Asianet Suvarna News Asianet Suvarna News

ಮಹಿಳಾ ರೈತರನ್ನು ಬೆಳಕಿಗೆ ತರೋಣ, ಸ್ವರಾಜ್ ಟ್ರಾಕ್ಟರ್‌ನಿಂದ ಹೊಸ ಅಭಿಯಾನ!

ಮಹಿಳಾ ದಿನಾಚರಣೆ ಅಂಗವಾಗಿ ಸ್ವರಾಜ್ ಟ್ರಾಕ್ಟರ್ ಹೊಸ ಅಭಿಯಾನ ಆರಂಭಿಸಿದೆ. ಮಹಿಳಾ ರೈತರು ಬೆಳಕಿಗೆ ಬರುವುದೇ ಇಲ್ಲ. ಎಲ್ಲರಿಗೂ ಸ್ಪೂರ್ತಿಯಾಗಿರುವ ಇಂತ ಮಹಿಳಾ ರೈತರನ್ನು ಹುಡುಕಿ ಸಾಧನೆಗೆ ಸಲಾಂ ಹೇಳುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

Swaraj Tractors to bring women farmer into the limelight in India
Author
Bengaluru, First Published Mar 6, 2020, 6:03 PM IST

 ನವದೆಹಲಿ(ಮಾ.06): ಈ ಬಾರಿಯ ಮಹಿಳಾ ದಿನಾಚರಣೆಗೆ ಸ್ವರಾಜ್ ಟ್ರಾಕ್ಟರ್ ಸ್ಪೂರ್ತಿಯ ಸೆಲೆಯಾಗಿರು ಮಹಿಳಾ ರೈತರನ್ನು ವಿಶ್ವಕ್ಕೆ ಪರಿಚಯಿಸಲು ಮುಂದಾಗಿದೆ. ಸ್ವರಾಜ್ ಟ್ರಾಕ್ಟರ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದೆ. ಇಷ್ಟೇ ಅಲ್ಲ ಸ್ಪೂರ್ತಿ ನೀಡುವ ಈ ಮಹಿಳಾ ರೈತರನ್ನು ಮಾರ್ಚ್ 8 ರ ಮಹಿಳಾ ದಿನಾಚರಣೆಯಲ್ಲಿ ಸನ್ಮಾನಿಸಲು ಮುಂದಾಗಿದೆ.

ಇದನ್ನೂ ಓದಿ: ಸ್ವರಾಜ್ ಟ್ರಾಕ್ಟರ್-ಫೋರ್ಡ್ ಎಂಡೇವರ್ ನಡುವೆ ಸ್ಪರ್ಧೆ-ಅಚ್ಚರಿ ಫಲಿತಾಂಶ!

ಸ್ವರಾಜ್ ಟ್ರಾಕ್ಟರ್ ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ರೈತರನ್ನು ಹುಡುಕಿ ಅವರ ಸ್ಪೂರ್ತಿಯ ಕತೆ ಹೇಳಲು ಕೋರಲಾಗಿದೆ. ಪ್ರತಿ ದಿನ ಹುಡುಕುತ್ತೀರಿ, ಹಡುಕುತ್ತಿರಿ. ಪ್ರತಿ ದಿನ ಸ್ಪೂರ್ತಿ ವಿಚಾರನ್ನು ಹುಡುಕುತ್ತೀರಿ. ಹಾಗೇ ಸ್ಪೂರ್ತಿ ನೀಡುವ ಮಹಿಳೆಯರನ್ನು ಹುಡುಕಿ. ನೀವು ತಿಂಡಿ ತಿನಿಸುಗಳನ್ನು ಆರ್ಡರ್ ಮಾಡುವುಗಾ ಹುಡುಕುತ್ತೀರಿ. ಇದೇ ವೇಳೆ ನಿಮ್ಮ ಆಹಾರವನ್ನು ಬೆಳೆದ ಮಹಿಳಾ ರೈತರನ್ನು ಹುಡುಕಿ. ತೆರೆಮರೆಯಲ್ಲಿ ಅಡೆತಡೆಗಳನ್ನು, ಸವಾಲುಗಳನ್ನು ಎದುರಿಸುತ್ತಿರುವ ಸ್ಪೂರ್ತಿಯ ಮಹಿಳಾ ರೈತರನ್ನು ಹುಡುಕಿ ಎಂದು ಸ್ವರಾಜ್ ಟ್ರಾಕ್ಟರ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿತ್ತು.

 

ಇದನ್ನೂ ಓದಿ: ಟ್ರ್ಯಾಕ್ಟರ್‌ ರಫ್ತಿನಲ್ಲಿ ಸೊನಾಲಿಕಾ ನಂಬರ್‌ 1

ಸ್ಪೂರ್ತಿಯ ಮಹಿಳಾ ರೈತರ ಕುರಿತ ರೋಚಕ ಕತೆಯನ್ನು ಹಂಚಿಕೊಳ್ಳಿ. ಈ ಮೂಲಕ ಸ್ವರಾಜ್ ಇನೋವೇಶನ್ ಪ್ರಶಸ್ತಿಗೆ ಸಹಕರಿಸಿ ಎಂದಿದೆ. ಈ ಮಹಿಳಾ ರೈತರ ರೋಚಕ  ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲು ಸ್ವರಾಜ್ ಟ್ರಾಕ್ಟರ್ ಅವಕಾಶ ಮಾಡಿಕೊಡಲಿದೆ. ಈ ಮೂಲಕ ಭಾರತದ ಇತರ ಮಹಿಳೆಯರಿಗೆ ಸ್ಪೂರ್ತಿಯಾಗಲಿ ಅನ್ನೋದು ಈ ಅಭಿಯಾನದ ಉದ್ದೇಶ ಎಂದು ಸ್ವರಾಜ್ ಟ್ರಾಕ್ಟರ್ ಹೇಳಿದೆ.
 

Follow Us:
Download App:
  • android
  • ios