ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ- ಇಲ್ಲಿದೆ ಬೆಲೆ, ವಿಶೇಷತೆ!
ಬಹುನಿರೀಕ್ಷಿತ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ನಿರೀಕ್ಷೆಗಿಂತ ಬೆಲೆ ಕೊಂಚ ಏರಿಕೆ ಕಂಡಿದೆ. ಆದರೆ ಕೇಂದ್ರ ಮಂಡಿಸಿದ ಬಜೆಟ್‌ನಿಂದಾಗಿ ವಿನಾಯಿತಿ ಸಿಗಲಿದೆ. ನೂತನ ಕಾರಿನ ವಿಶೇಷತೆ ಇಲ್ಲಿದೆ.
ನವದೆಹಲಿ(ಜು.09): ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ SUV ಕಾರು ಹ್ಯುಂಡೈ ಕೋನಾ ಬಿಡುಗಡೆಯಾಗಿದೆ. ಭಾರತದ 11 ನಗರಗಳಲ್ಲಿ ಸದ್ಯ ಕೋನಾ ಕಾರು ಲಭ್ಯವಿದೆ. ದೇಶದಲ್ಲಾ ಎಲ್ಲಾ ಭಾಗದಲ್ಲೂ ಕೋನಾ ಬೆಲೆ ಒಂದೇ ರೀತಿಯಾಗಿರಲಿದೆ ಎಂದು ಕಂಪನಿ ಹೇಳಿದೆ. ನೂತನ ಕಾರಿನ ಆರಂಭಿಕ ಬೆಲೆ 25.30 ಲಕ್ಷ ರೂಪಾಯಿ .
ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಯಾಗಲಿರುವ 5 ಅತ್ಯುತ್ತಮ ಎಲೆಕ್ಟ್ರಿಕ್ ಕಾರು!
ಹುಂಡೈ ಎಲೆಕ್ಟ್ರಿಕ್ ಕಾರು ಬರೋಬ್ಬರಿ 452 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. 39.2kWh ಬ್ಯಾಟರಿ ಚಾಲಿತ ಎಂಜಿನ್ 289 ಕಿ.ಮೀ ಮೈಲೇಜ್ ರೇಂಜ್ ನೀಡಿದರೆ, 64kWh ಬ್ಯಾಟರಿ ಚಾಲಿತ ಎಂಜಿನ್ 452 ಕಿ.ಮೀ ಮೈಲೇಜ್ ನೀಡಲಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 54 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. 5 ಬಣ್ಣಗಳಲ್ಲಿ ಕೋನಾ ಕಾರು ಲಭ್ಯವಿದೆ.
ಇದನ್ನೂ ಓದಿ: ಭಾರತದಿಂದ 200 ಕಾರು ಖರೀದಿಸಿದ ಬಾಂಗ್ಲಾದೇಶ ಸೇನೆ!
ಭಾರತದಲ್ಲಿ ಬಿಡುಗಡೆಯಾಗಿರುವ ಕೋನಾ ಕಾರಿನಲ್ಲಿ 100 kW ಮೋಟಾರು ಬಳಸಲಾಗಿದೆ. 131 bhp ಪವರ್ ಹಾಗೂ 395 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ವಿದೇಶಗಳಲ್ಲಿರುವ ಕೋನಾ ಕಾರಿನಲ್ಲಿ 150 kW ಮೋಟಾರು ಬಳಸಲಾಗಿದೆ. ಇದು 200 bhp ಪವರ್ ಹಾಗೂ 395 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.