ಟ್ರ್ಯಾಕ್ಟರ್‌ ರಫ್ತಿನಲ್ಲಿ ಸೊನಾಲಿಕಾ ನಂಬರ್‌ 1

ರೈತರ ಅಚ್ಚು ಮೆಚ್ಚಿನ ಟ್ರ್ಯಾಕ್ಟರ್ ಸೊನಾಲಿಕಾ ಮತ್ತು ಸೊಲಿಸ್ ಇತಿಹಾಸ ನಿರ್ಮಿಸಿದೆ. ರಫ್ತಿನಲ್ಲಿ ಮೊದಲ ಸ್ಥಾನಕ್ಕೇರೋ ಮೂಲಕ ಸೊನಾಲಿಕಾ ಹೊಸ ಸಾಧನೆ ಮಾಡಿದೆ. ಸೊನಾಲಿಕಾ ಟ್ರ್ಯಾಕ್ಟರ್ ವಿಶೇಷತೆ ಏನು? ಈ ಸಾಧನೆಗೆ ಕಾರಣವೇನು? ಇಲ್ಲಿದೆ ವಿವರ.
 

sonalika become number one tractor brand in export vehicle

ನವದೆಹಲಿ(ಆ.28):  ಭಾರತದ ಟ್ರ್ಯಾಕ್ಟರ್‌ ಬ್ರಾಂಡ್‌ ಎಂದೇ ಕರೆಸಿಕೊಳ್ಳುವ ಸೊನಾಲಿಕಾ ಮತ್ತು ಸೊಲಿಸ್‌ ಸಮೂಹ ಐಟಿಎಲ್‌ ಹೊಸ ಸಾಧನೆ ಮಾಡಿದೆ. ಟ್ರ್ಯಾಕ್ಟರ್‌ ರಫ್ತಿನಲ್ಲಿ ನಂಬರ್‌ ವನ್‌ ಸ್ಥಾನಕ್ಕೆ ಏರಿದೆ. ಜುಲೈ 2019ರಲ್ಲಿ ಕಂಪನಿ ಅಪಾರ ಪ್ರಗತಿ ಸಾಧಿಸಿದೆ. ಈ ಕುರಿತು ಐಟಿಎಲ್‌ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ ಡಾ.ದೀಪಕ್‌ ಮಿತ್ತಲ್‌, ‘ಜುಲೈ 2019ರಲ್ಲಿ ಶೇ.108ರಷ್ಟುಮೂರು ಅಂಕಿ ಪ್ರಗತಿ ಸಾಧಿಸುವ ಮೂಲಕ ರಫ್ತಿನಲ್ಲಿ ನಂ.1 ಸ್ಥಾನದಲ್ಲಿದ್ದೇವೆ. ಐಟಿಎಲ್‌ನ ಪ್ರಸ್ತುತ ಕಾರ್ಯ ಸಾಧನೆಯು ಭಾರತದಲ್ಲಿ ಪ್ರಸ್ತುತ ಹಣಕಾಸು ವರ್ಷದಲ್ಲಿ ನಂ.1 ರಫ್ತುದಾರ ಕಂಪನಿಯಾಗಿಸಿದೆ’ ಎನ್ನುತ್ತಾರೆ. ಐಟಿಎಲ್‌ ಎಲ್ಲ ಯೂರೋಪಿಯನ್‌ ಮಾರುಕಟ್ಟೆಗಳಿಗೆ ರಫ್ತು ಮಾಡುವ ಏಕೈಕ ಕಂಪನಿಯಾಗಿದ್ದು ಯೂರೋಪ್‌ನ ಮುಂಚೂಣಿಯ ಭಾರತೀಯ ಬ್ರಾಂಡ್‌ ಆಗಿದೆ.

ಇದನ್ನೂ ಓದಿ: ITLನ ಹೊಸ ಸೊಲಿಸ್‌ ಯನ್ಮಾರ್‌ ಟ್ರ್ಯಾಕ್ಟರ್‌ ಬಿಡುಗಡೆ

ಯುವ ರೈತರನ್ನೇ ಗಮನದಲ್ಲಿಟ್ಟುಕೊಂಡು ಸೊನಾಲಿ ಟ್ರ್ಯಾಕ್ಟರ್‌ ನಿರ್ಮಿಸಲಾಗಿದೆ. ಆ್ಯಪ್‌ ಮೂಲಕವೇ ಇಂಧನ ಎಷ್ಟಿದೆ ಎಂದು ಪರೀಕ್ಷಿಸಬಹುದಾದ, ಇಂಧನ ಕಳ್ಳತನ ಆಗಿದೆಯೋ ಎಂದು ಚೆಕ್‌ ಮಾಡಬಹುದಾದ ಅತ್ಯಾಧುನಿಕ ತಂತ್ರಜ್ಞಾನ ಈ ಟ್ರ್ಯಾಕ್ಟರ್‌ನಲ್ಲಿದೆ. ಸೊನಾಲಿಕಾ ಭಾರತದ ಪ್ರಮುಖ ಟ್ರ್ಯಾಕ್ಟರ್‌ ತಯಾರಿಕಾ ಕಂಪನಿಗಳಲ್ಲಿ ಒಂದು. ಈಗಾಗಲೇ ಸಾಕಷ್ಟುಕೃಷಿಕರ ಗಮನ ಸೆಳೆದಿರುವ ಈ ಕಂಪನಿ ಸದ್ಯ ಹೊಸ ತಲೆಮಾರಿನ ರೈತರನ್ನು ಆಕರ್ಷಿಸುವಂತಹ ಟೈಗರ್‌ ಟ್ರ್ಯಾಕ್ಟರ್‌, 28 ಎಚ್‌ಪಿಯಿಂದ 65 ಎಚ್‌ಪಿ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: ಸ್ವರಾಜ್ ಟ್ರಾಕ್ಟರ್-ಫೋರ್ಡ್ ಎಂಡೇವರ್ ನಡುವೆ ಸ್ಪರ್ಧೆ-ಅಚ್ಚರಿ ಫಲಿತಾಂಶ!

ಈ ಟ್ರ್ಯಾಕ್ಟರ್‌ನ ವಿಶೇಷತೆ ಏನೆಂದರೆ ಸೊನಾಲಿಕಾ ಸ್ಕೈ ಸ್ಮಾರ್ಟ್‌ ಎಂಬ ಆ್ಯಪ್‌. ಈ ಆ್ಯಪ್‌ ಮೂಲಕ ರೈತರು ಟ್ರ್ಯಾಕ್ಟರ್‌ನ ಪ್ರತಿಯೊಂದು ಆಗುಹೋಗುಗಳನ್ನು ತಿಳಿದುಕೊಳ್ಳಬಹುದು. ಟ್ರ್ಯಾಕ್ಟರ್‌ ಎಲ್ಲಿದೆ ಎಂದು ತಿಳಿದುಕೊಳ್ಳಬಹುದಾದ ಸಾಧ್ಯತೆಯೂ ಈ ಆ್ಯಪ್‌ನಲ್ಲಿದೆ. ಇದರ ವಿನ್ಯಾಸವೂ ವಿಶಿಷ್ಟ. ಯುರೋಪಿನಲ್ಲಿ ವಿನ್ಯಾಸಗೊಂಡ ಟ್ರ್ಯಾಕ್ಟರ್‌ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.

Latest Videos
Follow Us:
Download App:
  • android
  • ios