ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!
ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಮೈಲೇಜ್‌ಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಈಗ ಹಾಗಲ್ಲ ಮೈಲೇಜ್ ಜೊತೆಗೆ ಸುರಕ್ಷತೆಯೂ ಅಷ್ಟೇ ಮುಖ್ಯ. ಸಣ್ಣ ಕಾರಾಗಿರಲಿ, SUV ಆಗಿರಲಿ, ಕಾರು ಸುರಕ್ಷತಾ ಪರೀಕ್ಷೆಯಲ್ಲಿ 5 ಸ್ಟಾರ್ ಪಡೆದಿರಬೇಕು. ಭಾರತದಲ್ಲಿ ಲಭ್ಯವಿರುವ ಕಾರುಗಳ ಪೈಕಿ ವಿದೇಶಿ ಕಾರುಗಳೆಲ್ಲಾ ಸುರಕ್ಷತೆಯಲ್ಲಿ ಹಿಂದೆ ಉಳಿದಿದೆ. ಆದರೆ ಭಾರತದ ಟಾಟಾ ಮೋಟಾರ್ಸ್, ಮಹೀಂದ್ರ ದಾಖಲೆ ಬರೆದಿದೆ. ಟಾಪ್ 5 ಪಟ್ಟಿಯಲ್ಲಿ ಭಾರತದ ಕಾರುಗಳೇ ಸ್ಥಾನ ಪಡೆದಿದೆ
ನವದೆಹಲಿ(ಜು.11); ಸುರಕ್ಷತೆಗೆ ಮೊದಲ ಆದ್ಯತೆ. ಸದ್ಯ ಕೊರೋನಾ ವೈರಸ್ ಪರಿಸ್ಥಿತಿಯಲ್ಲಿ ಆರೋಗ್ಯ, ಸುರಕ್ಷತೆ ಕುರಿತು ಎಚ್ಚರ ವಹಿಸಲು ಕಟ್ಟು ನಿಟ್ಟಿನ ಆದೇಶಗಳನ್ನೇ ಜಾರಿ ಮಾಡಲಾಗಿದೆ. ಇನ್ನು ಪ್ರಯಾಣದ ವೇಳೆ ವಾಹನದ ಸುರಕ್ಷತೆಯೂ ಅಷ್ಟೇ ಮುಖ್ಯ. ಭಾರತದಲ್ಲಿ ಟ್ರೆಂಡ್ ಬದಲಾಗಿದೆ. ಗರಿಷ್ಠ ಸೇಫ್ಟಿ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಗರಿಷ್ಠ ಸೇಫ್ಟಿ ನೀಡುತ್ತಿರುವ ಕಾರುಗಳ ಪೈಕಿ ಭಾರತೀಯ ಆಟೋಮೊಬೈಲ್ ಕಂಪನಿಗಳೇ ಮುಂಚೂಣಿಯಲ್ಲಿದೆ.
ಸೇತುವೆಯಿಂದ 15 ಅಡಿ ಕೆಳಕ್ಕೆ ಬಿದ್ದ ಟಾಟಾ ನೆಕ್ಸಾನ್, ಪ್ರಯಾಣಿಕರು ಸೇಫ್!...
ಮಹೀಂದ್ರ , ಟಾಟಾ ಮೋಟಾರ್ಸ್ ಭಾರತದ ಆಟೋಮೊಬೈಲ್ ಕಂಪನಿಗಳು ಅತ್ಯಂತ ಸುರಕ್ಷತೆಯ ಕಾರನ್ನು ನೀಡುತ್ತಿದೆ. ಆದರೆ ವಿದೇಶಿ ಕಂಪನಿಗಳು ದುಪ್ಪಟ್ಟು ಹಣ ವಸೂಲಿ ಮಾಡಿದರೂ ಸುರಕ್ಷತೆಯಲ್ಲಿ ಹಿಂದುಳಿದೆ. ಇದೀಗ ಗ್ಲೋಬಲ್ NCAP ಭಾರತದ ಅತ್ಯಂತ ಸುರಕ್ಷತೆಯ ಕಾರುಗಳ ವಿವರ ನೀಡಿದೆ. ಈ ಪಟ್ಟಿಯಲ್ಲಿ ಆರಂಭಿಕ 5 ಸ್ಥಾನಗಳಲ್ಲಿ ಭಾರತದ ಕಾರುಗಳೇ ರಾರಾಜಿಸುತ್ತಿದೆ.
ಮಹೀಂದ್ರ XUV300 ಕ್ರಾಶ್ ಟೆಸ್ಟ್ ರಿಸಲ್ಟ್ ಬಹಿರಂಗ; ಭಾರತದ ಮತ್ತೊಂದು ಸೇಫ್ಟಿ ಕಾರು
ಭಾರತದಲ್ಲಿ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಮಹೀಂದ್ರ XUV300 ಪಾತ್ರವಾಗಿದೆ. 5 ಸ್ಟಾರ್ ರೇಟಿಂಗ್ ಪಡೆದಿದೆ. ವಯಸ್ಕರ ಸುರಕ್ಷತೆಯಲ್ಲಿ 5 ಸ್ಟಾರ್ ಹಾಗೂ ಮಕ್ಕಳ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ. ಟಾಟಾ ನೆಕ್ಸಾನ್ ಹಾಗೂ ಟಾಟಾ ಅಲ್ಟ್ರೋಸ್ ವಯಸ್ಕರ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಮಕ್ಕಳ ಸುರಕ್ಷತಯಲ್ಲಿ 3 ಸ್ಟಾರ್ ಪಡೆದಿದೆ.
ಮೊದಲ ಸ್ಥಾನ ಮಹೀಂದ್ರ XUV300 ಪಾಲಾಗಿದ್ದರೆ, ಬಳಿಕ ಟಾಟಾ ಅಲ್ಟ್ರೋಜ್, ಟಾಟಾ ನೆಕ್ಸಾನ್, ಟಾಟಾ ಟಿಗೋರ್, ಟಾಟಾ ಟಿಯಾಗೋ ಸ್ಥಾನ ಪಡೆದಿದೆ. ಈ ಮೂಲಕ ಆರಂಭಿಕ 5 ಸ್ಥಾನಗಳಲ್ಲಿ ಭಾರತದ ಕಾರುಗಳೇ ಸ್ಥಾನ ಪಡೆದಿದೆ. ಇನ್ನು 6ನೇ ಸ್ಥಾನದಲ್ಲಿ ಜರ್ಮನಿಯ ಫೋಕ್ಸ್‌ವ್ಯಾಗನ್ ಪೋಲೋ ಸ್ಥಾನ ಪಡೆದಿದೆ. 7ನೇ ಸ್ಥಾನದಲ್ಲಿ ಮಹೀಂದ್ರ ಮೋರಾಜೋ, 8ನೇ ಸ್ಥಾನದಲ್ಲಿ ಜಪಾನ್‌ನ ಟೊಯೋಟಾ ಇಟಿಯೋಸ್, 9ನೇ ಸ್ಥಾನದಲ್ಲಿ ಮಾರುತಿ ಸುಜುಕಿ ಬ್ರೆಜ್ಜಾ ಹಾಗೂ 10ನೇ ಸ್ಥಾನದಲ್ಲಿ ಟಾಟಾ ಜೆಸ್ಟ್ ಕಾರು ಸ್ಥಾನ ಪಡೆದಿದೆ.