ಪುಣೆ(ಜ.08):  SUV ಕಾರುಗಳು ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿದೆ. ಹೀಗಾಗಿ ಆಫ್ ರೋಡ್‌ಗಳಲ್ಲೂ SUV ಕಾರುಗಳು ಯಶಸ್ಸುಗಳಿಸಿದೆ. bhp ಪವರ್ ಹಾಗೂ ಗರಿಷ್ಠ ಟಾರ್ಕ್ ಉತ್ವಾದಿಸಬಲ್ಲ ಈ ಕಾರುಗಳು ಇತರ ಯಾವುದೇ ವಾಹನಕ್ಕೆ ಪೈಪೋಟಿ ನೀಡಲಿದೆ. SUV ಕಾರಿನ ಶಕ್ತಿ ಪರಿಶೀಲಿಸಲು ಸ್ಪರ್ಧೆ ನಡೆಸಲಾಗಿದೆ. SUV ಹಾಗೂ ಸ್ವರಾಜ್ ಟ್ರಾಕ್ಟರ್ ನಡುವಿನ ಹಗ್ಗ ಜಗ್ಗಾಟ ಅಚ್ಚರಿ ಫಲಿತಾಂಶ ನೀಡಿದೆ.

ಇದನ್ನೂ ಓದಿ: 3ನೇ ಮಹಡಿಯಿಂದ ಕಳೆಗೆ ಬಿತ್ತು ಮರ್ಸಡೀಸ್ ಕಾರು-ಚಾಲಕ ಅಪಾಯದಿಂದ ಪಾರು!

SUV ಕಾರನ್ನ ಇತರ ಕಾರುಗಳಿಗೆ ಹೋಲಿಕೆ ಮಾಡುವುದು ಸರಿ. ಆದರೆ ಇಲ್ಲಿ SUV ಕಾರು ಹಾಗೂ ಸ್ವರಾಜ್ ಟ್ರಾಕ್ಟರ್ ನಡುವೆ ಸ್ಪರ್ಧೆ ಎರ್ಪಡಿಸಲಾಗಿತ್ತು. ಸ್ವರಾಜ್ 744 fe ಟ್ರಾಕ್ಟರ್ ಬರೋಬ್ಬರಿ 3136 ಸಿಸಿ ಡೀಸೆಲ್ ಎಂಜಿನ್ ಹೊಂದಿದೆ. ಜೊತೆಗೆ 45bhp ಪವರ್ ಹೊಂದಿದೆ. ಜೊತೆಗೆ 8 ಸ್ಪೀಡ್ ಗೇರ್ ಹಾಗೂ 2 ರೇರ್ ಸ್ಪೀಡ್ ಗೇರ್ ಹೊಂದಿದೆ. 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್-ಬಜಾಜ್ ಚೇತಕ್ ಹಗ್ಗ ಜಗ್ಗಾಟ - ಗೆದ್ದವರು ಯಾರು?

ಸ್ವರಾಜ್ ಟ್ರಾಕ್ಟರ್ ಹಾಗೂ SUV ನಡುವಿನ ಹಗ್ಗ ಜಗ್ಗಾಟಜಲ್ಲಿ ಆರಂಭದಲ್ಲಿ ಭಾರಿ ಪೈಪೋಟಿ ನೀಡಿ ಟ್ರಾಕ್ಟರ್ ಕೊನೆಗೆ SUV ಮುಂದೆ ಹೋರಾಡಲು ಸಾಧ್ಯವಾಗಲಿಲ್ಲ. ಕಾರಣ ಫೋರ್ಡ್ ಎಂಡೇವರ್ 197 bhp ಪವರ್ ಉತ್ವಾದಿಸಲಿದೆ. ಇದು ಇತರ SUV ಕಾರುಗಳಿಗಿಂತ ಹೆಚ್ಚಾಗಿದೆ. ಹೀಗಾಗಿಯೇ SUV ಕಾರು ಟ್ರಾಕ್ಟರ್ ಶಕ್ತಿಯನ್ನ ಮೀರಿಸಿ ಹೋರಾಟದಲ್ಲಿ ಗೆಲುವು ಸಾಧಿಸಿದೆ.