TATA ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ- i20,ಬಲೆನೋಗಿಂತ ಕಡಿಮೆ!

ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಇದೀಗ ವಿಶ್ವದಲ್ಲೇ ಸಂಚಲನ ಮೂಡಿಸಿದೆ.  ಈ ಕಾರಿನ ಬೆಲೆ ಬಹಿರಂಗವಾಗಿದೆ. ಮಾರುತಿ ಬಲೆನೋ, ಹ್ಯುಂಡೈ ಐ20 ಕಾರಿಗಿಂತ ಕಡಿಮೆ ಬೆಲೆಯ ಈ ಕಾರಿಗಾಗಿ ಇದೀಗ ಗ್ರಾಹಕರು ಕಾಯುತ್ತಿದ್ದಾರೆ.
 

Tata Motors is likely to price the Altroz EV at over Rs 10 lakhs

ನವದೆಹಲಿ(ಮಾ.09): ಮಾರುತಿ ಬಲೆನೊ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಮೋಟಾರ್ಸ್ ಅಲ್ಟ್ರೋಜ್ ಕಾರು ಅನಾವರಣ ಮಾಡಿದೆ. ವಿಶೇಷ ಅಂದರೆ ಪೆಟ್ರೋಲ್, ಡೀಸೆಲ್ ಅಲ್ಟ್ರೋಜ್ ಕಾರಿನ ಜೊತೆಗೆ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಕೂಡ ಅನಾವರಣ ಮಾಡಲಾಗಿದೆ. ಇದೀಗ ಇದರ ಬೆಲೆ ಬಹಿರಂಗ ಗೊಂಡಿದೆ. 

Tata Motors is likely to price the Altroz EV at over Rs 10 lakhs

ಇದನ್ನೂ ಓದಿ: ಸೇಫ್ಟಿಗೆ ಮೊದಲ ಆದ್ಯತೆ- 5 ಸ್ಟಾರ್ ಕಾರನ್ನೇ ನೀಡುತ್ತೇವೆ: ರತನ್ ಟಾಟಾ

ಜಿನೆವಾ ಮೋಟಾರು ಶೋನಲ್ಲಿ ಟಾಟಾ ನಾಲ್ಕು ಕಾರುಗಳನ್ನು ಅನಾವರಣ ಮಾಡಿದೆ. ಇದರಲ್ಲಿ ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರು ಪ್ರಮುಖ ಆಕರ್ಷಣೆಯಾಗಿದೆ. ಈ ಕಾರಿನ ಬೆಲೆ 10 ಲಕ್ಷ ರೂಪಾಯಿ ಎಂದು ಹೇಳಲಾಗ್ತಿದೆ. ಇನ್ನು ಎಲೆಕ್ಟ್ರಿಕ್ ಕಾರು ಖರೀದಿಸುವ  ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಕೂಡ ಸಿಗಲಿದೆ. ಹೀಗಾಗಿ ಈ ಕಾರು ಮಾರುತಿ ಬಲೆನೋ ಹಾಗೂ ಹ್ಯುಂಡೈ ಐ20 ಕಾರಿಗಿಂತ ಕಡಿಮೆಯಾಗಲಿದೆ.

Tata Motors is likely to price the Altroz EV at over Rs 10 lakhs

ಇದನ್ನೂ ಓದಿ: ಟಾಟಾ ಅಲ್ಟ್ರೊಜ್ ಎಲೆಕ್ಟ್ರಿಕ್ ಸೇರಿದಂತೆ 4 ಕಾರು ಅನಾವರಣ!

ಇತರ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿದರೆ ಟಾಟಾ ಅಲ್ಟ್ರೋಜ್ ವಿಶ್ವದ ಅತ್ಯಂತ ಕಡಿಮೆ ಬೆಲೆ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2020ರ ಅಂತ್ಯಭಾಗ ಅಥವಾ 2021ರ ಆರಂಭದಲ್ಲಿ ಅಲ್ಟ್ರೋಜ್ ಬಿಡುಗಡೆಯಾಗಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 250 ರಿಂದ 300 ಕಿ.ಮೀ ರೇಂಜ್ ಪ್ರಯಾಣ ಮಾಡಬಹುದು.

Tata Motors is likely to price the Altroz EV at over Rs 10 lakhs

ಇದನ್ನೂ ಓದಿ: ಮಡದಿಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಪುನೀತ್ ರಾಜ್‌ಕುಮಾರ್!

ಒಂದು ಗಂಟೆಯ ಕ್ವಿಕ್ ಚಾರ್ಜಿಂಗ್‌ನಲ್ಲಿ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. ಆಕರ್ಷಕ ವಿನ್ಯಾಸ ಹೊಂದಿರು ಆಲ್ಟ್ರೋಜ್ ವಿಶ್ವದಲ್ಲೇ ಹೊಸ ಸಂಚಲನ ಮೂಡಿಸಲಿದೆ. ಇನ್ನು ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಕಾರನ್ನೇ ನೀಡಲಿದೆ ಎಂದು ಟಾಟಾ ಗ್ರೂಪ್ ಮಾಲೀಕ ರತನ್ ಟಾಟಾ ಹೇಳಿದ್ದಾರೆ. ಹೀಗಾಗಿ ಸುರಕ್ಷತೆಯಲ್ಲಿ ಅಲ್ಟ್ರೋಜ್ ರಾಜಿಯಾಗಲ್ಲ ಅನ್ನೋದು ಸ್ಪಷ್ಟ.

Latest Videos
Follow Us:
Download App:
  • android
  • ios