ವಾಹನಕ್ಕಿಂತ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಎಲೆಕ್ಟ್ರಿಕ್ ಕಾರು ಕಂಪನಿಯಲ್ಲಿ ನಂಬರ್ 1 ಎಂದು ಗುರುತಿಸಿಕೊಂಡಿರು  ಟೆಸ್ಲಾ ಮತ್ತೊಂದು ಸಾಧನೆ ಮಾಡಿದೆ. ಟೆಸ್ಲಾ ಇದೀಗ ವಿಶ್ವದ ಅತ್ಯಮೂಲ್ಯ ಆಟೋಮೇಕರ್ ಅನ್ನೋ ದಾಖಲೆ ಬರೆದಿದೆ.

ಕೊರೋನಾ ಕಾರಣ ಆನ್‌ಲೈನ್ ಬುಕಿಂಗ್; 1ರ ಬದಲು 28 ಕಾರು ಬುಕ್ ಮಾಡಿದ ಗ್ರಾಹಕ ಕಂಗಾಲು!.

ವಿಶ್ವದ ಮೋಸ್ಟ್ ವ್ಯಾಲ್ಯುಯೇಬಲ್ ಆಟೋಮೇಕರ್ ರೇಸ್‌ನಲ್ಲಿ ಕಳೆದ ಜನವರಿಯಲ್ಲಿ ಫೋರ್ಡ್ ಹಾಗೂ ಜಿಎಂ ಮೋಟಾರ್ಸ್ ಹಿಂದಿಕ್ಕಿದ ಟೆಸ್ಲಾ ಇದೀಗ ಮೊದಲ ಸ್ಥಾನದಲ್ಲಿದ್ದ ಟೊಯೋಟಾ ಹಿಂದಿಕ್ಕಿದೆ. ಟೆಸ್ಲಾ ಮಾರ್ಕೆಟ್ ಕ್ಯಾಪಿಟಲೈಸೇಶನ್ ಇದೀಗ 81.39 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ. 

ಅಂಬಾನಿ to ರಿತೇಶ್ ದೇಶ್‌ಮುಖ್: ಅಮೆರಿಕಾದ ಟೆಸ್ಲಾ ಕಾರು ಖರೀದಿಸಿದ ಭಾರತೀಯರು!

ಟೆಸ್ಲಾಗಿಂತ ಟೊಯೋಟಾ ಸೇರಿದಂತೆ ಹಲವು ಆಟೋಮೇಕರ್ ಮಾರ್ಕೆಟ್ ಕ್ಯಾಪಿಟಲೈಸೇಶನ್ ಹೆಚ್ಚಿತ್ತು. ಆದರೆ ಭುದವಾರ(ಜು.01) ಟೆಸ್ಲಾ ಷೇರುಗಳು 4% ಏರಿಕೆ ಕಂಡಿದೆ. ಈ ಮೂಲಕ ಗರಿಷ್ಠ ಮಟ್ಟ ತಲುಪಿದೆ. ಸದ್ಯ  ಟೆಸ್ಲಾ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು  ಸುಮಾರು 8 208 ಶತಕೋಟಿಗಳಷ್ಟಿದೆ . ಈ ಮೂಲಕ ಟೊಯೋಟಾವನ್ನು ಹಿಂದಿಕ್ಕಿದೆ.  ಟೊಯೋಟಾದ ಮಾರುಕಟ್ಟೆ ಕ್ಯಾಪಿಟಲೈಸೇಶನ್ ಮೌಲ್ಯ 2 202.74 ಬಿಲಿಯನ್ ಅಮೇರಿಕನ್ ಡಾಲರ್ .

ಟೆಸ್ಲಾ ಕಂಪನಿ ಕಳೆದೆರಡು ವರ್ಷಗಳಲ್ಲಿ ಹಲವು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದೆ.  ಹಿನ್ನಡೆಗಳ ನಡುವೆಯೂ ಟೆಸ್ಲಾ ಷೇರು ಏರಿಕೆಯಾಗುತ್ತಿರುವುದು ಕೆಲವು ವಿಶ್ಲೇಷಕರನ್ನು ಗೊಂದಲಕ್ಕೀಡು ಮಾಡಿದೆ. ಆದರೆ ಟೆಸ್ಲಾ ಕಳೆದೆರಡು ವರ್ಷದಲ್ಲಿ ಜಾಗತೀಕ ಮಟ್ಟದಲ್ಲಿ ಭಾರಿ ಬೇಡಿಕೆಯ ಕಾರಾಗಿ ಪರಿವರ್ತನೆಗೊಂಡಿದೆ.  ಟೆಸ್ಲಾ ಖಂಡಿತವಾಗಿಯೂ ಉತ್ಪಾದನೆಯನ್ನು ಚುರುಕುಗೊಳಿಸಿದೆ.   ಟೆಸ್ಲಾ 2019 ರಲ್ಲಿ 367,500 ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಿತು - ಹಿಂದಿನ ವರ್ಷಕ್ಕಿಂತ 50% ಹೆಚ್ಚಾಗಿದೆ . ಪ್ರಮುಖವಾಗಿ  ಅಗ್ಗದ ಮಾಡೆಲ್ ಟೆಸ್ಲಾ 3 ಮಾರಾಟದಿಂದ ಇದೀಗ ಹೊಸ ಜಾಗತೀಕ ಸ್ಥಾನ ಪಡೆಯಲು ಸಹಕಾರಿಯಾಗಿದೆ.