Asianet Suvarna News Asianet Suvarna News

ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ-ಬರುತ್ತಿದೆ ಸುಜುಕಿ ಇಂಟ್ರುಡರ್ 250!

ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಇದೀಗ ಸುಜುಕಿ ಇಂಟ್ರುಡರ್ ಬೈಕ್ ಬಿಡುಗಡೆಯಾಗುತ್ತಿದೆ. 250cc ಬೈಕ್ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Royal enfield competitor suzuki will intruder 250cc bike in India soon
Author
Bengaluru, First Published May 25, 2019, 5:58 PM IST

ನವದೆಹಲಿ(ಮೇ.25): ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಹಲವು ಬೈಕ್‌ಗಳು ಮಾರುಕಟ್ಟೆಯಲ್ಲಿದೆ. ಇದರಲ್ಲಿ ಜಾವಾ ಮೋಟಾರ್‌ ಬೈಕ್ ತೀವ್ರ ಪೈಪೋಟಿ ನೀಡುತ್ತಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಮತ್ತೊಂದು ಪ್ರತಿಸ್ಪರ್ಧಿ ಹುಟ್ಟಿಕೊಂಡಿದೆ. ಇದೀಗ ಸುಜುಕಿ ಕಂಪನಿ ಇಂಟ್ರುಡರ್ ಬೈಕನ್ನು 250 CC ಎಂಜಿನ್‌ನಲ್ಲಿ ಬಿಡುಗಡೆ ಮಾಡುತ್ತಿದೆ. 

ಇದನ್ನೂ ಓದಿ: ಗೆಲುವಿನ ಬೆನ್ನಲ್ಲೇ ಮೋದಿ ಹೊಸ ಯೋಜನೆ-2025 ರಿಂದ ಸಿಗಲ್ಲ ಪೆಟ್ರೋಲ್ ದ್ವಿಚಕ್ರವಾಹನ!

ಸದ್ಯ ಸುಜುಕಿ ಇಂಟ್ರುಡರ್ 150CC ಬೈಕ್ ಮಾರುಕಟ್ಟೆಯಲ್ಲಿದೆ. ಇದೀಗ ಇದೇ ಬೈಕ್ 250cc ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ಬಿಡುಗಡೆಯಾಗಲಿದೆ. ಕ್ರೂಸರ್ ಬೈಕ್ ವಿಭಾಗದಲ್ಲಿ ಇಂಟ್ರುಡರ್ ಬೈಕ್ ಹೆಚ್ಚು ಸ್ಟೈಲೀಶ್ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ 250Cc ಬೈಕ್ ಬಿಡುಗಡೆ ಮಾಡೋ ಮೂಲಕ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಬೈಕ್‌ಗೆ ಪೈಪೋಟಿ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ಬಿಡುಗಡೆಗೆ ರೆಡಿಯಾಗಿದೆ ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್!

ಸುಜುಕಿ ಇಂಟ್ರುಡರ್  ಬೈಕ್ ಬೆಲೆ 1.8 ಲಕ್ಷ ಎಂದು ಅಂದಾಜಿಸಲಾಗಿದೆ. ಇನ್ನು  250 cc, ಸಿಂಗಲ್ ಸಿಲಿಂಡರ್ 4  ಸ್ಟ್ರೋಕ್ ಎಂಜಿನ್ ಹೊಂದಿದ್ದು, 26 Bhp ಪವರ್ ಹಾಗೂ 22.9 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ವಿನ್ಯಾಸದಲ್ಲೂ ಕೆಲ ಬದಲಾವಣೆ ಮಾಡೋ ಸಾಧ್ಯತೆ ಇದೆ.

Follow Us:
Download App:
  • android
  • ios