5 ತಿಂಗಳಲ್ಲಿ 10 ಸಾವಿರ ಟಾಟಾ ಹ್ಯಾರಿಯರ್ ಕಾರು ಬುಕಿಂಗ್!
ಟಾಟಾ ಹ್ಯಾರಿಯರ್ ಕಾರಿಗೆ ಬೇಡಿಗೆ ಹೆಚ್ಚಾಗಿದೆ. ಕಳೆದ 5 ತಿಂಗಳಲ್ಲಿ ಟಾಟಾ ಹ್ಯಾರಿಯರ್ ಕಾರು ಬುಕ್ ಮಾಡಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಡಸ್ಟರ್, ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿರುವ ಹ್ಯಾರಿಯರ್ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗುತ್ತಿಲ್ಲ.
ನವದೆಹಲಿ(ಮಾ.13): ಟಾಟಾ ಹ್ಯಾರಿಯರ್ ಕಾರು ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದೆ. ಆದರೆ ಹ್ಯಾರಿಯರ್ ಬುಕಿಂಗ್ ಆರಂಭಗೊಂಡು 5 ತಿಂಗಳಾಗಿವೆ. ಇದೀಗ ಕಡಿಮೆ ಅವದಿಯಲ್ಲಿ ಬರೊಬ್ಬರಿ 10,000 ಹ್ಯಾರಿಯರ್ ಕಾರು ಬುಕ್ ಆಗಿದೆ. ಈ ಮೂಲಕ SUV ಸೆಗ್ಮೆಂಟ್‌ನಲ್ಲಿ ದಾಖಲೆ ಬರೆದಿದೆ.
ಇದನ್ನೂ ಓದಿ: TATA ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ- i20,ಬಲೆನೋಗಿಂತ ಕಡಿಮೆ!
ಗ್ರಾಹಕರು ಟಾಟಾ ಹ್ಯಾರಿಯರ್ ಕಾರು ಖರೀದಿಸಲು ಮುಗಿಬೀಳುತ್ತಿದ್ದಾರೆ. ಆದರೆ ಬುಕ್ ಮಾಡಿದ ಗ್ರಾಹಕರಿಗೆ ಕಾರು ತಲುಪಲು ವಿಳಂಭವಾಗುತ್ತಿದೆ. ಬಿಡುಗಡೆಯಾದ ದಿನಾಂಕದಿಂದ ಇಲ್ಲೀವರೆಗೆ 1,450 ಕಾರುಗಳು ಗ್ರಾಹಕರ ಕೈಸೇರಿದೆ. ಶೀಘ್ರದಲ್ಲೇ ಬುಕ್ ಮಾಡಿದ ಗ್ರಾಹಕರಿಗೆ ಕಾರು ತಲುಪಿಸುವುದಾಗಿ ಟಾಟಾ ಹೇಳಿದೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಮಹೀಂದ್ರ ಬೊಲೆರೊ!
ಟಾಟಾ ಹರಿಯರ್ ಕಾರು, ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. 30,000 ರೂಪಾಯಿ ನೀಡಿ ಟಾಟಾ ಹ್ಯಾರಿಯರ್ ಕಾರು ಬುಕ್ ಮಾಡಬಹುದು. Tata Harrier ಬೆಲೆ 12.69 ಲಕ್ಷ ರೂಪಾಯಿಂದ ಆರಂಭಗೊಳ್ಳಲಿದೆ. ಟಾಪ್ ಮಾಡೆಲ್ ಬೆಲೆ 16.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). XE, XM, XT, ಹಾಗೂ XZ ಸೇರಿದಂತೆ ಒಟ್ಟು 4 ವೇರಿಯೆಂಟ್‌ಗಳಲ್ಲಿ Tata Harrier ಕಾರು ಲಭ್ಯವಿದೆ. ಕೇವಲ ಡೀಸೆಲ್ ವೇರಿಯೆಂಟ್ ಕಾರು ಮಾತ್ರ ಲಭ್ಯವಿದೆ.