ಬೆಂಗಳೂರು(ಸೆ.21):  ಅಮೆರಿಕ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ  ಟೆಸ್ಲಾ ಅತ್ಯಂತ ಜನಪ್ರಿಯ ಬ್ರ್ಯಾಂಡ್. ಹಲವು ದೇಶಗಳಲ್ಲಿ ಘಟಕ ಹೊಂದಿರುವ ಟೆಸ್ಲಾ ಭಾರತಕ್ಕೂ ಎಂಟ್ರಿ ಕೂಡುವುದಾಗಿ ಹೇಳಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ಅದು ಸಾಧ್ಯವಾಗಿರಲಿಲ್ಲ. ಇದೀಗ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಸಿಹಿ ಸುದ್ದಿ ನೀಡಿದೆ. ಕರ್ನಾಟಕದಲ್ಲಿ ರೀಸರ್ಚ್ ಹಾಗೂ ಅಭಿವೃದ್ಧಿ(  R&D) ಸೆಂಟರ್ ತೆರೆಯಲು ಮುಂದಾಗಿದೆ.

20 ನಿಮಿಷದಲ್ಲಿ 500 ಕಿ.ಮೀ ಮೈಲೇಜ್; ಬರುತ್ತಿದೆ ಅತ್ಯಾಧುನಿಕ ತಂತ್ರಜ್ಞಾನದ ಎಲೆಕ್ಟ್ರಿಕ್ ಕಾರು!

ಕರ್ನಾಟಕ ಸರ್ಕಾರ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದೆ. ಬಹುತೇಕ ವಿಚಾರ ಚರ್ಚೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.  ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಇದೀಗ  ಕರ್ನಾಟಕಕ್ಕೆ ಆಗಮಿಸುತ್ತಿದೆ. ಈ ಮೂಲಕ ರಾಜ್ಯದಲ್ಲಿ ಎಲೆಕ್ಟ್ರಿಕ್ ಕಾರು ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸಂಶೋಧನೆಗೆ ಪ್ರಾಶಸ್ತ್ಯ ಸಿಗಲಿದೆ. ಇಷ್ಟೇ ಅಲ್ಲ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಕೆ ಹೊಸ ದಿಕ್ಕಿನತ್ತ ಸಾಗಲಿದೆ.

ಟೊಯೋಟಾ ಹಿಂದಿಕ್ಕಿ ವಿಶ್ವದ ಅತ್ಯಮೂಲ್ಯ ಕಾರು ಪಟ್ಟ ಗಿಟ್ಟಿಸಿಕೊಂಡ ಟೆಸ್ಲಾ!

ಬೆಂಗಳೂರು ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ಮುಂದಿದೆ. ಈಗಾಗಲೇ ಹಲವು R&D ಸೆಂಟರ್ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.  ಜನರಲ್ ಎಲೆಕ್ಟ್ರಿಕ್‌ನ ಗ್ಲೋಬಲ್ ಲ್ಯಾಬ್, ಜಾನ್ ಎಫ್. ವೆಲ್ಚ್ ಟೆಕ್ನಾಲಜಿ ಸೆಂಟರ್ (JFWTC), IBM, ಸ್ಯಾಮ್ಸಂಗ್ ಸೇರಿದಂತೆ  400ಕ್ಕೂ ಹೆಚ್ಚಿನ   R&D ಸೆಂಟರ್  ಬೆಂಗಳೂರಿನಲ್ಲಿದೆ.

ಭಾರತದ ಟೆಸ್ಲಾ ಮುಖ್ಯಸ್ಥ ಹಾಗೂ ಕರ್ನಾಟಕದ ಕೈಗಾರಿಕಾ ಆಯುಕ್ತರು ಈ ತಿಂಗಳ ಅಂತ್ಯದಲ್ಲಿ ಮತ್ತೆ ಭೇಟಿಯಾಗಿ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದಾರೆ.  ಸರ್ಕಾರದ ಮೂಲಗಳು ಹೇಳಿವೆ.