ಸುಜುಕಿ ಇಂಟ್ರುಡರ್ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ-ಬೆಲೆ ಎಷ್ಟು?
ದೀಪಾಪಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಪ್ರಯುಕ್ತ ಸುಜುಕಿ ಮೋಟಾರ್ ಸೈಕಲ್ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಸುಜುಕಿ ಇಂಟ್ರುಡರ್ ಸ್ಪೆಷಲ್ ಎಡಿಶನ್ ಬೈಕ್ ವಿಶೇಷತೆ, ಬೆಲೆ ಹಾಗೂ ಇತರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು(ಸೆ.28): ಸುಜುಕಿ ಮೋಟರ್‌ಸೈಕಲ್ ಇಂಡಿಯಾ ಇದೀಗ ಸ್ಪೆಷಲ್ ಎಡಿಶನ್ ಇಂಟ್ರುಡರ್ ಬೈಕ್ ಬಿಡುಗಡೆ ಮಾಡಿದೆ. ಮುಂಬರುವ ಸಾಲು ಸಾಲು ಹಬ್ಬದ ಪ್ರಯುಕ್ತ ಎರಡು ವೇರಿಯೆಂಟ್‌ಗಳಲ್ಲಿ ಇಂಟ್ರುಡರ್ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ.
ಇಂಟ್ರುಡರ್ SP ಹಾಗೂ ಇಂಟ್ರುಡರ್ FI SP ವೇರಿಯೆಂಟ್‌ಗಳಲ್ಲಿದೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಇಂಟ್ರುಡರ್ ಸ್ಪೆಷಲ್ ಎಡಿಶನ್ ಬೈಕ್ ಮೆಟಲ್ ಬ್ಲಾಕ್ ಜೊತೆ ರೆಡ್ ಆಸೆಂಟ್ ಡಿಸೈನ್ ಹೊಂದಿದೆ. ಅತ್ಯಾಕರ್ಷಕ ಲುಕ್ ಗ್ರಾಹಕರನ್ನ ಮೋಡಿ ಮಾಡಲಿದೆ.
ಸ್ಪೆಷಲ್ ಎಡಿಶನ್ ಬೈಕ್ ಬೆಲೆ 1 ಲಕ್ಷ ಹಾಗೂ 1.07 ಲಕ್ಷ(ದೆಹಲಿ ಎಕ್ಸ್ ಶೋ ರೂಂ). ಸ್ಪೆಷಲ್ ಎಡಿಶನ್ ಬೈಕ್ ಇಂಜಿನ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. 154.9 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್‌ಡ್, 4 ಸ್ಟ್ರೋಕ್ ಇಂಜಿನ್ ಹೊಂದಿದೆ.
5 ಸ್ವೀಡ್ ಗೇರ್ ಬಾಕ್ಸ್ ಜೊತೆಗೆ ಎಬಿಎಸ್ ಬ್ರೇಕ್ ಹೊಂದಿದೆ. ಈ ಮೂಲಕ ಸುಜುಕಿ ಇಂಟ್ರುಡರ್ ಸ್ಪೆಷಲ್ ಎಡಿಶನ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಸ್ವಿಂಗ್ ಆರ್ಮ್ ಟೈಪ್ ಮೋನೋ ಶಾಕ್ ಸಸ್ಪೆನ್ಶನ್ ಹೊಂದಿದೆ.