ಬೆಂಗಳೂರು(ಜು.10): ಭಾರತದ ಪ್ರಮುಖ ಆಟೋ ಬ್ರಾಂಡ್ ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಬ್ರ್ಯಾಂಡ್‍ಗಳಾದ ಟಿಯಾಗೊ, ನೆಕ್ಸನ್ ಮತ್ತು ಆಲ್ಟ್ರೊಜ್‍ಗಳ ಮೇಲೆ ಅಪೂರ್ವ ಮತ್ತು ಆಕರ್ಷಕ ಧನಸಹಾಯದ ಕೊಡುಗೆಯನ್ನು ಘೋಷಿಸಿದೆ. ಗ್ರಾಹಕರು ಈಗ ಶೂನ್ಯ ಡೌನ್ ಪೇಮೆಂಟ್ ಮಾಡಬಹುದು, 6 ತಿಂಗಳ EMI ವಿನಾಯಿತಿ ಪಡೆಯಬಹುದು (ಬಡ್ಡಿಯನ್ನು ಮಾತ್ರ ಮಾಸಿಕ ಸಲ್ಲಿಕೆ ಮಾಡಬೇಕಾಗುತ್ತದೆ) ಮತ್ತು 5 ವರ್ಷಗಳ ಸಾಲದ ಅವಧಿಗೆ 100% ಆನ್-ರೋಡ್ ಧನಸಹಾಯವನ್ನು ಪಡೆಯಬಹುದು. 

ಟಾಟಾ ಅಲ್ಟ್ರೋಜ್ ಕಾರಿಗೆ ಬಂಪರ್ ಆಫರ್, EMI ಕೇವಲ 5,555 ರೂಪಾಯಿ!

ಟಾಟಾ ಮೋಟಾರ್ಸ್  8 ವರ್ಷಗಳವರೆಗಿನ ದೀರ್ಘಾವಧಿಯ ಸಾಲದ ಮೇಲೆ ಕೈಗೆಟುಕುವ, ಅನೇಕ ಹಣಕಾಸು ಪಾಲುದಾರರ ಸಹಯೋಗದೊಂದಿಗೆ  ಸ್ಟೆಪ್-ಅಪ್ EMIಗಳನ್ನು ಸಹ ನೀಡುತ್ತಿದೆ. ಕೇವಲ 5,555 / - ರೂಗಳ ಮೊದಲ EMI ನೊಂದಿಗೆ, ನೀವು ಈಗ 5-ಸ್ಟಾರ್ ಜಿಎನ್‍ಸಿಎಪಿ ಸುರಕ್ಷತೆ ರೇಟಿಂಗ್‍ನ  ಪ್ರೀಮಿಯಂ ಹ್ಯಾಚ್‍ಬ್ಯಾಕ್ ಆಲ್ಟ್ರೊಜ್ ಅನ್ನು ಮನೆಗೆ ಕೊಂಡೊಯ್ಯಬಹುದು. ಜನಪ್ರಿಯ ಎಸ್‍ಯುವಿ ನೆಕ್ಸನ್ ಮತ್ತು ಹ್ಯಾಚ್‍ಬ್ಯಾಕ್ ಟಿಯಾಗೊ ಗಳು  ಸಹ ಕ್ರಮವಾಗಿ ಕೇವಲ ರೂ. 7499/- ಮತ್ತು ರೂ .4999 /- EMIಗಳಲ್ಲಿ ಲಭ್ಯವಿವೆ.

ಹ್ಯುಂಡೈ, MG ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು

ಟಾಟಾ ಮೋಟಾರ್ಸ್ ಅಂತರರಾಷ್ಟ್ರೀಯ ಗುಣಮಟ್ಟ, ವಿನ್ಯಾಸ ಮತ್ತು ಸುರಕ್ಷತೆಯೊಂದಿಗೆ ಹೆಮ್ಮೆಯಿಂದ ಭಾರತೀಯತೆಯ ಕಾರುಗಳನ್ನು ತಯಾರಿಸುತ್ತದೆ. ಕೊಡುಗೆಗಳು ಮತ್ತು ಕಾರು ಖರೀದಿಸುವ ಆಯ್ಕೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಿಮ್ಮ ಹತ್ತಿರದ ಡೀಲರ್‌‌ ಬಳಿ ವಿಚಾರಿಸಿ. 

ಗ್ರಾಹಕರು ಅವರ ಮನೆಗಳ ಸೌಕರ್ಯ ಮತ್ತು ಸುರಕ್ಷತೆಯಲ್ಲಿ ಇತ್ತೀಚೆಗೆ ಪ್ರಾರಂಭಿಸಿರುವ ಎಂಡ್-ಟು-ಎಂಡ್ ಆನ್‍ಲೈನ್ ಪ್ಲಾಟ್‍ಫಾರ್ಮ್ ‘ಕ್ಲಿಕ್ ಟು ಡ್ರೈವ್' ನ ಮೂಲಕ ವಿಚಾರಣೆ ಮಾಡಬಹುದು, ಟೆಸ್ಟ್ ಡ್ರೈವ್ ಅನ್ನು ವಿನಂತಿಸಬಹುದು, ಬುಕಿಂಗ್ ಮಾಡಬಹುದು.

ಬೇಡಿಕೆಯ ಮೇರೆಗೆ ಟೆಸ್ಟ್ ಡ್ರೈವ್‍ಗಳನ್ನು ಗ್ರಾಹಕರ ಆದ್ಯತೆಯ ಸ್ಥಳದಲ್ಲಿ ನೀಡಲಾಗುತ್ತಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು, ಯಾವುದೇ ದೈಹಿಕ ಸಂಪರ್ಕವನ್ನು ತಪ್ಪಿಸಲು ಹಿಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವ  ಸಿಬ್ಬಂದಿಯೊಂದಿಗೆ ಒಬ್ಬ ವ್ಯಕ್ತಿ ಮಾತ್ರ ವಾಹನವನ್ನು ಓಡಿಸುತ್ತಾನೆ. ಪ್ರತಿ ಟೆಸ್ಟ್ ಡ್ರೈವ್‍ನ ನಂತರ, ವಾಹನ ಚಾಲನೆ ಮಾಡುವಾಗ ಸಂಪರ್ಕಕ್ಕೆ ಬರುವ ವಾಹನದ ಒಳಾಂಗಣವನ್ನು ರಕ್ಷಿಸುವ ರಕ್ಷಣಾತ್ಮಕ ಕವರ್‌ಗಳನ್ನು ಬದಲಾಯಿಸುವುದು ಸೇರಿದಂತೆ ವಾಹನವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ.