ನವದೆಹಲಿ(ಜು.11): ಜಪಾನ್ ಆಟೋಮೇಕರ್ ಸುಜುಕಿ ಇದೀಗ ನೂತನ BS6 ಇಂಟ್ರುಡರ್ ಬೈಕ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಅತೀ ಕಡಿಮೆ ಬೆಲೆ ಏರಿಕೆಯೊಂದಿಗೆ ನೂತನ ಬೈಕ್ ಬಿಡುಗಡೆಯಾಗಿದೆ. ಬಹುತೇಕ ಎಲ್ಲಾ BS6 ಬೈಕ್ ಸ್ಕೂಟರ್ ಬೆಲೆ ಸರಾಸರಿ 6 ರಿಂದ 10,000 ರೂಪಾಯಿ ಹೆಚ್ಚಳವಾಗಿದೆ. ಆದರೆ ಸುಜುಕಿ ಇಂಟ್ರುಡರ್ 150 ಬೈಕ್ ‌ಬೆಲೆಯಲ್ಲಿ ಕೇವಲ 2,000 ರೂಪಾಯಿ ಮಾತ್ರ ಏರಿಕೆಯಾಗಿದೆ.

ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ-ಬರುತ್ತಿದೆ ಸುಜುಕಿ ಇಂಟ್ರುಡರ್ 250!

BS6 ಸುಜುಕಿ ಇಂಟ್ರುಡರ್ 150  ಬೈಕ್ ಬೆಲೆ 1.22 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಈ ಮೂಲಕ ಸುಜುಕಿ ಇಂಟ್ರುಡರ್ ಪ್ರತಿಸ್ಪರ್ಧಿ ಬೈಕ್‌ಗಿಂತ ದುಬಾರಿಯಾಗಿದೆ. ಬಜಾಜ್ ಅವೆಂಜರ್ 160 ಬೈಕ್ ಬೆಲೆ 95,000 ರೂಪಾಯಿ(ಎಕ್ಸ್ ಶೋ ರೂಂ). 

ಸುಜುಕಿ ಇಂಟ್ರುಡರ್ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ-ಬೆಲೆ ಎಷ್ಟು?..

BS6 ಸುಜುಕಿ ಇಂಟ್ರುಡರ್ 150  ಬೈಕ್‌ನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಟ್ರೈಆಂಗಲ್ ಹೆಡ್‌ಲ್ಯಾಂಪ್ಸ್, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕನ್ಸೋಲ್, ಸಿಂಗಲ್ ಚಾನೆಲ್ ABS, LED ಟೈಲ್‌ಲ್ಯಾಂಪ್ಸ್ ಹಾಗೂ ಆರಾಮದಾಯಕ ರೈಡಿಂಗ್‌ಗೆ ಪೂರಕವಾಗಿ ನಿರ್ಮಾಣ ಮಾಡಲಾಗಿದೆ.

ಇಂಟ್ರುಡರ್ ಬೈಕ್ ಇಂಧನ ಸಾಮರ್ಥ್ಯ 11 ಲೀಟರ್. ಇನ್ನು BS4 ಬೈಕ್‌ಗಿಂತ ನೂತನ ಬೈಕ್ 4 ಕೆಜಿ ಕರ್ಬ್ ತೂಕ ಹೆಚ್ಚಾಗಿದೆ. ಇದೀಗ ನೂತನ ಬೈಕ್ ಕರ್ಬ್ ತೂಕ 152 ಕೆಜಿಯಾಗಿದೆ.  ಇಂಟ್ರುಡರ್ ಜೊತೆಗೆ ಸುಜುಕಿ ಜಿಕ್ಸರ್ ಬೈಕ್ ಬೆಲೆ ಕೂಡ ಹೆಚ್ಚಿಸಲಾಗಿದೆ.  ಇದೀಗ ಜಿಕ್ಸರ್ ಬೆಲೆ 1.14 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಗೆ ಏರಿಕೆಯಾಗಿದೆ.