ಹ್ಯುಂಡೈ ಕೋನಾ ಬೆಲೆ 25 ಲಕ್ಷ ರೂಪಾಯಿ. ಈ ಕಾರಿಗೆ ಪ್ರತಿಸ್ಪರ್ಧಿಯಾಗಿ MG ಮೋಟಾರ್ಸ್ ZS ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಕೋನಾಗಿಂತ ಕಡಿಮೆಯಾಗಿದೆ. ಈ ಕಾರಿನ ವಿಶೇಷತೆ ಹಾಗೂ ಇತರ ವಿವರ ಇಲ್ಲಿದೆ ವಿವರ.

ನವದೆಹಲಿ(ಜ.23): ಹ್ಯುಂಡೋ ಕೋನಾ ಕಾರಿಗೆ ಪ್ರತಿಸ್ಪರ್ಧಿಯಾಗಿ MG ಮೋಟಾರ್ಸ್ ನೂತನ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಪವರ್, ಎಂಜಿನ್, ಮೈಲೇಜ್, ಜೊತೆಗೆ ಬೆಲೆಯಲ್ಲೂ ಕೋನಾ ಕಾರಿಗೆ ಪೈಪೋಟಿ ನೀಡಬಲ್ಲ MG ZS ಎಲೆಕ್ಟ್ರಿಕ್ ಕಾರು ಭಾರತದ ರಸ್ತೆಗಿಳಿದಿದೆ. ಎರಡು ವೇರಿಯೆಂಟ್‌ಗಳಲ್ಲಿ ನೂತನ ಎಲೆಕ್ಟ್ರಿಕ್ ಕಾರು ಲಭ್ಯವಿದೆ.

Scroll to load tweet…

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಎಂಜಿ ZS ಎಲೆಕ್ಟ್ರಿಕ್ ಕಾರು!.

ವಿಶೇಷ ಅಂದರೆ ಜನವರಿ 17ಕ್ಕಿಂತ ಮೊದಲು ಬುಕ್ ಮಾಡಿದವರಿಗೆ ಕಾರಿನ ಬೆಲೆ 19.88 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಗೆ ಸಿಗಲಿದೆ. ಕಾರಿನ ಬೆಲೆಗಿಂತ ಬರೋಬ್ಬರಿ 1 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಮೊದಲ ವೇರಿಯೆಂಟ್ ಕಾರಿನ ಬೆಲೆ 20.88 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇನ್ನು ಟಾಪ್ ವೇರಿಯೆಂಟ್ ಬೆಲೆ 23.58 ಲಕ್ಷ ರೂಪಯಿ(ಎಕ್ಸ್ ಶೋ ರೂಂ). ಟಾಪ್ ಮಾಡೆಲ್ ಕಾರನ್ನು ಜನವರಿ 17ರ ಮೊದಲು ಬುಕ್ ಮಾಡಿದವರಿಗೆ 22.58 ಲಕ್ಷ ರೂಪಾಯಿಗೆ ಸಿಗಲಿದೆ.

Scroll to load tweet…

ಇದನ್ನೂ ಓದಿ: ಬೆಂಗ್ಳೂರ್ ಸೇರಿದಂತೆ 5 ನಗರದಲ್ಲಿ MG ZS EV ಬುಕಿಂಗ್ ಆರಂಭ; 50 ಸಾವಿರ ರೂ!.

MG ಮೋಟಾರ್ಸ್ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ 2ನೇ ಕಾರು ಇದಾಗಿದೆ. ಇದಕ್ಕೊ ಮೊದಲು MG ಹೆಕ್ಟರ್ suv ಕಾರನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. MG ZS ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 340 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. 40 ನಿಮಿಷದಲ್ಲಿ ಶೇಕಡಾ 80 ರಷ್ಟು ಕಾರು ಚಾರ್ಜ್ ಆಗಲಿದೆ. 

ಇದನ್ನೂ ಓದಿ:MG ಹೆಕ್ಟರ್ 700 ಕಾರು ಮಾರಾಟ; ದೀಪಾವಳಿಗೆ ದಾಖಲೆ!..

MG ZS ಎಲೆಕ್ಟ್ರಿಕ್ ಕಾರು 44.5 kWh IP6 ಸರ್ಟಿಫೈಡ್ ಬ್ಯಾಟರಿಹೊಂದಿದೆ. ಇನ್ನು 141 bhp ಪವರ್ ಹಾಗೂ 353 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಬೆಂಗಳೂರು, ದೆಹಲಿ, ಮುಂಬೈ, ಅಹಮ್ಮದಾಬಾದ್ ಹಾಗೂ ಹೈದರಾಬಾದ್ ನಗರಗಳಲ್ಲಿ MG ZS ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಇನ್ನುಳಿದ ನಗರದಳಲ್ಲಿ ಕಾರು ಚಾರ್ಜಿಂಗ್ ಸ್ಟೇಶನ್ ಅಭಿವೃದ್ದಿ ಪಡಿಸಿದ ಬಳಿಕ ಬಿಡುಗಡೆಯಾಗಲಿದೆ.