ನವದೆಹಲಿ(ಜು.11): ಅಮೆರಿಕಾ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ವಿಶ್ವದಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಂ ಕಂಪನಿಯಾಗಿರುವ ಟೆಸ್ಲಾ ಅತ್ಯಂತ ಆಕರ್ಷಕ, ದಕ್ಷ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಟೆಸ್ಲಾ ಕಾರುಗಳ ಪೈಕಿ ಟೆಸ್ಲಾ 3 ಮಾಡೆಲ್ ಕಾರು ಕಡಿಮೆ ಬೆಲೆಯ ಕಾರಾಗಿದೆ. 

ಕೊರೋನಾ ಕಾರಣ ಆನ್‌ಲೈನ್ ಬುಕಿಂಗ್; 1ರ ಬದಲು 28 ಕಾರು ಬುಕ್ ಮಾಡಿದ ಗ್ರಾಹಕ ಕಂಗಾಲು!

ಟೆಸ್ಲಾ ಬಹುತೇಕ ಎಲ್ಲಾ ಕಾರುಗಳು ಕೋಟಿ ರೂಪಾಯಿಗಳಿಂದ ಆರಂಭಗೊಳ್ಳಲಿದೆ. ಆದರೆ ಟೆಸ್ಲಾ 3 ಮಾಡೆಲ್ ಕಾರಿನ ಬೆಲೆ 70 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟೆಸ್ಲಾ ಮಾಡೆಲ್ 3 ಕಾರು ಹೆಚ್ಚು ಜನಪ್ರಿಯವಾಗಿದೆ. ಈ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡವುದಾಗಿ ಟೆಸ್ಲಾ ಕಂಪನಿ CEO ಎಲನ್ ಮಸ್ಕ್ ಹೇಳಿದ್ದರು. ಆದರೆ ಕಳೆದ 4 ವರ್ಷಗಳಿಂದ ಟೆಸ್ಲಾ ಭಾರತಕ್ಕೆ ಎಂಟ್ರಿಕೊಟ್ಟಿಲ್ಲ.

ಟೊಯೋಟಾ ಹಿಂದಿಕ್ಕಿ ವಿಶ್ವದ ಅತ್ಯಮೂಲ್ಯ ಕಾರು ಪಟ್ಟ ಗಿಟ್ಟಿಸಿಕೊಂಡ ಟೆಸ್ಲಾ!...

ಭಾರತದ ಅರವಿಂದ್ ಗುಪ್ತ ಅನ್ನೋ ಉದ್ಯಮಿ ಟೆಸ್ಲಾ ಮಾಡೆಲ್ 3 ಕಾರನ್ನು ಬುಕ್ ಮಾಡಿದ್ದರು. ಆದರೆ 3 ವರ್ಷಗಳಿಂದ ಕಾರು ಇನ್ನೂ ಭಾರತದಲ್ಲಿ ಬಿಡುಗಡೆಯಾಗದ ಕಾರಣ ಕಾರು ಖರೀದಿ ಸಾಧ್ಯವಾಗಿಲ್ಲ. ಈ ಕುರಿತು ಅರವಿಂದ್ ಟೆಸ್ಲಾಗೆ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎಲನ್ ಮಸ್ಕ್, ಕ್ಷಮಿಸಿ, ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.

 

ಟೆಸ್ಲಾ ಅಧೀಕೃತ  ವೆಬ್‌ಸೈಟ್ ಮೂಲಕ ಕಾರು ಬುಕಿಂಗ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಹೀಗಾಗಿ ಭಾರತದಲ್ಲಿ ಹಲವರು ಈ ಕಾರು ಬುಕ್ ಮಾಡಿದ್ದರು. ಆದರೆ ಟೆಸ್ಲಾ ಇನ್ನೂ ಭಾರತಕ್ಕೆ ಬರದ ಕಾರಣ ಖರೀದಿ ಸಾಧ್ಯವಾಗಿಲ್ಲ. ಇದೀಗ ಕಂಪನಿ ಸಿಇಓ ಸ್ಪಷ್ಟನೆ ನೀಡಿದ್ದು, ಗ್ರಾಹಕರಲ್ಲಿ ಮಂದಹಾಸ ಮೂಡಿದೆ.