ನವದೆಹಲಿ(ಮಾ.06): ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಟಾಟಾ ಟಿಯಾಗೋ ಹಾಗೂ ಟಿಗೋರ್ ಸಂಚಲನ ಮೂಡಿಸಿದೆ. ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ಮೂಲಕ ಇತರ ಕಾರುಗಳಿಗೆ ಪೈಪೋಟಿ ನೀಡಿದೆ. ಇದೀಗ ಟಿಯಾಗೋ ಹಾಗೂ ಟಿಗೋರ್ ಡೀಸೆಲ್ ಕಾರು ಓಟ ನಿಲ್ಲಿಸುತ್ತಿದೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!

ಎಪ್ರಿಲ್ 1, 2020ರಿಂದ ಟಾಟಾ ಟಿಯಾಗೋ ಹಾಗೂ ಟಿಗೋರ್ ಕಾರುಗಳು ಲಭ್ಯವಿರುವುದಿಲ್ಲ. ಈ ಕಾರಿಗೆ  BS VI ಎಮಿಶನ್ ನಿಯಮ ಪಾಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 2020ರಿಂದ ಟಿಯಾಗೋ, ಟಿಗೋರ್ ಕಾರುಗಳು ಉತ್ಪಾದನೆ ನಿಲ್ಲಿಸಲಿದೆ. ಆದರೆ ಟಿಯಾಗೋ ಹಾಗೂ ಟಿಗೋರ್ ಪೆಟ್ರೋಲ್ ಕಾರು ಲಭ್ಯವಿದೆ.

ಇದನ್ನೂ ಓದಿ: ಫಾರ್ಮುಲಾ 1 ಕಾರಿಗಿಂತ ವೇಗ- ಮಹೀಂದ್ರ ಹೈಪರ್ ಕಾರು ಅನಾವರಣ!

ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಮಾಲಿನ್ಯ ತಡೆಗಟ್ಟಲು ಎಲ್ಲಾ ವಾಹನಗಳು  BS VI  ಎಮಿಶನ್ ನಿಯಮ ಪಾಲಿಸಲೇಬೇಕು. ಎಪ್ರಿಲ್ 1, 2020ರಿಂದ ಈ ನಿಯಮ ಜಾರಿಗೆ ಬರಲಿದೆ. ಟಾಟಾ ಟಿಗೋರ್, ಟಿಯಾಗೋ ಡೀಸೆಲ್ ಕಾರು  BS VI ಎಮಿಶನ್ ನಾರ್ಮ್ಸ್ ಪಾಲಿಸಲು ವಿಫಲವಾದ ಕಾರಣ ಉತ್ಪಾದನೆ ನಿಲ್ಲಿಸುತ್ತಿದೆ.