ನವದೆಹಲಿ(ಮಾ.12): ಭಾರತದ ಕಾರು ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಕಾಲ ಮಾರಾಟವಾಗಿರುವ ಮಹೀಂದ್ರ ಬೊಲೆರೊ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. 2000ದಲ್ಲಿ ಮೊದಲ ಬಾರಿಗೆ ಭಾರತದ ರಸ್ತೆಗಿಳಿದ ಮಹೀಂದ್ರ ಬೊಲೆರೊ ಬರೋಬ್ಬರಿ 19 ವರ್ಷಗಳಿಂದ ಮಾರಾಟದಲ್ಲಿ ಯಾವುದೇ ಇಳಿಕೆಯಾಗದೇ ಸ್ಥಿರತೆ ಉಳಿಸಿಕೊಂಡಿದೆ.

ಇದನ್ನೂ ಓದಿ: ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು!

ಹಲವು ಬಾರಿ ಅಪ್‍‌ಗ್ರೇಡ್ ಆಗಿರುವ ಮಹೀಂದ್ರ ಬೊಲೆರೊ ವಿನ್ಯಾಸದಲ್ಲೂ ಸಣ್ಣ ಬದಲಾವಣೆ ಮಾಡಿಕೊಂಡು ಕಾಲಕ್ಕೆ ತಕ್ಕಂತೆ ಬಿಡುಗಡೆಯಾಗಿದೆ. ಇದೀಗ  ಕೆಲ ಫೀಚರ್ಸ್‌ಗಳು ಸೇರಿಕೊಳ್ಳುತ್ತಿದೆ. ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೈಂಡರ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಸುರಕ್ಷತೆಯ ಫೀಚರ್ಸ್‌ನೊಂದಿಗೆ ನೂತನ ಬೊಲೆರೊ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಫಾರ್ಮುಲಾ 1 ಕಾರಿಗಿಂತ ವೇಗ- ಮಹೀಂದ್ರ ಹೈಪರ್ ಕಾರು ಅನಾವರಣ!

ಅಕ್ಟೋಬರ್ 1, 2019ರ ಬಳಿಕ ಕನಿಷ್ಠ ಸುರಕ್ಷತೆ ಇಲ್ಲದ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡುವಂತಿಲ್ಲ. ಕ್ರಾಶ್ ಟೆಸ್ಟ್‌ನಲ್ಲಿ ಮಹೀಂದ್ರ ಬೊಲೆರೊ ಕನಿಷ್ಠ ಸುರಕ್ಷತೆ ಅಂಕ ಪಡೆದಿಲ್ಲ. ಹೀಗಾಗಿ 2019ರ ಅಕ್ಟೋಬರ್ ಬಳಿಕ ಮಹೀಂದ್ರ ಬೊಲೆರೊ ಮಾರಾಟ ಕಷ್ಟ. ಕೇಂದ್ರ ಸರ್ಕಾರದ ಸುರಕ್ಷತೆ ನಿಯಮ ಪಾಲಿಸಿದರೆ ಮಾತ್ರ ಬೊಲೆರೊಗೆ ಸುದೀರ್ಘ ಭವಿಷ್ಯವಿದೆ. ಆದರೆ ಸದ್ಯ ಸೇಫ್ಟಿ ಫೀಚರ್‌ಗಳೊಂದಿಗೆ ಬೊಲೆರೊ ಬಿಡುಗಡೆಯಾಗುತ್ತಿದೆ.