ಮುಂಬೈ(ಜ.29): ಟಾಟಾ ನೆಕ್ಸಾನ್ ಭಾರತದಲ್ಲಿ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಇದೇ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಟಾಟಾ ಮೋಟಾರ್ಸ್ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ನೆಕ್ಸಾನ್ EV ಕಾರಿನಿಂದ ಇದೀಗ ಹ್ಯುಂಡೋ ಹಾಗೂ ಎಂಜಿ ಕಂಪನಿಗೆ ನಡುಕ ಶುರುವಾಗಿದೆ.

ಇದನ್ನೂ ಓದಿ: ಹ್ಯುಂಡೈ ಕೋನಾ ಪ್ರತಿಸ್ಪರ್ಧಿ MG ZS ಎಲೆಕ್ಟ್ರಿಕ್ ಕಾರು ಲಾಂಚ್!

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ 13.99 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ. ಈ ಮೂಲಕ ಭಾರತದ ಕಡಿಮೆ ಬೆಲೆ SUV ಎಲೆಕ್ಟ್ರಿಕ್ ಕಾರು ಅನ್ನೋ ಹಿರಿಮೆಗೆ ಪಾತ್ರವಾಗಿದೆ. ಭಾರತದಲ್ಲಿ ಮೊದಲ ಬಿಡುಗಡೆಯಾದ ಹ್ಯುಂಡೋ ಕೋನಾ ಎಲೆಕ್ಟ್ರಿಕ್ SUV ಕಾರಿನ ಬೆಲೆ 25 ಲಕ್ಷ ರೂಪಾಯಿ, ಇನ್ನು ಇತ್ತೀಚೆಗೆ ಬಿಡುಗಡೆಯಾದ ಎಂಜಿ ZS ಕಾರಿನ ಬೆಲೆ 20 ಲಕ್ಷ ರೂಪಾಯಿಂದ ಆರಂಭವಾಗುತ್ತಿದೆ. ಈ ಎರಡು ಕಾರಿಗೆ ನೆಕ್ಸಾನ್ ಪೈಪೋಟಿ ನೀಡಲಿದೆ.

ಇದನ್ನೂ ಓದಿ: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ- ಇಲ್ಲಿದೆ ಬೆಲೆ, ವಿಶೇಷತೆ!

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ (ಎಕ್ಸ್ ಶೋ ರೂಂ)
ಟಾಟಾ ನೆಕ್ಸಾನ್ EV XM -  13.99 ಲಕ್ಷ ರೂಪಾಯಿ
ಟಾಟಾ ನೆಕ್ಸಾನ್ EV XZ+ - 4.99 ಲಕ್ಷ ರೂಪಾಯಿ
ಟಾಟಾ ನೆಕ್ಸಾನ್ EV XZ+ Lux -  15.99 ಲಕ್ಷ ರೂಪಾಯಿ

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.